ಐಟಿ ಕಂಪನಿಯಿಂದ ಸಿಹಿ ಸುದ್ದಿ

ಬೆಂಗಳೂರು, ಫೆ. 26: ಪ್ಯಾರೀಸ್ ಮೂಲದ ಕ್ಯಾಪ್ ಜೆಮಿನಿ ಕಂಪೆನಿ ತನ್ನ ಉದ್ಯೋಗಿಗಳಿಗೆ  ಕೊರೋನಾ ಕಾಲದಲ್ಲೂ ಸಂಬಳ ಏರಿಕೆ ಮಾಡಿತ್ತು. ಇದೀಗ  ಮತ್ತೊಂದು ಸಿಹಿ ಸುದ್ದಿ ನೀಡಿದೆ. 2021ರಲ್ಲಿ ಸುಮಾರು 30,000ಕ್ಕೂ ಅಧಿಕ ಮಂದಿಯನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದೆ.

ಐಟಿ ರಫ್ತು ಸೇವಾ ಸಂಸ್ಥೆ ಕ್ಯಾಪ್ ಜೆಮಿನಿ ಕೊರೋನಾ ಸಂದರ್ಭದಲ್ಲೂ ಉತ್ತಮ ಪ್ರಗತಿ ಕಂಡಿದ್ದು, ಹೊಸ ನೇಮಕಾತಿಗೆ ಮುಂದಾಗಿದೆ. 2021ರ ಆರ್ಥಿಕ ವರ್ಷಕ್ಕೆ ಶೇ 7 ರಿಂದ 9ರಷ್ಟು ಆದಾಯ ಪ್ರಗತಿ ಮಾರ್ಗದರ್ಶನ ನೀಡಲಾಗಿದೆ ಎಂದು ಕ್ಯಾಪ್ ಜೆಮಿನಿ ಭಾರತದ ಮುಖ್ಯ ಕಾರ್ಯಕಾರಿ ಅಧಿಕಾರಿ ಅಶ್ವಿನ್ ವೈ ಅವರು ಹೇಳಿದ್ದಾರೆ.

ಈ ವರ್ಷ (2021) ಸುಮಾರು 30,000 ಮಂದಿ ನೇಮಕವಾಗುತ್ತಿದ್ದು, ಫ್ರೆಶರ್ಸ್, ಮಧ್ಯಮ ಸ್ತರದ ಸಾಫ್ಟ್ ವೇರ್ ಇಂಜಿನಿಯರ್ಸ್ ಗಳಿಗೆ ಆದ್ಯತೆ ನೀಡಲಾಗುತ್ತದೆ. ಹೊಸ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಪೂರಕವಾಗಿ ನೇಮಕಾತಿ ನಡೆಯಲಿದೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ 1.2 ಲಕ್ಷ ಉದ್ಯೋಗಿಗಳನ್ನು ಕ್ಯಾಪ್ ಜೆಮಿನಿ ಹೊಂದಿದೆ. ಕಳೆದ ವರ್ಷ 12,000 ಮಂದಿಯನ್ನು ಭಾರತದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.

ಕ್ಲೌಡ್ ಆಧಾರಿತ ಸೇವೆ, ರಿಮೋಟ್ ತಂತ್ರಜ್ಞಾನ ಸೇವೆ, ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಡಿಜಿಟಲ್ ಹಾಗೂ ಕ್ಲೌಡ್ ತಂತ್ರಜ್ಞಾನ ಕೌಶಲ್ಯ ಹೊಂದಿದವರಿಗೆ ಬೇಡಿಕೆ ಹೆಚ್ಚಿದೆ ಎಂದು ಮಾನವ ಸಂಪನ್ಮೂಲ ವಿಭಾಗದ ಅನಿಲ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಹೀಥ್ರೂ ವಿಮಾನ ನಿಲ್ದಾಣ, ಏರ್ ಬಸ್ ಸ್ಕೈವೈಸ್, ಮರ್ಸೀಡಿಸ್, ಬೆಂಜ್ ಮುಂತಾದ ಸಂಸ್ಥೆಗಳನ್ನು ಗ್ರಾಹಕರಾಗಿ ಕ್ಯಾಪ್ ಜೆಮಿನಿ ಹೊಂದಿದೆ.

Exit mobile version