ಹೃದಯ ಸ್ತಂಭನವಾಗುವ 24 ಗಂಟೆ ಮೊದಲು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..! ಇರಲಿ ಎಚ್ಚರ..!

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಹೃದಯ ಸ್ತಂಭನದಿಂದಾಗಿಯೇ ಸಾವನ್ನಪ್ಪುತ್ತಿದ್ದಾರೆ. ಹದಿಹರೆಯದ ಯುವಕ-ಯುವತಿಯರು (symptoms of cardiac arrest) ಕೂಡಾ ಈ ಹೃದಯ

ಸ್ತಂಭನದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ ಹೃದಯ ಸ್ತಂಭನ ಆಗುವುದಕ್ಕೂ 24 ಗಂಟೆಗಳ ಮುಂಚೆ ಅನೇಕ ಲಕ್ಷಣಗಳು ಗೋಚರಿಸುತ್ತವೆ. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ

ಪಡೆದರೆ, ಸಾವಿನಿಂದ ಪಾರಾಗಬಹುದು. ಹೀಗಾಗಿ ಹೃದಯ ಸ್ತಂಭನ ಆಗುವ 24 ಗಂಟೆಗಳ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು ವಿವರ ಇಲ್ಲಿದೆ ನೋಡಿ.

ಹೃದಯ ಸ್ತಂಭನ ಎಂದರೇನು..?
• ಹೃದಯ ಸ್ತಂಭನ ಎನ್ನುವುದು ವ್ಯಕ್ತಿಯ ಹೃದಯವು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುವ ಸ್ಥಿತಿಯಾಗಿದೆ. ಈ ವೇಳೆ ತುರ್ತು ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಸಾವು ಸಂಭವಿಸುತ್ತದೆ.

• ಸಂಶೋಧನೆಯ ಪ್ರಕಾರ, ಹೃದಯ ಸ್ತಂಭನಕ್ಕೆ ಒಂದು ದಿನ ಮೊದಲು ಕೆಲವು ಚಿಹ್ನೆಗಳು ಕಂಡುಬರುತ್ತವೆ. ಅದರಲ್ಲಿ ಮುಖ್ಯವಾಗಿ ಎದೆನೋವು. ಯಾವುದೇ ಶ್ರಮದಾಯಕ ಕೆಲಸಗಳಲ್ಲಿ ಮಾಡದೇ ಇದ್ದರೂ

ಎದೆನೋವು ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ಎದೆಯ ಭಾಗದಲ್ಲಿ ನೋವು ಕಂಡು ಬರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ಇಸಿಜಿ (ECG) ಮಾಡಿಸಿಕೊಳ್ಳುವುದು ಉತ್ತಮ. ಹೃದ್ರೋಗ

ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು(symptoms of cardiac arrest) ಪಡೆದುಕೊಳ್ಳಬೇಕು.

ಚಂದ್ರನಲ್ಲಿ ಚಿನ್ನ: ಚಂದ್ರನ ಮೇಲೆ ಗಂಧಕ ಪತ್ತೆ ಹಚ್ಚಿದ ಪ್ರಜ್ಞಾನ್ ರೋವರ್, ದ್ರವರೂಪದ ಚಿನ್ನ ಇರೋ ಸಾಧ್ಯತೆ !

• ಹೃದಯ ಬಡಿತ ವೇಗವಾಗುವುದು ಅಥವಾ ಕಡಿಮೆಯಾಗುವುದು ಹೃದಯ ಸ್ತಂಭನ ಆಗುವ ಸೂಚನೆ ನೀಡುತ್ತದೆ. ಹೀಗಾಗಿ ಹೃದಯದ ಬಡಿತದಲ್ಲಿ ಸಾಕಷ್ಟು ಏರಿಳಿತ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ.

• ಹೃದಯ ಸ್ತಂಭನ ಆಗುವುದಕ್ಕೂ ಮೊದಲು, ಉಸಿರಾಟದಲ್ಲಿ ಏರುಪೇರು ಉಂಟಾಗುತ್ತದೆ. ಯಾವುದೇ ಕೆಲಸ ಮಾಡದೇ ಇದ್ದರೂ, ಸ್ವಲ್ಪ ನಡೆದರೂ ಉಸಿರಾಡುವುದಕ್ಕೆ ತೊಂದರೆ ಉಂಟಾಗುತ್ತದೆ.

ಶ್ವಾಸಕೋಶ ಮತ್ತು ಹೃದಯವು ಶಕ್ತಿಯನ್ನು ಒದಗಿಸಲು ಹೆಚ್ಚು ಶ್ರಮಿಸುವುದರಿಂದ ಈ ರೀತಿ ಆಗುತ್ತದೆ. ಹೀಗಾಗಿ ಕೂಡಲೇ ಚಿಕಿತ್ಸೆ ಪಡೆಯುವುದು ಉತ್ತಮ.

• ನಿರಂತರವಾಗಿ ತಲೆತಿರುಗುವಿಕೆ ಕಂಡು ಬಂದರೆ ಅದು ಹೃದಯ ಅನಾರೋಗ್ಯದಿಂದ ಬಳಲುತ್ತಿರುವ ಅಪಾಯವನ್ನು ಸೂಚಿಸುತ್ತದೆ. ಹೀಗಾಗಿ ತಲೆತಿರುಗುವಿಕೆ ಉಂಟಾಗುತ್ತಿದ್ದರೆ, ನರರೋಗ ಅಥವಾ ಹೃದ್ರೋಗ ತಜ್ಞರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಬೇಕು.

• ಹೃದಯ ಸ್ತಂಭನ ಆಗುವ ಮುನ್ನ ನಿರಂತರವಾಗಿ ಹೃದಯ ಬಡಿತದಲ್ಲಿನ ಏರಿಳಿತದಿಂದಾಗಿ ವ್ಯಕ್ತಿ ಪ್ರಜ್ಞಾಹೀನರಾಗಬಹುದು. ಇದನ್ನು ನಿರ್ಲಕ್ಷ್ಯ ಮಾಡಬಾರದು. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ

ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

Exit mobile version