Bengaluru : ಚಂದ್ರಯಾನ-3 (Chandrayaan-3) ಮಿಷನ್ನ ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ (gold in moon) ಬಳಿ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು
ನಿಸ್ಸಂದಿಗ್ಧವಾಗಿ ದೃಢಪಡಿಸಿದೆ ಎಂದು ಭಾರತೀಯ ಬಾಹ್ಯಾಕಾಶ (gold in moon) ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಸಾಮಾಜಿಕ ಮಾಧ್ಯಮ ಜಾಲತಾಣ ಟ್ವೀಟರ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಇಸ್ರೋ, ಪ್ರಜ್ಞಾನ್ ರೋವರ್ (Pragyan Rover) ನಡೆಸುತ್ತಿರುವ ವೈಜ್ಞಾನಿಕ ಪ್ರಯೋಗಗಳು ಮುಂದುವರೆದಿದ್ದು,
ರೋವರ್ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ (Laser-Induced Breakdown Spectroscopy) ಉಪಕರಣವು ಚಂದ್ರನ ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ
ಸಲ್ಫರ್ (Sulphur) ಇರುವಿಕೆಯನ್ನು ನಿಸ್ಸಂದಿಗ್ಧವಾಗಿ ಖಚಿತಪಡಿಸುತ್ತದೆ. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಜಲಜನಕದ ಹುಡುಕಾಟವೂ ನಡೆಯುತ್ತಿದೆ ಎಂದು ಇಸ್ರೋ (ISRO) ಸಂಸ್ಥೆ ಹೇಳಿದೆ.
ಇನ್ನು ಪ್ರಗ್ಯಾನ್ ರೋವರ್ ಅಲ್ಯೂಮಿನಿಯಂ (Aluminum), ಕ್ಯಾಲ್ಸಿಯಂ, ಫೆರಸ್ (Ferrous), ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್ (Manganese), ಸಿಲಿಕಾನ್ ಮತ್ತು ಆಮ್ಲಜನಕವನ್ನು
2050ರ ವೇಳೆಗೆ ಒಂದು ಶತಕೋಟಿ ಜನರಿಗೆ ಅಸ್ಥಿಸಂಧಿವಾತ ಸಮಸ್ಯೆ : ಲ್ಯಾನ್ಸೆಟ್ ವರದಿ
ನಿರೀಕ್ಷಿಸಿದಂತೆ ಪತ್ತೆ ಮಾಡಿದೆ. ಲೇಸರ್-ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಒಂದು ವೈಜ್ಞಾನಿಕ ತಂತ್ರವಾಗಿದ್ದು, ಖನಿಜಗಳ ಸಂಯೋಜನೆಯನ್ನು ತೀವ್ರವಾದ ಲೇಸರ್ ಪಲ್ಸ್ನೊಂದಿಗೆ
(Laser Pulse) ಬಹಿರಂಗಪಡಿಸುವ (gold in moon) ಮೂಲಕ ಅಳೆಯುತ್ತದೆ.

ಚಂದ್ರಯಾನ-3 (Chandrayaan-3) ಚಂದ್ರನ ದಕ್ಷಿಣ ಧ್ರುವದಲ್ಲಿನ ಮಣ್ಣಿನ ತಾಪಮಾನವನ್ನು ವಿವರಿಸಿದ ಕೆಲವು ದಿನಗಳ ನಂತರ ಈ ಮಾಹಿತಿ ಹೊರಬಿದ್ದಿದೆ. ಸೌರಶಕ್ತಿ ಚಾಲಿತ ಪ್ರಗ್ಯಾನ್ ರೋವರ್
ಮತ್ತು ವಿಕ್ರಮ್ ಲ್ಯಾಂಡರ್ (Vikram lander) ವೈಜ್ಞಾನಿಕ ಪ್ರಯೋಗಗಳ ಸರಣಿಯನ್ನು ಮುಂದುವರೆಸುತ್ತಿರುವುದರಿಂದ, ಮಿಷನ್ ಇನ್ನೂ ಏಳು ದಿನಗಳವರೆಗೆ ನಡೆಯುತ್ತದೆ. ವಿಕ್ರಂ ಲ್ಯಾಂಡರ್ನಿಂದ,
ಪ್ರಜ್ಞಾನ್ ರೋವರ್ ಸರಿಸುಮಾರು ಎಂಟು ಮೀಟರ್ ದೂರವನ್ನು ಕ್ರಮಿಸಿದೆ ಮತ್ತು ಶಿವ ಶಕ್ತಿ ಲ್ಯಾಂಡಿಂಗ್ ಸೈಟ್ನ (Site) ಸುತ್ತಲಿನ ಪ್ರದೇಶವನ್ನು ಅನ್ವೇಷಿಸಲು ತೊಡಗಿದೆ.
ಈಗಾಗಲೇ ಚಂದ್ರನ ಮೇಲ್ಮೈ ತಾಪಮಾನವನ್ನು ನಿಖರವಾಗಿ ಗ್ರಾಫ್ (Graf) ಮೂಲಕ ಪತ್ತೆ ಮಾಡಿದೆ. ಚಂದ್ರನ ಧೂಳು ಮತ್ತು ಕಲ್ಲುಗಳ ರಾಸಾಯನಿಕ ಸಂಯೋಜನೆಯನ್ನು ಶೋಧನೆ ಮಾಡುವುದು ಪ್ರಜ್ಞಾನ್
ರೋವರ್ನ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ಈ ಸಂಶೋಧನೆಯು ಚಂದ್ರನ ಭೂವಿಜ್ಞಾನ ಮತ್ತು ವಾತಾವರಣದ ಬಗ್ಗೆ ಅಗತ್ಯವಾದ ಮಾಹಿತಿಯನ್ನು ನೀಡುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನು ಚಂದ್ರನ ಮೇಲೆ ದ್ರವರೂಪದ ಚಿನ್ನ ಇರುವ ಸಾಧ್ಯತೆಗಳ ಕುರಿತು ಕೂಡಾ ಶೋಧನೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮಹೇಶ್