ಟಿ20 ವಿಶ್ವಕಪ್‌ಗೆ ಹೊಸ ಜರ್ಸಿ ಬಿಡುಗಡೆ ಮಾಡಿದ ಬಿಸಿಸಿಐ

ನವದೆಹಲಿ ಅ 14ಟಿ 20 ವಿಶ್ವಕಪ್ 2021 ದುಬೈನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಈ ಪಂದ್ಯಾವಳಿಗೆ ಟೀಮ್ ಇಂಡಿಯಾ ಈಗಾಗಲೇ ತನ್ನ ತಂಡವನ್ನು ಘೋಷಿಸಿದೆ. ಬುಧವಾರ ಬಿಸಿಸಿಐ ಟಿ 20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಜರ್ಸಿಯನ್ನು ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾದ ಆಟಗಾರರು ಈ ನೀಲಿ ಜರ್ಸಿಯನ್ನು ಧರಿಸಿ ಅದ್ಭುತವಾಗಿ ಮಿಂಚುತ್ತಿದ್ದಾರೆ 

ಜರ್ಸಿಯನ್ನು ಬಿಡುಗಡೆ ಮಾಡಿದ ಬಿಸಿಸಿಐ :  
ಬಿಸಿಸಿಐ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದು, ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಜರ್ಸಿಯ ಬಗೆಗಿನ ಪೋಸ್ಟ್ ಆಗಿದ್ದು, ಈ ಪೋಸ್ಟ್‌ನಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಆಟಗಾರರು ಹೊಸ ಜರ್ಸಿ ಧರಿಸಿರುವುದು ಕಂಡುಬಂದಿದೆ. ಈ ನೀಲಿ ಜರ್ಸಿಯ ಪ್ರಾಯೋಜಕರು ಬೈಜುಸ್ ಕಂಪನಿಯು ಕಾರ್ಯ ನಿರ್ವಹಿಸುತ್ತಿದೆ.

ಪಾಕಿಸ್ತಾನ ವಿರುದ್ದ ಭಾರತದ ಮೊದಲ ಪಂದ್ಯ :
ಭಾರತ ತಂಡ ಅಕ್ಟೋಬರ್ 24 ರಂದು ಟಿ 20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ತಂಡದ ವಿರುದ್ದ ಸೆಣೆಸಲಿದೆ. ಯುಎಇ ಮತ್ತು ಒಮನ್ ನಲ್ಲಿ ಅಕ್ಟೋಬರ್ 17 ರಿಂದ ವಿಶ್ವಕಪ್ ಆರಂಭವಾಗುತ್ತಿದೆ. 

Exit mobile version