T20 ವಿಶ್ವಕಪ್‌ ಗೆದ್ದ ಭಾರತೀಯ ಕ್ರಿಕೆಟ್‌ ತಂಡ; ಸುದ್ದಿಯೂ ಇಲ್ಲ ಸದ್ದೂ ಇಲ್ಲ ಯಾಕೆ ?

ಭಾರತೀಯ ಅಂಧರ ಕ್ರಿಕೆಟ್‌ ತಂಡ(Cricket team) T20 ಕ್ರಿಕೆಟ್‌ ವಿಶ್ವಕಪನ್ನು ಸತತ ಮೂರನೇ ಬಾರಿಗೆ ಗೆದ್ದು ಇತಿಹಾಸ ಸೃಷ್ಟಿಸಿದೆ. ಕಳೆದ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ(India) ಹಾಗೂ ಬಾಂಗ್ಲದೇಶಗಳ ನಡುವೆ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ಬಾಂಗ್ಲದೇಶವನ್ನು ಸೋಲಿಸಿ ವಿಶ್ವಕಪ್‌ ಗೆದ್ದು ಹೊಸ ದಾಖಲೆ ಬರೆಯಿತು.

ಆದ್ರೆ ಈ ಸಾಧನೆ ಎಲ್ಲೂ ಸುದ್ದಿಯೂ ಆಗಿಲ್ಲ ಸದ್ದು ಮಾಡಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ? ವಿಶ್ವಕಪ್(World cup) ಗೆದ್ದಿದ್ದು ಭಾರತದ ಅಂಧರ ಕ್ರಿಕೆಟ್‌ ತಂಡ.

ಹಾಗಾಗಿ ಇಡೀ ದೇಶವೇ ಹೆಮ್ಮೆ ಪಡುವಂಥಾ ಸಾಧನೆಯನ್ನು ನಮ್ಮ ಅಂಧ ಕ್ರಿಕೆಟ್‌ ಕಲಿಗಳು ಮಾಡಿದ್ರೂ ಅವರ ಸಾಧನೆಯನ್ನು ಯಾರೂ ಗುರುತಿಸದೇ ಇರೋದು ಒಂದು ದುರಂತವೇ ಸರಿ.

ಭಾರತೀಯರ ಈ ಧೋರಣೆಯ ಬಗ್ಗೆ ನೆಟ್ಟಿಗರು ಭಾರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ನಡೆದ T20 ಪಂದ್ಯದಲ್ಲಿ ಭಾರತೀಯ ತಂಡ ಬಾಂಗ್ಲಾದೇಶ(Bangladesh)ವನ್ನು 120 ರನ್‌ಗಳಿಂದ ಸೋಲಿಸಿತು.

ಟಾಸ್ ಗೆದ್ದ ಭಾರತದ ನಾಯಕ ಅಜಯ್ ಕುಮಾರ್ ರೆಡ್ಡಿ(Ajay Kumar Reddy) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಅವರ ತಂಡ ಅಂತಿಮವಾಗಿ ಬಾಂಗ್ಲಾದೇಶಕ್ಕೆ 277 ರನ್‌ಗಳ ಅಸಾಧಾರಣ ಗುರಿಯನ್ನು ಪ್ರದರ್ಶನ ಮಾಡಿ ಗೆಲುವಿನ ನಗೆ ಬೀರಿತು.

ಇದನ್ನೂ ನೋಡಿ : https://fb.watch/hA-Lq3P_c0/ ಕೊರೊನಾ ರಿಟರ್ನ್ಸ್ ಎಚ್ಚರಿಕೆ ! Alert ! Corona Returns.

ಹಾಗೂ ಆಟಗಾರ ಸುನಿಲ್ ರಮೇಶ್ರವರನ್ನು ಪಂದ್ಯಶ್ರೇಷ್ಠ(Man of the Match) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಅವರು ಅಂಧ ವಿಜೇತರ ತಂಡಕ್ಕೆ ಮತ್ತು ರನ್ನರ್ಸ್ ಅಪ್ ತಂಡಕ್ಕೆ ಟ್ರೋಫಿಗಳನ್ನು ನೀಡಿದರು.


ಭಾರತದ ಕ್ರಿಕೆಟ್ ಅಂಧ ಆಟಗಾರರ ಅಪ್ಪುಗೆಯ ನೃತ್ಯದ ವೀಡಿಯೊ ಪ್ರೇಕ್ಷಕರನ್ನು ಹುರಿದುಂಬಿಸುವಂತೆ ಮಾಡಿದ್ದು, ಈ ವೀಡಿಯೊ ಭಾರೀ ವೈರಲ್(Viral) ಆಗುತ್ತಿದೆ.

ಇದೀಗಾ ಈ ಗೆಲುವಿನ ವೀಡಿಯೊ ಕ್ಲಿಪ್ ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ.

ಭಾರತೀಯ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡವು BCCI ಯೊಂದಿಗೆ ಸೇರ್ಪಡೆಯಾಗದೆ. ಜೊತೆಗೆ ಈ ಕ್ರಿಕೆಟ್ ತಂಡವು ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (CABI) ನೊಂದಿಗೆ ಸಂಯೋಜನೆಯಾಗಿ ಆಟ ಆಡುತ್ತೆದ್ದಾರೆ.

ಇದರೊಂದಿಗೆ ವಿಕಲಚೇತನ ಕ್ರಿಕೆಟಿಗರಿಗೂ ಕೂಡ ಬಿಸಿಸಿಐ ಬೆಂಬಲ ನೀಡಬೇಕು ಎಂದು ಬೇಡಿಕೆಗಳು ಹೆಚ್ಚಾಗಿ ಕೇಳಿಬರುತ್ತಿದೆ.

ಸಿಎಬಿಐ ಆಟಗಾರರು ಇನ್ನೂ ಬಿಸಿಸಿಐ ಅಥವಾ ಕ್ರೀಡಾ ಸಚಿವಾಲಯದಿಂದ ಬೆಂಬಲವನ್ನು ಪಡೆದಿಲ್ಲ ಎಂದು ಅಂಧರ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಹೇಳಿಕೊಂಡಿದ್ದಾರೆ.

ಅಂಧರ ಕ್ರಿಕೆಟ್‌ನ ನೀತಿ ನಿಯಮಗಳನ್ನು ವಿಶ್ವ ಅಂಧರ ಕ್ರಿಕೆಟ್ ಮಂಡಳಿ ರೂಪಿಸಿದೆ. ಅಂಧರ ಕ್ರಿಕೆಟ್‌ನಲ್ಲಿ, ಪ್ರತಿ ತಂಡದಲ್ಲಿ 11 ಆಟಗಾರರನ್ನು ಒಳಗೊಂಡಿರಬೇಕು,

ಇದರಲ್ಲಿ ನಾಲ್ಕು B1 ಆಟಗಾರರು (ಸಂಪೂರ್ಣ ಕುರುಡರು), ಮೂರು B2 ಆಟಗಾರರು (ಭಾಗಶಃ ಕುರುಡರು), ಮತ್ತು ನಾಲ್ಕು B3 ಆಟಗಾರರು (ದೃಷ್ಟಿ ದೋಷ ಇರುವವರು) ಇರಬೇಕು ಎಂದು ಕ್ರಿಕೆಟ್ ಮಂಡಳಿ ಉಲ್ಲೇಖಿಸಿದೆ.

ಹಾಗೆಯೇ ಸ್ಟ್ಯಾಂಡರ್ಡ್ ಕ್ರಿಕೆಟ್ ಬಾಲ್‌ಗಿಂತ ದೊಡ್ಡದಾದ ಪ್ಲಾಸ್ಟಿಕ್ ಚೆಂಡನ್ನು ಬಳಸಿ ಕ್ರಿಕೆಟ್ ಆಡಬೇಕಾಗುತ್ತದೆ. ಹಾಗೆ ಅದು ಚಲಿಸಿದಾಗ ಶಬ್ದ ಮಾಡುವ ಬಾಲ್ ಬೇರಿಂಗ್‌ಗಳನ್ನು ಅಳವಡಿಸಲಾಗಿರುತ್ತದೆ.

ವಿಕೆಟ್‌ಗಳನ್ನು ಫ್ಲೋರೊಸೆಂಟ್(Fluorescent) ಲೋಹದ ಕೊಳವೆಗಳಿಂದ ತಯಾರಿಸಲಾಗುತ್ತದೆ ಜೊತೆಗೆ ಮೂರು ವಿಕೆಟ್‌ಗಳನ್ನು ಒಟ್ಟಿಗೆ ಜೋಡಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ : https://vijayatimes.com/covid-new-version-bf7/

ಮತ್ತೊಂದು ಪ್ರಮುಖ ನಿಯಮವೆಂದರೆ ಬೌಲರ್ ಚೆಂಡನ್ನು ಎಸೆಯುವ ಮೊದಲು “ಪ್ಲೇ” ಎಂದು ಕೂಗಬೇಕು ಎಂದು ಹಲವಾರು ರೀತಿ ರಿವಾಜುಗಳನ್ನು ತಿಳಿಸಿದ್ದಾರೆ.

ಈ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡುವುದರ ಜೊತೆಗೆ ಪ್ರಾಮುಖ್ಯತೆಯನ್ನು ನೀಡಿ ಪ್ರೋತ್ಸಾಹಿಸಬೇಕು ಎಂಬುದು ಅಂಧರ ತಂಡದ ಮೂಲ ಉದ್ದೇಶವಾಗಿದೆ.

Exit mobile version