ಬೀದರ್ ಜಿಲ್ಲೆಯಲ್ಲಿ ಮನವಿ ಪತ್ರ ತೆಗೆದುಕೊಳ್ಳಲು ಬಾರದ ತಹಶಿಲ್ದಾರರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಲಾಗಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಹಶಿಲ್ದಾರರಾದ ಡಾ. ಪ್ರದೀಪ್ ಕುಮಾರ್ ಹಿರೇಮಠ್ ಗೆ ಕಾಲಿಂದ ಒದ್ದು ಹಲ್ಲೆ ಮಾಡಲಾಗಿದೆ. ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಂಕುಶ್ ಗೋಖಲೆಯಿಂದ ತಹಶಿಲ್ದಾರ ಮೇಲೆ ಹಲ್ಲೆಯಾಗಿದ್ದು, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ನ್ಯಾಯಾಧೀಶರ ವಿರುದ್ಧ ಬಿಎಸ್ಪಿ ಪಾರ್ಟಿಯಿಂದ ಹುಮ್ನಾಬಾದ್ ನಲ್ಲಿ ಪ್ರತಿಭಟನೆ ಮಾಡಲಾಗುತ್ತಿತ್ತು. ಈ ವೇಳೆ ಮನವಿ ಸ್ವೀಕಾರ ಮಾಡಲು ಗ್ರೇಟ್ – 2ರ ಬಳಿ ತಹಶಿಲ್ದಾರರು ಹೋಗಿದ್ದರು. ಆದರೆ ತಹಶಿಲ್ದಾರ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ತಹಶಿಲ್ದಾರ ಕಚೇರಿಗೆ ಬಂದು ಹಲ್ಲೆ ಮಾಡಿದ ಬಿಎಸ್ಪಿ ನಾಯಕ ಹಾಗೂ ಕಾರ್ಯಕರ್ತರು.
ಕಚೇರಿಯಲ್ಲಿನ ಚೇರ್ ಗಳನ್ನು ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಬೂಟು ಕಾಲಿಂದ ತಹಶಿಲ್ದಾರಗೆ ಒದ್ದಿದ್ದಾರೆ ಬಿಎಸ್ಪಿ ನಾಯಕ ಅಂಕೋಶ ಗೋಖಲೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ತಹಶಿಲ್ದಾರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ತಹಶಿಲ್ದಾರ ಡಾ. ಪ್ರದೀಪ್ ಕುಮಾರ್ ಹಿರೇಮಠ್, ಬೀದರ್ ಜಿಲ್ಲೆಯ ಹುಮ್ನಾಬಾದ್ ತಹಶಿಲ್ದಾರರ ಮೇಲೆ ಹಲ್ಲೆ ಖಂಡಿಸಿ ಜಿಲ್ಲೆಯ ಎಲ್ಲಾ ತಹಶಿಲ್ದಾರ ಕಚೇರಿಯ ಮುಂದೆ ಸಿಬ್ಬಂದಿಗಳಿಂದ ಪ್ರತಿಭಟನೆ ನಡೆಸಲಾಗಿದೆ.

ತಹಶಿಲ್ದಾರರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂಬ ಅಗ್ರಹ!ತಾಲೂಕಾ ದಂಡಾಧಿಕಾರಿಗಳ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸದಿದ್ದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಉಗ್ರ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ತಹಶಿಲ್ದಾರರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಇನ್ನು ದಲಿತ ಸಂಘಟನೆ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾದ ತಹಶಿಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ ರವರನ್ನು ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ವಿಚಾರಿಸದ ಮಾಜಿ ಸಚಿವ ಶಾಸಕ ರಾಜಶೇಖರ ಬಿ.ಪಾಟೀಲ ಎಮ್.ಎಲ್.ಸಿ. ಗಳಾದ ಡಾ. ಚಂದ್ರಶೇಖರ್ ಪಾಟೀಲ, ಭೀಮರಾವ್ ಪಾಟೀಲ, ತಾಲೂಕು ದಂಡಾಧಿಕಾರಿಗಳ ಮೇಲಿನ ಹಲ್ಲೆಯನ್ನು ಖಂಡಿಸುತ್ತೆವೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಕೊಡಲೆ ಬಂಧಿಸಬೇಕು ಎಂದರು. ಈ ಪ್ರಕರಣ ಸಂಬಂಧಿಸಿದಂತೆ ಹುಮನಾಬಾದ ಪೋಲಿಸ್ ಠಾಣೆಯಲ್ಲಿ ಬಿಎಸ್ಪಿ ನಾಯಕ ಅಂಕೋಶ ಗೋಖಲೆ ಸೇರಿ 20 ಜನರ ಮೇಲೆ ಪ್ರಕರಣ ದಾಖಲಾಗಿದೆ.