ತಲೆನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ

ಒಂದು ಕಡೆ ತಲೆನೋವು ಹಲವು ಜನರನ್ನು ಕಾಡುತ್ತಿರುತ್ತದೆ. ಪ್ರತೀ ದಿನ ಒಂದು ನಿರ್ದಿಷ್ಟ ಸಮಯದಲ್ಲಿ ಈ ತಲೆನೋವು ಕಾಣಿಸಿಕೊಳ್ಳುತ್ತದೆ. ಅದು ಕೂಡ ಒಂದು ಕಡೆ ಮಾತ್ರ ಕಾಣಿಸಿಕೊಳ್ಳುತ್ತದೆ. ಯಾವುದೇ ಔಷಧಿಗಳನ್ನು ಸೇವಿಸಿದರೂ ಕೆಲವರಿಗೆ ಇದು ಬೇಗ ವಾಸಿಯಾಗುವುದಿಲ್ಲ. ಅಂತಹ ಸಮಸ್ಯೆಯೇನಾದರೂ ಕಾಣಿಸಿಕೊಂಡಲ್ಲಿ ಅತಿ ಸುಲಭವಾದ ಒಂದು ಮನೆ ಮದ್ದು ಇಲ್ಲಿದೆ ನೋಡಿ.

ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ. ಬೆಳ್ಳಳ್ಳಿಯ ಲೇಪನದಿಂದ ತಲೆನೋವನ್ನು ಮಾಯವಾಗಿಸಬಹುದು. ಹಾಗಾದರೆ ಈ ಬೆಳುಳ್ಳಿಯ ಲೇಪನ ಮಾಡುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೆಳ್ಳುಳ್ಳಿಯ ನಾಲ್ಕೈದು ಎಸಳುಗಳನ್ನು ತೆಗೆದುಕೊಂಡು ನುಣ್ಣಗೆ ಅರೆದು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ತಯಾರಿಸಿಕೊಂಡು, ನೋವಿರುವ ಭಾಗಕ್ಕೆ ಹಚ್ಚಿಕೊಂಡರೆ ತಲೆನೋವು ಕ್ಷಣಾರ್ದದಲ್ಲಿ  ಗುಣವಾಗುವತ್ತದೆ. ಆದರೆ ಈ ಕೇಪನ ಹಚ್ಚಿದ ಭಾಗದಲ್ಲಿ ಸ್ವಲ್ಪ ಉರಿಯುವ ಅನುಭವ ಕಾಣಿಸಿಕೊಳ್ಳಬಹುದು. ಆದರೆ ಚಿಂತಿಸದಿರಿ.

ಮನುಷ್ಯನ ಧಾವಂತ ಜೀವನದಿಂದಾಗಿ ಪ್ರಸ್ತುತ ದಿನಗಳಲ್ಲಿ ತಲೆನೋವು ಕಾಡುವುದು ತುಂಬಾ ಸಹಜವೆನಿಸಿದೆ.  ಅಡುಗೆ ಮನೆಯಲ್ಲಿ ಉಪಯೋಗಿಸುವ ಪುದೀನಾ ಎಣ್ಣೆ, ಸಾಸಿವೆ ಎಣ್ಣೆ ಹಾಗೂ ಬಾದಾಮಿ ಎಣ್ಣೆಯಲ್ಲಿ ತಲೆಗೆ ಮಸಾಜ್ ಮಾಡುವುದರಿಂದಲೂ ತಲೆನೋವಿಗೆ  ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ನು ಮುಟ್ಟಿದರೆ ಮುನಿ ಗಿಡದ ಬೇರನ್ನು ಹಾಲಿನಲ್ಲಿ ಚೆನ್ನಾಗಿ ಅರೆದು ಹಣೆಗೆ ಹಾಗೂ ಕಣ್ಣಿನ ಮೇಲ್ಬಾಗಕ್ಕೆ ಹಚ್ಚಿಕೊಂಡರೂ ತಲೆನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ.

Exit mobile version