ಚೆನ್ನೈ, ಆ. 13: ದೇಶಾದ್ಯಾಂತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಪೆಟ್ರೋಲ್ ಮೇಲಿನ ರಾಜ್ಯ ಸುಂಕವನ್ನು 3 ರೂ ಖಡಿತಗೊಳಿಸಿದೆ.
ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆಯಾಗಿದ್ದು ಸಾಮಾನ್ಯ ವರ್ಗಕ್ಕೆ ಅನೂಕೂಲವಾಗುವ ದೃಷ್ಟಿಯಿಂದ ಪೆಟ್ರೋಲ್ ಮೇಲಿನ ರಾಜ್ಯ ಸುಂಕದಲ್ಲಿ 3 ರೂ ಸುಂಕವನ್ನು ಖಡಿತಗೊಳಿಸಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ವಿತ್ತ ಸಚಿವ ಪಿ. ತ್ಯಾಗರಾಜನ್ ತಿಳಿಸಿದ್ದಾರೆ. ಈ 3 ರೂ ಗಳ ಖಡಿತದಿಂದಾಗಿ ರಾಜ್ಯಕ್ಕೆ ವಾರ್ಷಿಕ ಸುಮಾರು 1160 ಕೋಟಿಗಳಷ್ಟು ಆರ್ಥಿಕ ಹೊಡೆತ ಬೀಳಳಿದೆ ಎಂದು ಬಜೆಟ್ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣಾ ಸಂದರ್ಭದಲ್ಲಿ ಡಿಎಂಕೆ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರ್ಗೆ 5 ರೂಪಾಯಿಗಳಷ್ಟು ಕಡಿತ ಮಾಡುವುದಾಗಿ ಘೋಷಿಸಿತ್ತು. ಆ ಮಾತಿನಂತೆಯೇ ಈಗ 3 ರೂಪಾಯಿಗಳಷ್ಟು ಕಡಿತ ಮಾಡಲಾಗಿದೆ ಎಂದು ವಿತ್ತ ಸಚಿವ ಪಿ ತ್ಯಾಗರಾಜನ್ ಹೇಳಿದ್ದಾರೆ.
ಏಪ್ರಿಲ್ ತಿಂಗಳಿನಿಂದ ದೇಶಾದ್ಯಂತ ಪೆಟ್ರೋಲ್ ದರ ಒಮ್ಮೆಲೆ ಜಿಗಿತ ಕಂಡಿತ್ತು. ಎಪ್ರಿಲ್ ನಂತರ ಸುಮಾರು 30ರೂಪಾಯಿಗೂ ಅಧಿಕ ದರ ಏರಿಕೆಯಾಗಿದ್ದು, ದೇಶದ ಹಲವು ನಗರಗಳಲ್ಲಿ ಈಗಾಗಲೇ ದರ 100ರೂಗಳು ದಾಟಿದೆ. ಎಲ್ಲಾ ರಾಜ್ಯಗಳು ಕೂಡ ಪೆಟ್ರೋಲ್ ಮೇಲಿನ ಸುಂಕವನ್ನುಸ್ವಲ್ಪ ಕಡಿತ ಗೊಳಿಸಿದರೆ ಸಾಮಾನ್ಯ ವರ್ಗದ ಜನತೆಗೂ ಕೂಡ ಅನುಕೂಲವಾಗಲಿದೆ ಎಂಬುವುದು ಸಾರ್ವಜನಿಕರ ಅಭಿಪ್ರಯಾವಾಗಿದೆ.