ನವದೆಹಲಿ, ನ. 27: ಭಾರತೀಯ ನೌಕಾಪಡೆಯ ಎ ಮಿಗ್-29ಕೆ ತರಬೇತಿ ವಿಮಾನವು ಗುರುವಾರ ಸಂಜೆ ಪತನಗೊಂಡಿದ್ದು, ಒಬ್ಬ ಪೈಲಟ್ ಅನ್ನು ರಕ್ಷಿಸಲಾಗಿದೆ. ಇನ್ನೊಬ್ಬರಿಗಾಗಿ ಶೋಧ ಮುಂದುವರಿದಿದೆ ಎಂದು ನೌಕಾಪಡೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದರು. ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದ ಮೇಲೆ ತರಬೇತಿ ನಡೆಸುತ್ತಿದ್ದರು, ಆಗ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.
ನಾಪತ್ತೆಯಾಗಿರುವ ಪೈಲಟ್ ಅನ್ನು ಪತ್ತೆ ಹಚ್ಚಲು ಗಸ್ತು ವಿಮಾನ ಮತ್ತು ಹಡಗನ್ನು ನಿಯೋಜಿಸಲಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.