vijaya times advertisements
Visit Channel

“ಕಾಲು ಮುರಿಯಿರಿ, ನಾನು ಜಾಮೀನು ಕೊಡಿಸುತ್ತೇನೆ” ; ಶಿಂಧೆ ಬಣದ ಶಾಸಕ ಕರೆ : ವಿಡಿಯೋ ವೈರಲ್!

Maharashtra

ಮುಂಬೈ : ಮಹಾರಾಷ್ಟ್ರ(Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಬಣದ ಶಿವಸೇನೆಯ ಶಾಸಕ(Shivasena MLA) ಪ್ರಕಾಶ್ ಸುರ್ವೆ ನೀಡಿರುವ ಕರೆ ವಿವಾದಕ್ಕೆ ಕಾರಣವಾಗಿದೆ. ಶಾಸಕ ಪ್ರಕಾಶ್ ಸುರ್ವೆ(Prakash Surwey) ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್(Viral) ಆಗ್ತಿದೆ. ಈ ವಿಡಿಯೋ(Video) ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರು(Maharashtra Police) ಶಾಸಕ ಪ್ರಕಾಶ್ ಸುರ್ವೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Eknath Shinde

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಶಿವಸೇನೆ ಬಂಡಾಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಶಾಸಕ ಪ್ರಕಾಶ್ ಸುರ್ವೆ, “ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲು ಮುರಿಯಿರಿ. ನಾನು ನಿಮಗೆ ಜಾಮೀನು ಕೊಡಲು ಮರುದಿನ ಬರುತ್ತೇನೆ.” ಎಂದು ಉದ್ಧವ್ ಠಾಕ್ರೆ ಬೆಂಬಲಿಗರ ಮೇಲೆ ದಾಳಿ ನಡೆಸುವಂತೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ.

ಶಾಸಕ ಪ್ರಕಾಶ್ ಸುರ್ವೆ ಅವರ ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆಗಸ್ಟ್ 14 ರಂದು ಮುಂಬೈನ(Mumbai) ಮಗಥಾಣೆ ಪ್ರದೇಶದ ಬುದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ನಾವು ಯಾರೊಂದಿಗೂ ಜಗಳವಾಡುವುದಿಲ್ಲ, ಆದರೆ ಯಾರಾದರೂ ನಮ್ಮೊಂದಿಗೆ ಜಗಳವಾಡಿದರೆ ನಾವು ಅವರನ್ನು ಬಿಡುವುದಿಲ್ಲ. ನಾವು ಯಾರ ದಾದಾಗಿರಿಯನ್ನು ಸಹಿಸುವುದಿಲ್ಲ.

Maharashtra

ನಿಮ್ಮ ಮೇಲೆ ಯಾರಾದರು ದಾದಾಗಿರಿ ಮಾಡಲು ಬಂದರೆ, ನೀವು ಅವರ ಕೈ-ಕಾಲುಗಳನ್ನು ಮುರಿಯಿರಿ. ಮರುದಿನ ನಾನು ನಿಮಗೆ ಜಾಮೀನು(Bail) ನೀಡುತ್ತೇನೆ, ಚಿಂತಿಸಬೇಡಿ.” ಎಂದಿದ್ದಾರೆ. ಇನ್ನು ಮಗಠಾಣೆ ಕ್ಷೇತ್ರದ ಶಾಸಕರಾಗಿರುವ ಪ್ರಕಾಶ್ ಸುರ್ವೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.