ಲೈಫಲ್ಲಿ ಹ್ಯಾಪಿ ಆಗಿರಲು ಈ ಆಲೋಚನೆಗಳನ್ನು ನಿಮ್ಮಿಂದ ಕಿತ್ತುಹಾಕಿ

ನಿಮ್ಮ ಜೀವನದಲ್ಲಿ ಯಾರೋ ಬಂದು ನಿಮ್ಮನ್ನು ಸಂತೋಷವಾಗಿಡುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನ. ನಿಮ್ಮ ಖುಷಿಗೆ ನೀವೇ ಹೊಣೆಗಾರರು. ಸಕಾರಾತ್ಮಕ ಆಲೋಚನೆಗಳನ್ನು ಪೋಷಿಸುವ ಮೂಲಕ ನಿಮ್ಮಲ್ಲಿ ಸಂತಸವನ್ನು ನೀವೇ ಹುಟ್ಟುಹಾಕಬಹುದು. ಒಂದುವೇಳೆ ನಿಮ್ಮ ಬದುಕಲ್ಲಿ ಬರೀ ನೋವು ಅಥವಾ ನಿರಾಶೆಗಳೇ ತುಂಬಿಕೊಂಡಿದ್ದರೆ, ಸಂತೋಷವನ್ನು ಪಡೆಯಲು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದು. ಅಂತಹ ಬದಲಾವಣೆಗಳಾವುವು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ.

ಜೀವನದಲ್ಲಿ ಸಂತೋಷವಾಗಿರಲು ತೆಗೆದುಹಾಕಬೇಕಾದ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:
ಭಯವನ್ನು ಬಿಡಿ:
ಏನಾಗಬಹುದು ಎಂಬ ಭಯವನ್ನು ಮೊದಲು ಬಿಡಿ. ಭಯಬಿಡಲು ಪ್ರಾರಂಭಿಸಿದಾಗ ನಿಮ್ಮ ಕನಸುಗಳು ನಿಜಮಾಡಿಕೊಳ್ಳಲು ದಾರಿಗಳನ್ನು ಹುಡುಕುತ್ತೀರಿ. ಭಯವು ನಿಜವಲ್ಲ, ಅದು ನಿಮ್ಮ ಆಲೋಚನೆಗಳು. ನಿಮ್ಮ ಆಲೋಚನೆಗಳಲ್ಲಿ ಭಯವನ್ನು ದೂರಮಾಡಲು ಪ್ರಾರಂಭಿಸಿ, ಆಗ ಸಕಾರಾತ್ಮಕ ಆಲೋಚನೆಗಳು ಹುಟ್ಟಿಕೊಳ್ಳಲು ಆರಂಭವಾಗುವುದು.

ನಕಾರಾತ್ಮಕ ಸ್ವ-ಮಾತು ಬೇಡ:
ಹೌದು, ನಿಮ್ಮ ಬಗ್ಗೆ ನೀವೇ ನಕಾರಾತ್ಮಕವಾಗಿ ಮಾತನಾಡಿದರೆ ಸಂತೋಷವಾಗಿರಲು ಸಾಧ್ಯವಿಲ್ಲ. ನಿಮ್ಮನ್ನು ಪ್ರೀತಿಸಬೇಕಾದ ವ್ಯಕ್ತಿ ನೀವೇ. ಆದ್ದರಿಂದ ನಕಾರಾತ್ಮಕ ಚಿಂತನೆ ಬೇಡ. ಇಂತಹ ಮಾತುಗಳು ನಿಮ್ಮನ್ನು ಮತ್ತಷ್ಟು ಕೆಳ ಮಟ್ಟಕ್ಕೆ ತಳ್ಳುತ್ತದೆ. ಜೊತೆಗೆ ನಿಮ್ಮ ಸಂತೋಷವನ್ನೂ ಕಿತ್ತುಕೊಳ್ಳುವುದು.

ಬಿಟ್ಟುಕೊಡುವುದು ಬೇಡ:
ಯಾವುದೇ ವಿಚಾರಕ್ಕಾಗಲಿ ಮನ್ನಿಸುವಿಕೆಯನ್ನು ನಿಲ್ಲಿಸಿ. ನಿಮಗೆ ಯಾವುದು ಅವಶ್ಯಕತೆ ಇದೆಯೋ ಅದನ್ನು ಬಿಟ್ಟುಕೊಡಲು ಹೋಗಬೇಡಿ. ಅದನ್ನು ಹೇಗಾದರೂ ಪಡೆದೇ ತೀರುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಿ. ಹೋಗಲಿ ಬಿಡು ಎಂಬ ಭಾವನೆ ಬೇಡ. ನಿಮಗೆ ಬೇಡವಾದಲ್ಲಿ ಮಾತ್ರ ಬಿಟ್ಟುಕೊಡುವ ನಿರ್ಧಾರ ಮಾಡಿ. ಇಲ್ಲವಾದಲ್ಲಿ ಕೊನೆವರೆಗೂ ಹೋರಾಡಿ.

ಹಿಂದೆ ನಡೆದಿದ್ದನ್ನು ಮರೆತುಬಿಡಿ:
ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ, ಮರೆಯಲು ಸಾಧ್ಯವಿಲ್ಲ ಮತ್ತು ಅಳಿಸಲಾಗುವುದಿಲ್ಲ. ಹೀಗಿರುವಾಗ ಅದನ್ನೇ ನೆನೆಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ. ಆದ್ದರಿಂದ ಅದನ್ನು ಅಲ್ಲಿಗೆ ಬಿಟ್ಟು, ಹಿಂದೆ ಆದ ತಪ್ಪನ್ನು ಸರಿಪಡಿಸಿಕೊಳ್ಳುವ ದಾರಿಯನ್ನು ಹುಡುಕುತ್ತಾ ಮುಂದೆ ಸಾಗಬೇಕು.

ಇತರರ ದೂಷಣೆ ಬೇಡ:
ನಿಮ್ಮ ಸ್ವಂತ ತಪ್ಪುಗಳಿಗೆ ನೀವು ಜವಾಬ್ದಾರರು, ಬೇರೆ ಯಾರೂ ಇಲ್ಲ. ತಪ್ಪುಗಳು ನಿಮ್ಮ ಸ್ವಂತದ್ದು ಜೊತೆಗೆ ಕಲಿಯಲು ಸೂಕ್ತವಾದ ಅವಕಾಶವೂ ಕೂಡ. ನಿಮ್ಮ ತಪ್ಪುಗಳಿಗೆ ವ್ಯವಸ್ಥೆಯನ್ನು ಅಥವಾ ಇತರ ವ್ಯಕ್ತಿಯನ್ನು ದೂಷಣೆ ಮಾಡುತ್ತಾ ಕೂರುವುದು ಸರಿಯಲ್ಲ. ಅದನ್ನು ಬಿಟ್ಟು ನಿಮ್ಮ ಸ್ವಂತ ಕಾರ್ಯಗಳಿಗೆ ನೀವೇ ಜವಾಬ್ದಾರಿಯನ್ನು ತೆಗೆದುಕೊಳ್ಳಿ.

ನಿಯಂತ್ರಣದ ಅಗತ್ಯ ಬಿಟ್ಟುಬಿಡಿ:
ಯಾವುದೇ ಘಟನೆಗಳನ್ನು ನಿಯಂತ್ರಿಸಲು ಹೋಗಬೇಡಿ. ಜೀವನದ ಎಲ್ಲಾ ಕ್ರಿಯೆಗಳನ್ನು ನಿಮ್ಮ ನಿಯಂತ್ರಣದಲ್ಲಿ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಏನು ಆಗುವುದು ಅದನ್ನು ಒಪ್ಪಿಕೊಳ್ಳಿ. ನಿಯಂತ್ರಣ ಹೇರಲು ಹೋಗಬೇಡಿ.

ಇತರರ ಟೀಕೆ ಬೇಡ:
ಇನ್ನೊಬ್ಬ ವ್ಯಕ್ತಿಯು ಏನು ಮಾಡುತ್ತಿದ್ದಾನೆಂದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ಇತರರನ್ನು ಟೀಕಿಸಲು ಬಳಸುವ ಶಕ್ತಿಯನ್ನು ನಿಮ್ಮ ವಿಚಾರಗಳನ್ನು ಉತ್ತಮಗೊಳಿಸಲು ಬಳಸಿಕೊಳ್ಳಿ. ಇತರರನ್ನ ಟೀಕೆ ಮಾಡುವುದರಿಂದ ನಿಮಗೇನು ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಬದಲಾವಣೆ ಒಪ್ಪಿಕೊಳ್ಳಿ:
ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಅನುಮತಿಸಿ. ಬದಲಾವಣೆಯನ್ನು ಸ್ವೀಕರಿಸಲು ಕಲಿಯಿರಿ. ಯಾವ ವ್ಯಕ್ತಿಯೂ ಅಥವಾ ಯಾವುದೇ ವಿಚಾರವೂ ಬದಲಾಗದೇ ಇರುವುದಿಲ್ಲ. ಕಾಲಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುವುದು. ಈ ಬದಲಾವಣೆಗಳಿಗೆ ತಲೆಕೆಡಿಸಿಕೊಳ್ಳದೇ, ಅವುಗಳನ್ನು ಒಪ್ಪಿಕೊಂಡು ಸಂತೋಷವಾಗಿರಿ.

ಯಾವಾಗಲೂ ಸರಿಯೇ ಆಗಿರಬೇಕಾಗಿಲ್ಲ:
ಯಾವಾಗಲೂ ಸರಿಯಾಗಿರಬೇಕಾದ ಅಗತ್ಯವೇನಿಲ್ಲ. ಆ ಆಲೋಚನೆಯನ್ನು ಮೊದಲು ಬಿಡಿ. ನಿಮ್ಮ ಸುತ್ತಮುತ್ತಲಿನವರಿಗೆ ಹಾನಿಯಾಗದಂತೆ ಬದುಕಿದರೆ ಸಾಕು. ತಪ್ಪು ಎಲ್ಲರೂ ಮಾಡುತ್ತಾರೆ. ಆದರೆ ಅದನ್ನೇ ಯೋಚಿಸಿಕೊಂಡು ಕೂರುವ ಅವಶ್ಯಕತೆ ಇಲ್ಲ.

Exit mobile version