ದಂತ ವೈದ್ಯರ ಬಳಿ ಹೋಗದೆಯೇ ನಿಮ್ಮ ಹಲ್ಲುಗಳ ಹೊಳಪನ್ನು ಪಡೆಯುವುದು ಈಗ ಸುಲಭ!

White teeth

ಒಂದು ಚಂದದ ಮಂದಹಾಸ ಎಂತವರನ್ನೂ ಆಕರ್ಷಿಸುತ್ತದೆ. ಈ ನಗುವನ್ನು ಚಂದಗಾಣಿಸುವುದೇ ಅಂದವಾದ ದಂತಪಂಕ್ತಿ. ಆದರೆ, ಆಹಾರ ಪದ್ಧತಿ, ಹಲ್ಲುಗಳ ಬಗ್ಗೆ ನಿರ್ಲಕ್ಷ್ಯ ಮುಂತಾದ ಹಲವಾರು ಕಾರಣಗಳಿಂದ ಹಲ್ಲುಗಳು ಹೊಳಪು ಕಳೆದುಕೊಂಡು ಆಕರ್ಷಣೆಯನ್ನು ಹೋಗಲಾಡಿತ್ತದೆ. ವಯಸ್ಸಾಗುವಿಕೆ, ಅತಿಯಾದ ಕಾಫಿ, ಟೀ ಸೇವನೆ, ಬಾಯಿಯ ಸ್ವಚ್ಛತೆಯ ಬಗ್ಗೆ ಗಮನ ಹರಿಸದೇ ಇರುವುದು ಮತ್ತು ಹವಾಮಾನ ಪರಿಸ್ಥಿತಿಗಳು ಮುಂತಾದ ಕಾರಣದಿಂದ ಹಲ್ಲುಗಳು ತಮ್ಮ ನೈಜ ಬಣ್ಣವನ್ನು ಕಳೆದುಕೊಂಡು ಮಂಕಾಗುತ್ತವೆ.

ಆದರೆ ದಂತ ವೈದ್ಯ ವಿಜ್ಞಾನದ ಕೆಲವು ವಿಧಾನಗಳ ಮೂಲಕ ಹಲ್ಲುಗಳ ಹೊಳಪನ್ನು ಮರಳಿ ಪಡೆಯಬಹುದಾಗಿದೆ. ಆದರೆ ಸಾಮಾನ್ಯ ನಾಗರಿಕರು ಪ್ರತಿ ತಿಂಗಳು ಡೆಂಟಿಸ್ಟ್ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ತುಸು ಕಷ್ಟದ ಕೆಲಸ. ಹಾಗಾಗಿ ಮನೆಯಲ್ಲಿಯೇ ಕೆಲವು ಸರಳ ವಿಧಾನಗಳ ಮೂಲಕ ಹಲ್ಲುಗಳ ಹೊಳಪನ್ನು ಮತ್ತೆ ಮರಳಿ ಪಡೆಯಬಹುದು. ಹಲ್ಲುಗಳ ಮೇಲಿನ ಕಲೆಗಳನ್ನು ನಿವಾರಿಸಲು ನಿಂಬೆಹಣ್ಣು ಉಪಯುಕ್ತವಾಗಿದೆ. ಹಾಗೆಯೇ ಉಪ್ಪಿನಿಂದ ಹಲ್ಲುಗಳ ಬಣ್ಣ ಮಾಸುವಿಕೆಯನ್ನು ತಡೆಗಟ್ಟಬಹುದು. ಒಂದಿಷ್ಟು ಅರಿಶಿನದ ಬೇರುಗಳನ್ನು ತೆಗೆದುಕೊಂಡು ಅವನ್ನು ಹುರಿದುಕೊಳ್ಳಿ. ನಂತರ ಗ್ರೈಂಡರ್‌ಗೆ ಹಾಕಿ ನುಣುಪಾದ ಪೌಡರ್ ತಯಾರಿಸಿ.

ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಅರಿಶಿನ ಹಾಗೂ ಚಿಟಿಕೆ ಉಪ್ಪು ಹಾಕಿ. ಇದಕ್ಕೆ ಕೆಲವು ನಿಂಬೆ ಹನಿಗಳನ್ನು ಬೆರೆಸಿ, ಮಿಕ್ಸ್ ಮಾಡಿ ನುಣುಪಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಹಲ್ಲುಗಳಿಗೆ ಸವರಿ. ಸುಮಾರು 3 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಬಾಯಿ ತೊಳೆದುಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನ ಅನುಸರಿಸುವುದರಿಂದ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು.
ಅರ್ಧ ಟೇಬಲ್ ಸ್ಪೂನ್ ಅರಿಶಿನಪುಡಿ ಹಾಗೂ ಕೆಲ ಹನಿ ವೆನಿಲ್ಲಾ ಎಸೆನ್ಸ್‌ಗಳನ್ನು ಮಿಶ್ರಣ ಮಾಡಿ ನುಣುಪಾದ ಪೇಸ್ಟ್ ತಯಾರಿಸಿ. ಇದರಲ್ಲಿ ಟೂತ್ ಬ್ರಶ್ ಅದ್ದಿ ಮೃದುವಾಗಿ ಹಲ್ಲು ಉಜ್ಜಿಕೊಳ್ಳಿ.

ನಂತರ ಸಾದಾ ನೀರಿನಿಂದ ಬಾಯಿ ಮುಕ್ಕಳಿಸಿ ನಿಮ್ಮ ರೆಗ್ಯುಲರ್ ಟೂತ್ ಪೇಸ್ಟ್ ನಿಂದ ಹಲ್ಲುಜ್ಜಿಕೊಳ್ಳಿ. ವಾರಕ್ಕೆ 2 ರಿಂದ 3 ಬಾರಿ ಈ ವಿಧಾನ ಅನುಸರಿಸಿದರೆ ಒಳ್ಳೆಯ ಪರಿಣಾಮ ಸಿಗುತ್ತದೆ. ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಅದರಿಂದ ಹಲ್ಲುಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಈ ವಿಧಾನ ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಕಲೆಗಳನ್ನು ಕೂಡ ನಿವಾರಿಸುತ್ತದೆ. ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಆದರೆ ಒಂದೇ ದಿನದಲ್ಲಿ ಹಲ್ಲುಗಳು ಬಿಳಿಯಾಗುತ್ತದೆ ಎಂಬ ಭ್ರಮೆ ಬೇಡ, ಫಲಿತಾಂಶ ಸಿಗಲು ಸ್ವಲ್ಪ ಸಮಯ ಬೇಕಾಗುವುದು.


ಇನ್ನೂ ಉತ್ತಮ ಫಲಿತಾಂಶಗಳನ್ನು ಪಡೆಯಲು ಆಗಾಗ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ. ಒಂದು ಅವಧಿಯ ನಂತರ ನಿಮ್ಮ ಬ್ರಷ್ ಕಠಿಣವಾಗಿ ನಿಮ್ಮ ಹಲ್ಲುಗಳಲ್ಲಿ ಕಲೆಗಳು ಗೊಚರಿಸಬಹುದು ಅಲ್ಲದೆ ಒರಟು ಬ್ರಷ್ ನಿಮ್ಮ ಹಲ್ಲುಗಳ ದಂತಕವಚವನ್ನೂ ಹಾಳುಮಾಡಬಹುದು. ಹಾಗಾಗಿ ಕನಿಷ್ಠ ಪಕ್ಷ ಎರಡು ತಿಂಗಳಿಗೊಮ್ಮೆ ನಿಮ್ಮ ಬ್ರಷನ್ನು ಬದಲಾಯಿಸಿ.

Exit mobile version