ನಿಜಾಮಬಾದ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್

 ಹೈದ್ರಾಬಾದ್, ಸೆ 30 : 20 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಆಸ್ಪತ್ರೆ ಕಟ್ಟಡದಲ್ಲಿ ಕೂಡಿಹಾಕಿ, ಐವರು ಸೇರಿ ಗ್ಯಾಂಗ್ ರೇಪ್ ನಡೆಸಿರುವ ಘಟನೆ ತೆಲಂಗಾಣ ರಾಜ್ಯದ ನಿಜಾಮಬಾದ್ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಲಿಫ್ಟ್ ಕೇಳಿದ್ದು ಯುವಕನ ಜೊತೆ ತೆರಳಿದ್ದಳು. ಆದರೆ, ಐವರು ಯುವಕರಿದ್ದ ತಂಡ ನಾವು ಬೈಕ್ ನಲ್ಲಿ ನಗರಕ್ಕೆ ಒಂದು ಸುತ್ತು ಹೊಡೆಯುತ್ತೇವೆಂದು ಹೇಳಿ, ಯುವತಿಯನ್ನು ಒಟ್ಟಿಗೆ ಕರೆದೊಯ್ದಿದ್ದಾರೆ. ಬಳಿಕ ಯುವತಿಯನ್ನು ಆಸ್ಪತ್ರೆಯ ಹಳೆ ಕಟ್ಟಡ ಒಂದಕ್ಕೆ ಕರೆದೊಯ್ದು ಅಲ್ಲಿದ್ದವಾಚ್ ಮನ್ ಕೊಠಡಿಯಲ್ಲಿ ಅತ್ಯಾಚಾರ ನಡೆಸಿದ್ದಾರೆ. ಹುಡುಗಿ ಆನಂತರ ಪೊಲೀಸರಿಗೆ ದೂರು ನೀಡಿದ್ದು ವಿದ್ಯಾರ್ಥಿನಿ ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಎಸ್ಸಿ- ಎಸ್ಸಿ ಅಟ್ರಾಸಿಟಿ ಮತ್ತು ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಐವರು ಆರೋಪಿಗಳನ್ನೂ ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ವಿದ್ಯಾರ್ಥಿನಿ ಅಮಲು ಪದಾರ್ಥ ಸೇವಿಸಿದ್ದಳು ಎನ್ನಲಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಕೃತ್ಯ ಎಸಗಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version