Tender Coconut : ಅರೋಗ್ಯ ಹಾಗೂ ಸೌಂದರ್ಯಕ್ಕೆ ಅಮೃತ ಈ ಎಳನೀರು ; ಎಳನೀರಿನ ಮಹತ್ವ ಇಲ್ಲಿದೆ ನೋಡಿ

Health : ಕಡಿಮೆ ವೆಚ್ಚದಲ್ಲಿ ದೊರೆಯುವ ಎಳನೀರು(Tender Coconut) ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ.

ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು, ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂತದ್ದಾಗಿದೆ.

Tender Coconut

ಎಳನೀರು ಕಡಿಮೆ ಪ್ರಮಾಣದ ಸಕ್ಕರೆ (Sugar) ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳ ರಸಕ್ಕಿಂತಲೂ ಇದು ಉತ್ತಮವಾಗಿದೆ.

ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಉಪಯುಕ್ತವಾಗಿರುವ ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ (Dehydration) ಸಮಸ್ಯೆಯನ್ನು ದೂರ ಮಾಡುತ್ತದೆ. ಎಳನೀರಿನ ಆರೋಗ್ಯಕಾರಿ ಮಹತ್ವ ಇಲ್ಲಿದೆ ನೋಡಿ.


ಎಳನೀರು ನಿಮ್ಮ ಸೌಂದರ್ಯವನ್ನು ವರ್ಧಿಸುವುದರ ಜೊತೆಗೆ, ಆರೋಗ್ಯವನ್ನೂ ವೃದ್ಧಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಕೊಬ್ಬು ಮತ್ತು ಅರ್ಥರೋಜನಿಕ್‌ನ್ನು ನಿಯಂತ್ರಿಸುವ ಎಲ್‌-ಆರ್ಗನೈನ್‌ ಎಳನೀರಿನಲ್ಲಿ ಯಥೇಚ್ಚವಾಗಿದೆ.

ಎಳನೀರು ಸೇವನೆಯಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

https://vijayatimes.com/rajasthan-widow-women-got-educated-and-remarried/

ದೇಹವನ್ನು ತಂಪಾಗಿಡುವುದರೊಂದಿಗೆ ದೇಹದ ಉಷ್ಣತೆ ಮತ್ತು ಬೇಸಿಗೆಯಲ್ಲಿ ಉಷ್ಣ (Heat) ಶರೀರದವರಿಗೆ ಕಾಣಿಸಿಕೊಳ್ಳುವ ಗುಳ್ಳೆ ನಿಯಂತ್ರಿಸುವುದಲ್ಲದೇ,

ಚರ್ಮ ಸಂಬಂಧಿ ಕಾಯಿಲೆಗಳಲ್ಲಿ ದೇಹದ ಮೇಲೆ ಮೂಡುವ ಕೆಂಪು ಗುಳ್ಳೆಗಳನ್ನು ಎಳನೀರು ಸೇವನೆ ತಡೆಯುತ್ತದೆ. ಎಳನೀರು ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ.

ದಿನವಿಡೀ ನಿರ್ಜಲೀಕರಣದ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ. ದೈಹಿಕ ಚಟುವಟಿಕೆಗಳಿಂದ ದೇಹವು ಅನುಭವಿಸುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುವ ಪರಿಣಾಮಕಾರಿ ಅಂಶವನ್ನು ಎಳನೀರು ಒಳಗೊಂಡಿದೆ.

ಎಳನೀರು ತನ್ನಲ್ಲಿ ಸಿಟೋಕಿನ್ಸ್ ಮತ್ತು ಲೋರಿಕ್ ಆಸಿಡ್ (Lauric acid)ಅನ್ನು ಒಳಗೊಂಡಿದೆ.

Tender Coconut

ಕೋಶಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇವೆರಡೂ ಅತ್ಯಗತ್ಯವಾಗಿದೆ. ಇದು ವಯಸ್ಸಾಗುವಿಕೆ ಚರ್ಮ ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅನನ್ಯ ಅಂಶವನ್ನು ಒಳಗೊಂಡಿದೆ.

ಎಳನೀರು ಅಧಿಕ ಪ್ರಮಾಣದ ಮೆಗ್ನೇಶಿಯಮ್ ಮತ್ತು ಪೊಟ್ಯಾಶಿಯಮ್ ಅನ್ನು ಒಳಗೊಂಡಿರುವುದರಿಂದ ಕಡಿಮೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದೊಂದು ಪರಿಣಾಮಕಾರಿ ಸಿದ್ಧೌಷಧವಾಗಿದೆ.

ಹೃದಯಾಘಾತಗಳಂತಹ ಅಪಾಯಕಾರಿ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಎಳನೀರು ಹೊಂದಿದೆ. ಮಲಬದ್ಧತೆಯಂತಹ ತೊಂದರೆಗಳಿಗೂ ಪರಿಣಾಮಕಾರಿ ಪ್ರಭಾವವನ್ನು ಎಳನೀರು ಬೀರುತ್ತದೆ.

ನಿಮ್ಮ ದೈನಂದಿನ ವ್ಯಾಯಾಮ ಚಟುವಟಿಕೆಯ ನಂತರ ಎಳನೀರನ್ನು ಸೇವಿಸುವುದು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಒದಗಿಸುತ್ತದೆ.

https://vijayatimes.com/man-eats-metal-and-glass/


ಎಳನೀರು ವಿಟಮಿನ್ ಬಿ ಅಂಶವನ್ನು ಒಳಗೊಂಡಿರುವುದರಿಂದ ಇದು ಒತ್ತಡವನ್ನು ನಿವಾರಿಸಿ ನಿಮಗೆ ಸಮಾಧಾನವನ್ನು ತರಿಸುತ್ತದೆ.

ನಿಯಮಿತವಾಗಿ ಎಳನೀರನ್ನು ಸೇವಿಸುವುದು ಉರಿಮೂತ್ರದಂತಹ ಅಪಾಯಕಾರಿ ಅಂಶವನ್ನು ದೂರಮಾಡಿ ಸ್ವಾಸ್ಥ್ಯವನ್ನು ಒದಗಿಸುತ್ತದೆ.


ಎಳನೀರು ನಿಮ್ಮ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ಎಂಬ ಅಂಶ ಈಗ ಕೆಲವು ಸಂಶೋಧನೆಗಳಿಂದ ಸಾಬೀತಾಗಿದೆ. ಕೆಲವೊಂದು ಪ್ರದೇಶಗಳಲ್ಲಿ,

ಇದರ ಕುರಿತು ಸಂಶೋಧನೆಗಳನ್ನು ಕೂಡ ನಡೆಸಿದ್ದು, ಧನಾತ್ಮಕ ಫಲಿತಾಂಶವನ್ನು ನೀಡಿದೆ. ಮಧುಮೇಹವನ್ನು ನಿಯಂತ್ರಿಸುವ ತಾಕತ್ತು ಕೂಡ ಎಳನೀರಿಗಿದೆ.

ನಿಯಮಿತವಾಗಿ ಎಳನೀರನ್ನು ಸೇವಿಸುವುದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಾಗಗೊಳಿಸಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.

ಚಳಿಗಾಲ ಮತ್ತು ಬೇಸಿಗೆಯಲ್ಲಿ ತ್ವಚೆಯ ಅತ್ಯುತ್ತಮ ಆರೈಕೆಯನ್ನು ಎಳನೀರು ಮಾಡುತ್ತದೆ.

ನಿಮ್ಮ ದೇಹಕ್ಕೂ ಇದನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೇಹದಲ್ಲಿ ಮಾಯಿಶ್ಚರೈಸರ್ (Moisturizer)ಅನ್ನು ವೃದ್ಧಿಸುತ್ತದೆ. ನಿಮ್ಮ ಕಳೆಗುಂದಿದ ಮುಖವನ್ನು ಇದು ಪ್ರಕಾಶಮಾನಗೊಳಿಸಿ ಹೊಳೆಯುವ ತ್ವಚೆಯನ್ನು ನಿಮಗೆ ಒದಗಿಸುತ್ತದೆ.
Exit mobile version