ತೇರದಾಳದಲ್ಲಿ ಮಹಿಳೆ ಹಲ್ಲೆ ಪ್ರಕರಣದಲ್ಲಿ ಶಾಸಕರನ್ನು ರಕ್ಷಿಸಲಾಗುತ್ತಿದೆ: ಡಿಕೆಶಿ

ಬೆಂಗಳೂರು, ಡಿ. 05: ತೇರದಾಳದ ಚುನಾವಣೆಯ ಸಂಧರ್ಭದಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ರಕ್ಷಿಸುತ್ತಿದ್ದು, ಅವರನ್ನು ಏಕೆ ಬಂಧಿಸಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಬ್ಬ ಶಾಸಕರರು ತಪ್ಪು ಮಾಡಿದ್ದರು ಅವರನ್ನು ರಕ್ಷಿಸಲು ಹೊರಟಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆಯಿಲ್ಲ. ಯಡಿಯೂರಪ್ಪರವರೆ, ಶೋಭಾ ಕರಾಂದ್ಲಾಜೆಯವರೆ ನಿಮ್ಮ ಮನೆಯವರಿಗೆ ಈ ರೀತಿ ಅಥವಾ ನಿಮಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ರಿ” ಎಂದು ಪ್ರಶ್ನಿಸಿದ್ದಾರೆ.

ಇನ್ನು “ನಾನು. ಸಿದ್ದರಾಮಯ್ಯ ಮತ್ತು ನಮ್ಮ ಮಹಿಳಾ ಶಾಸಕಿಯರು ತೇರದಾಳಗೆ ಹೊರಟಿದ್ದೇವೆ. ಅಧಿವೇಶನದಲ್ಲೂ ಈ ವಿಚಾರವಾಗಿ ಹೋರಾಟ ಮಾಡುತ್ತೇವೆ. ಇದು ಇಡೀ ಹೆಣ್ಣು ಕುಲಕ್ಕೆ, ಮಾನವೀಯತೆಗೆ ಮಾಡಿದ ಅಪಮಾನ” ಎಂದು ಹೇಳಿದ್ದಾರೆ.

Exit mobile version