Visit Channel

`ಕಲಾವಿದ’ ಈ ವಾರ ತೆರೆಗೆ

WhatsApp Image 2021-02-11 at 9.47.14 AM

`ಕಲಾವಿದ’ ಎನ್ನುವುದು ರವಿಚಂದ್ರನ್ ನಾಯಕರಾಗಿ ನಟಿಸಿದ ಸಿನಿಮಾ ಎಂದು ಎಲ್ಲರಿಗೂ ಗೊತ್ತು. ಅದು ರವಿಚಂದ್ರನ್ ಇತರ ಸಿನಿಮಾಗಳಂತೆ ಹಲವಾರು ಕಾರಣಗಳಿಗೆ ಸುದ್ದಿಯಾಗಿದ್ದ ಚಿತ್ರವಾಗಿತ್ತು. ಆದರೆ ಇದೀಗ ಅದೇ ಹೆಸರಲ್ಲಿ ಈ ವಾರ ಹೊಸ ಚಿತ್ರವೊಂದು ಹೊರಗೆ ಬರುತ್ತಿದೆ. ವಿಶೇಷವಾದ ಕತೆ ಹೊಂದಿರುವ ಈ ಚಿತ್ರವನ್ನು ಶಿವಾನಂದ್ ಎಚ್.ಡಿ ನಿರ್ದೇಶಿಸಿದ್ದಾರೆ.

ನವನಟ ಪ್ರದೀಪ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಕಲಾವಿದ' ಚಿತ್ರಕ್ಕೆ ನಿರ್ಮಾಪಕರು ಕೂಡ ಅವರೇ.ರಣರಣಕ’ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿದ್ದ ಸಂಭ್ರಮ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದ ತಾರಾಗಣದಲ್ಲಿ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂಗು ಸುರೇಶ್, ವರ್ಷಾ, ಮಲ್ಲೇಶ್, ಗುಂಡಮ್ಮ ಖ್ಯಾತಿಯ ಗೀತ, ಶ್ರಿಧರ್, ಜಗದೀಶ್ , ಲೋಕೇಶ್ ಮೊದಲಾದವರು ಇದ್ದಾರೆ. ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣ ಇದೆ. ವಿವೇಕ್ ಚಕ್ರವರ್ತಿ ಮತ್ತು ಪೂರ್ಣಚಂದ್ರ ತೇಜಸ್ವಿಯವರು ಸಂಗೀತ ನೀಡಿದ್ದಾರೆ. ವೆಂಕಿ ಯು ಡಿ ವಿ ಸಂಕಲನ ನಿರ್ವಹಿಸಿದ್ದು ಮತ್ತು ಆರ್ಯ ರೋಷನ್ ಅವರು ನೃತ್ಯ ನಿರ್ದೇಶಕರಾಗಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.