ಸುಳ್ಯ ಗ್ರಾಮಸ್ಥರ ಹಣದಿಂದಲೇ ನಿಮಾ೯ಣವಾಯ್ತು ಸೇತುವೆ

ಮಂಗಳೂರು,ಜೂ.26: ಜನರ ಸಮಸ್ಯೆಯನ್ನು ಬಗೆಹರಿಸುವುದು ಸಕಾ೯ರದ ಕತ೯ವ್ಯವಾಗಿದೆ ಆದರೆ ಇಲ್ಲಿ ಒಂದು ಊರಿನ ಜನರ ಸಮಸ್ಯೆಯನ್ನು ಬಗೆಹರಿಸಲು ಯಾವ ಸಕಾ೯ರ ಕೂಡ ಮುಂದಾಗಿಲ್ಲ. ರಾಜ್ಯ ಸಕಾ೯ರಕ್ಕೂ ಕೂಡ ಪತ್ರ ಬರೆದಾಯ್ತು, ಪ್ರಧಾನಿ ಮೋದಿಗೂ ಪತ್ರ ಬರೆದಾಯ್ತು ಯಾರು ಗಮನ ಹರಿಸಲಿಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೆವೆ ಎಂದು ಮುಂದಾದ ಊರಿನ ಜನರ ಕಥೆಯನ್ನ ನೊಡಿ.

ಹೌದು ಕನಾ೯ಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಊರು. ಮಳೆಗಾಲ ಬಂತು ಅಂದ್ರೆ ಇಲ್ಲಿನ ಜನ ಪರದಾಡುತ್ತಾರೆ. . ತಮ್ಮೂರಿನ ಹೊಳೆಯನ್ನು ದಾಟಿ ಇವರು ಪಟ್ಟಣಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ಹೋಗಬೇಕಿತ್ತು. ಹೀಗಾಗಿ ತಮ್ಮೂರಿನ ಹೊಳಗೆ ಶಾಶ್ವತ ಸೇತುವೆ ಬೇಕೆಂದು ಶಾಸಕ-ಸಚಿವರುಗಳಿಗೆ ಮನವಿ ಸಲ್ಲಿಸಿದರು. ಆದರೆ, ಇದು ಪ್ರಯೋಜನಕಾರಿಯಾಗದೇ ನೇರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.

ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಬರದ ಕಾರಣ ಊರಿನ ಜನರೇ ಸೇತುವೆಯನ್ನು ನಿಮಿ೯ಸಲು ಮುಂದಾದರು. ಊರ ಮಂದಿಯ ಒಗ್ಗಟ್ಟಿನ ಹೋರಾಟ ನಿಜಕ್ಕೂ ಮೆಚ್ಚುವಂಥದ್ದು.ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ನದಿ-ಹಳ್ಳಗಳು ತುಂಬಿ ಮೈದುಂಬಿ ಹರಿಯಲು ಆರಂಭವಾಗಿದೆ. ಇದರ ಜೊತೆಗೆ ಹಲವು ಗ್ರಾಮೀಣ ಭಾಗಗಳ ಸಮಸ್ಯೆಗಳೂ ಮೈ ಕೊಡವಿ ನಿಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಗ್ರಾಮದ ಜನರ ಅಭಿವೃದ್ಧಿ ಯ ಆಶಾಭಾವ ಕಮರಿ ಹೋಗಿದ್ದು, ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಕಾದು, ಬಸವಳಿದು ತಮ್ಮೂರಿನ ಸಮಸ್ಯೆಗೆ ತಾವೇ ಪರಿಹಾರ ಕಂಡು ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

Exit mobile version