ಕೇಂದ್ರದ ಬಜೆಟ್ ಆತ್ಮನಿರ್ಭರ ಅಲ್ಲ, ಆತ್ಮ ಬರ್ಬಾದ್ ಬಜೆಟ್: ಸಿದ್ದರಾಮಯ್ಯ ಲೇವಡಿ

ಬೆಂಗಳೂರು, ಫೆ. 01: ಮೋದಿ ಆತ್ಮನಿರ್ಭರ ಅಲ್ಲ, ಆತ್ಮ ಬರ್ಬಾದ್‌ ಬಜೆಟ್‌ ನೀಡಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಬಜೆಟ್‌ 2021 ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಪಿಡುಗು, ಉದ್ಯೋಗ ನಷ್ಟ, ಕುಸಿದ ಆರ್ಥಿಕತೆಯಿಂದ ಹೈರಾಣಾಗಿರುವ ಜನರಿಗೆ ಈ ಬಾರಿ ಬಜೆಟ್‌ ಚೇತರಿಕೆ ದಾರಿ ಮಾಡಿಕೊಡುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಇದು ಆತ್ಮ ಬರ್ಬಾದ್‌ ಬಜೆಟ್‌ ಆಗಿದೆ ಎಂದು ಟೀಕಿಸಿದ್ದಾರೆ.

ಹೊಸದಾಗಿ ಕೃಷಿ ಸೆಸ್‌ಗಳನ್ನು ವಿಧಿಸಿದ್ದಾರೆ. ರೈತರ ಸಾಲ ಮನ್ನಾ ಬೇಡಿಕೆ ಈಡೇರಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆಗೂ ಕ್ರಮವಹಿಸಿಲ್ಲ. ಒಟ್ಟಾರೆ, ರೈತರ ಕಲ್ಯಾಣಕ್ಕೆ ಯಾವುದೇ ಯೋಜನೆಗಳಿಲ್ಲ ಎಂದು ಬೇಸರಿಸಿದ್ದಾರೆ.

ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಪ್ರಮಾಣ ಶೇ. 74ಕ್ಕೆ ಏರಿಸಲಾಗಿದೆ. ಖಾಸಗೀಕರಣದಿಂದ ವಿದ್ಯುತ್‌ ದರ ಹೆಚ್ಚಾಗಿದೆ. ಈ ಎಲ್ಲ ಕ್ರಮಗಳು ಮತ್ತೆ ಹಣದುಬ್ಬರಕ್ಕೆ ಕಾರಣವಾಗಲಿವೆ ಎಂದು ತಿಳಿಸಿದ್ದಾರೆ.

Latest News

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.