Visit Channel

ಅಧಿಕೃತವಾಗಿ ವಾಯುಪಡೆ ಸೇರ್ಪಡೆಗೊಂಡ ರಫೇಲ್‌

EhhsbJJUMAEcAKk

ದೆಹಲಿ: ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನ ಗುರುವಾರದಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮ ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ, ಸೇನೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದು, ಈಗಾಗಲೇ ಫ್ಲಾರೆನ್ಸ್ ಪಾರ್ಲಿ ಅವರು ದೆಹಲಿಗೆ ಆಗಮಿಸಿದ್ದಾರೆ.

ಕಳೆದ ಜುಲೈ 27ರಂದು ಫ್ರಾನ್ಸ್ ನಿಂದ 5 ರಫೇಲ್ ಯುದ್ಧ ವಿಮಾನ ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಬಂದಿಳಿದಿತ್ತು. ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ ನ ಭಾಗವಾಗಲಿದೆ ಈ ಯುದ್ಧ ವಿಮಾನ.

ಅಂಬಾಲಾದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ, ರಫೇಲ್ ವಿಮಾನದ ವಿದ್ಯುಕ್ತ ಅನಾವರಣ, ಸಾಂಪ್ರದಾಯಿಕ ‘ಸರ್ವ ಧರ್ಮ ಪೂಜೆ’, ರಫೇಲ್ ಮತ್ತು ತೇಜಸ್ ವಿಮಾನಗಳ ವಾಯು ಪ್ರದರ್ಶನ ಮತ್ತು ‘ಸಾರಂಗ್ ಏರೋಬ್ಯಾಟಿಕ್ ತಂಡವನ್ನು ಒಳಗೊಂಡಿರುತ್ತದೆ.

ಫ್ರಾನ್ಸ್​ನ ಡಸ್ಸಾಲ್ಟ್ ಏವಿಯೇಷನ್ ನೇತೃತ್ವದಲ್ಲಿ ನಿರ್ಮಾಣ ಗೊಳ್ಳುತ್ತಿರುವ 36 ರಫೇಲ್‌ ಯುದ್ಧ ವಿಮಾನಕ್ಕೆ ಭಾರತ 59 ಸಾವಿರ ಕೋಟಿ ವ್ಯಯಿಸುತ್ತಿದೆ. 2021ರೊಳಗೆ 36 ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿದೆ.

Latest News

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.