ಎನ್ ಡಿ ಆರ್ ಎಫ್ ಪಟ್ಟಿಯಿಂದ ಮೂಡಿಗೆರೆಯನ್ನು ಕೈಬಿಟ್ಟ ಸರ್ಕಾರ

ಬೆಂಗಳೂರು, ಆ. 12: ಎನ್ ಡಿ ಆರ್ ಎಫ್ ಪಟ್ಟಿಯಿಂದ ಮೂಡಿಗೆರೆ ತಾಲ್ಲೂಕನ್ನು ಕೈಬಿಟ್ಟಿರುವ ಅಸಮಧಾನ ಹಿನ್ನಲೆಯಲ್ಲಿ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಸರ್ಕಾರದ ವಿರುದ್ದವೇ ವಿಧಾನ ಸೌಧದ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ 2019 ರಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರವಾಹವಾಗಿತ್ತು ಆ ಸಂದರ್ಭದಲ್ಲಿ ಹಲವು ಮನೆಗಳು ಮತ್ತು ಕಾಫೀತೋಟಗಳು ಕೊಚ್ಚಿ ಹೋಗಿದ್ದವು ಆದರೂ ಕೂಡ ಸರ್ಕಾರ ನಮಗೆ ಪರಿಹಾರ ನೀಡದೆ ನಿರ್ಲಕ್ಷ ಮಾಡಿತ್ತು. ಇದೀಗ 2021ರಲ್ಲಿ ಕರ್ನಾಟಕದ 13 ಜಿಲ್ಲೆಗಳ 61 ತಾಲ್ಲೂಕುಗಳನ್ನು ಎನ್ ಡಿ ಆರ್ ಎಫ್ ಪಟ್ಟಿಯಲ್ಲಿ ಪ್ರವಾಹ ಪೀಡಿತ ತಾಲ್ಲೂಕೆಂದು ಘೋಷಿಸಲಾಗಿದೆ ಅದರೆ ಅದರಲ್ಲಿ ನಮ್ಮ ತಾಲ್ಲೂಕಿನ ಹೆಸಸರಿಲ್ಲ ಎಂದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಆರ್ ಅಶೋಕ್ ಎಂ.ಪಿ. ಕುಮಾರಸ್ವಾಮಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು ಈ ವೇಳೆ ಅಶೋಕ್ ಗೆ ಪ್ರತಿಕ್ರಿಯಿಸಿದ ಎಂ.ಪಿ. ಕುಮಾರಸ್ವಾಮಿ ನಾನು ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡಿಲ್ಲ ಆದರೂ ನನ್ನ ಮಾತಿಗೆ ಸರ್ಕಾರದಲ್ಲಿ ಬೆಲೆ ಸಿಗುತ್ತಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಸಚಿವರು ಬರುತ್ತಾರೆ ಆದರೆ ಅವರಿಂದ ನಮ್ಮ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಕೂಡ ಆಗುತ್ತಿಲ್ಲ. ಬಹುಶಃ ನಮ್ಮದು ಮೀಸಲಾತಿ ಕ್ಷೇತ್ರ ಎನ್ನುವ ಕಾರಣ ಇರಬಹುದು ಎಂದು ತಮ್ಮ ಅಸಮಧಾನ ಹೊರ ಹಾಕಿದರು. ಅಂತಿಮವಾಗಿ ಆರ್ ಅಶೋಕ್ ಎಂ.ಪಿ. ಕುಮಾರಸ್ವಾಮಿ ಅವರ ಮನವೊಲಿಸಲು ಯಶಸ್ವಿಯಾದ ಹಿನ್ನಲೆಯಲ್ಲಿ ಎಂ.ಪಿ. ಕುಮಾರಸ್ವಾಮಿ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

Exit mobile version