ಆರೋಗ್ಯದಲ್ಲಿ ಸಪೋಟಾ ಹಣ್ಣಿನ ಮಹತ್ವ

ಸಪೋಟಾದಲ್ಲಿ ಹೇರಳವಾದ ಎ, ಬಿ, ಸಿ ವಿಟಮಿನ್‌ಗಳಿದ್ದು, ದೃಷ್ಟಿದೋಷವನ್ನು ನಿವಾರಿಸಲು ಸಹಕಾರಿಯಾಗಿದೆ. ಇದರ ನಿತ್ಯ ಸೇವನೆಯಿಂದ ದೇಹದಲ್ಲಿ ಆಂಟಿ ಆಕ್ಸಿಡೆಂಟಾಗಿ ಕಾರ್ಯ ನಿರ್ವಹಿಸುತ್ತದೆ.

ನಿತ್ಯ ಇದನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ, ಜ್ಯೂಸ್ ಮಾಡಿ ಕುಡಿಯುವುದರಿಂದ  ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಚರ್ಮದ ಆರೋಗ್ಯಕ್ಕೆ ಇದು ಅತ್ಯುತ್ತಮವಾಗಿದೆ. ಸಪೋಟಾ ಹಣ್ಣಿನಲ್ಲಿ ಗ್ಲುಕೋಸ್ ಅಧಿಕವಾಗಿರುವುದರಿಂದ ದೇಹದಲ್ಲಿ  ಶಕ್ತಿ ವೃದ್ಧಿಯಾಗುತ್ತದೆ.

ಕ್ಯಾಲ್ಸಿಯಂ ರಂಜಕ ಕಬ್ಬಿಣಾಂಶವನ್ನು ತನ್ನೊಳಗಿಟ್ಟುಕೊಂಡಿರುವ ಸಪೋಟಾ ಜೀರ್ಣಕ್ರಿಯೆಗೆ ಸಹಕಾರಿಯಾಗಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುವುದರ ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಗರ್ಬಿಣಿಯರಿಗೆ ಕೂಡಾ ಇದು ಅತ್ಯುತ್ತಮ ಪೋಷಕಾಂಶಗಳನ್ನು ನೀಡುತ್ತದೆ.

Exit mobile version