ಕಿಡಿಗೇಡಿ ಸಿನಿಮಾಗೆ ತೆರಿಗೆ ವಿನಾಯ್ತಿ ಯಾಕೆ? : ರಣಧೀರ ಪಡೆ!

cm

ಸದ್ಯ ಭಾರತದಲ್ಲಿ ನೋಡುಗರ ಗಮನ ಸೆಳೆಯುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’(The Kashmir Files) ಚಿತ್ರಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ(Kashmir Pandits) ಮೇಲೆ ಅವರ ಸ್ವಂತ ನೆಲೆದ ಮೇಲಾದ, ದೌರ್ಜನ್ಯದ ಕಥಾಹಂದರ ಹೊಂದಿರುವ ಈ ಚಿತ್ರ, ಭಾವನಾತ್ಮಕವಾಗಿ(Emotionally) ನೋಡುಗರನ್ನು ಸೆಳೆಯುತ್ತಿದೆ. ಇನ್ನು ಈ ಚಿತ್ರಕ್ಕೆ ಕರ್ನಾಟಕ(Karnataka) ರಾಜ್ಯ(State) ಸರ್ಕಾರ(Government) ತೆರಿಗೆ ವಿನಾಯ್ತಿ ಘೋಷಿಸಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಈ ಕ್ರಮಕ್ಕೆ ಕರ್ನಾಟಕ ರಣಧೀರ ಪಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ದಿ ಕಾಶ್ಮೀರ್ ಫೈಲ್ಸ್’ ಅದೊಂದು ಕಿಡಿಗೇಡಿ ಸಿನಿಮಾ.

ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಇಂತಹ ಸಿನಿಮಾ ಮಾಡುತ್ತಾರೆ. ಇದು ಸಾಮಾಜಿಕ ಸಿನಿಮಾವಲ್ಲ, ಶಾಂತಿ ಕದಡುವ ಸಿನಿಮಾ. ಸುಳ್ಳುಗಳನ್ನ ಅತಿರಂಜಿತವಾಗಿ, ಭಾವನಾತ್ಮಕವಾಗಿ, ಭೀಬತ್ಸವಾಗಿ ತೋರಿಸುವ ಮೂಲಕಜನರ ಮಧ್ಯೆ ಅಪನಂಬಿಕೆ ಹುಟ್ಟಿಸಲಾಗುತ್ತಿದೆ. ಇಂತಹ ಕಿಡಿಗೇಡಿ ಸಿನಿಮಾಗಾಗಿ ಕರ್ನಾಟಕ ಸರ್ಕಾರ ತೆರಿಗೆ ವಿನಾಯ್ತಿ ನೀಡಿರುವ ಕ್ರಮ, ಕನ್ನಡಿಗರ ಖಜಾನೆಗೆ ಮಾಡಿರುವ ದೋಖಾ ಎಂದು ಕರ್ನಾಟಕ ರಣಧೀರ ಪಡೆ ಸಿಎಂ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.


ಇನ್ನು ಕೊರೋನಾ ಕಾಲದಿಂದಲೂ ಕರ್ನಾಟಕ ಚಿತ್ರರಂಗ ಸಾಕಷ್ಟು ಸಂಕಷ್ಟ ಎದುರಿಸುತ್ತಿದೆ. ಸಾವಿರಾರೂ ಕಾರ್ಮಿಕರು, ತಂತ್ರಜ್ಞರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಸಂಕಟಕ್ಕೆ ಮಿಡಿಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನಸ್ಸು, ಯಾವುದೋ ಅನ್ಯಭಾಷೆಯ, ಕರ್ನಾಟಕಕ್ಕೆ ಸಂಬಂಧ ಪಡದ ‘ದಿ ಕಾಶ್ಮೀರಿ ಫೈಲ್ಸ್’ ಎಂಬ ಚಿತ್ರಕ್ಕೆ ಮಿಡಿದಿರುವುದು ನಿಜಕ್ಕೂ ದುರದೃಷ್ಠಕರ. ಸಿಎಂ ಬೊಮ್ಮಾಯಿ ಅವರ ಈ ನಡೆಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಬಿಜೆಪಿಯ ಪರೋಕ್ಷ ಹೈಕಮಾಂಡ್ ಆಗಿರುವ ಆರ್‍ಎಸ್‍ಎಸ್ ನಾಯಕರನ್ನು ಮೆಚ್ಚಿಸಲು ಸಿಎಂ ಬೊಮ್ಮಾಯಿಯವರು ಈ ಕ್ರಮ ತೆಗೆದುಕೊಂಡಿದ್ದು, ಈ ಮೂಲಕ ಕನ್ನಡಿಗರ ಖಜಾನೆಗೆ ತೂತು ಮಾಡಿದ್ದಾರೆ. ಸಿಎಂ ಬೊಮ್ಮಾಯಿಯವರು ತಕ್ಷಣವೇ ಇದನ್ನು ನಿಲ್ಲಿಸಬೇಕು. ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡು, ರಾಜಧರ್ಮ ಪಾಲಿಸಬೇಕೆಂದು ಆಗ್ರಹಿಸಿದರು. ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಠಿಸುವ, ಉತ್ತಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಿನಿಮಾಗಳಿಗೆ ತೆರಿಗೆ ನಿನಾಯ್ತಿ ನೀಡುವುದರಿಂದ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸುತ್ತದೆ.

ಆದರೆ ‘ದಿ ಕಾಶ್ಮೀರಿ ಫೈಲ್ಸ್’ನಂತ ಸಿನಿಮಾಗಳಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ ಸಮಾಜವನ್ನು ರೂಪಿಸುವತ್ತ ಸಿಎಂ ಬೊಮ್ಮಾಯಿಯವರು ಗಮನ ಹರಿಸಬೇಕಿದೆ. ಅದನ್ನು ಬಿಟ್ಟು ಈ ರೀತಿಯ ಕಿಡಿಗೇಡಿ ಸಿನಿಮಾಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕೆಂದು ಕರ್ನಾಟಕ ರಣಧೀರ ಪಡೆ ಸಿಎಂ ಬೊಮ್ಮಾಯಿಯವರನ್ನು ಆಗ್ರಹಿಸಿದೆ.

Exit mobile version