“ದಿ ಕೇರಳ ಸ್ಟೋರಿ” ಚಿತ್ರ ಬ್ಯಾನ್ಮಾಡುವಂತೆ ಒತ್ತಾಯ ; ಅಷ್ಟಕ್ಕೂ ಈ ಸಿನಿಮಾದಲ್ಲಿ ಏನಿದೆ?

Thiruvananthapuram : ವಿಪುಲ್ ಅಮೃತ್ಲಾಲ್ ಷಾ(Vipul Amritlal Shah) ನಿರ್ಮಾಣದ “ದಿ ಕೇರಳ ಸ್ಟೋರಿ”(The kerala story) ಚಿತ್ರ ಬಿಡುಗಡೆಗೆ ಮುಂಚೆಯೇ ವಿವಾದವನ್ನು ಎಬ್ಬಿಸಿದೆ. ಈ ಚಿತ್ರದ ಟೀಸರ್ ಬಿಡುಗಡೆಯಾದ ನಂತರ ಈ ಚಿತ್ರವನ್ನು ಬ್ಯಾನ್ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಅನೇಕ ರಾಜಕೀಯ ನಾಯಕರು ಪತ್ರ ಬರೆದು ಒತ್ತಾಯಿಸಿದ್ದಾರೆ.

ದಿ ಕೇರಳ ಸ್ಟೋರಿ (The kerala story)ಸಿನಿಮಾ ದೊಡ್ಡ ಮಟ್ಟದ ವಿವಾದ ಹುಟ್ಟುಹಾಕಿದೆ. ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಚಿತ್ರದ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ.

ಈ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್‌ಗೆ ಅನುಮತಿ ಕೊಡಬಾರದು ಎಂದು ಕೇರಳ ಸಿಮಂ‌ಗೆ ಪತ್ರ ಕೂಡ ಬರೆಯಲಾಗಿದೆ. 

ಸುದೀಪ್ತೋ ಸೇನ್(Sudipto Sen) ನಿರ್ದೇಶನದ ಈ ಚಿತ್ರದಲ್ಲಿ, ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಿ,

ಅವರನ್ನು ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಗತಿಯನ್ನು ಆಧಾರವಾಗಿಟ್ಟುಕೊಂಡು, ಈ ಚಿತ್ರದ ಕಥಾಹಂದರ ರೂಪಗೊಂಡಿದೆ.

ಟೀಸರ್(Teaser) ನಲ್ಲಿ ಅದಾ ಪಾತ್ರಧಾರಿ ಶಾಲಿನಿ ಉನ್ನಿಕೃಷ್ಣನ್, “ಈಗ ನಾನು ಫಾತಿಮಾ, ಅಫ್ಘಾನಿಸ್ತಾನದ ಜೈಲಿನಲ್ಲಿರುವ ಐಸಿಸ್ ಭಯೋತ್ಪಾದಕಿ” ಎಂದು ಅವಳು ಹೇಳುತ್ತಾಳೆ.

“32,000 ಹುಡುಗಿಯರು ಸಹ ತನ್ನಂತೆ ನೇಮಕಗೊಂಡಿದ್ದಾರೆ ಮತ್ತು ಮತಾಂತರಗೊಂಡಿದ್ದಾರೆ” ಎಂದು ಸಂಭಾಷಣೆ ಇದೆ. ಹೀಗಾಗಿ ಈ ಚಿತ್ರ ಬಿಡುಗಡೆಯಾದರೆ, ಕೇರಳದ ಘನತೆಗೆ ಧಕ್ಕೆಯುಂಟಾಗುತ್ತದೆ.

ಇದನ್ನೂ ಓದಿ : https://vijayatimes.com/2023-odi-world-cup/

ಹೀಗಾಗಿ ಈ ಚಿತ್ರವನ್ನು ನಿಷೇಧ ಮಾಡಬೇಕೆಂದು ಅನೇಕ ರಾಜಕೀಯ ನಾಯಕರು ಒತ್ತಾಯಿಸಿದ್ದಾರೆ. ಇನ್ನು ಚಿತ್ರದ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಷಾ,

ನಾವು ಚಿತ್ರದಲ್ಲಿ ಹೇಳುವ ಎಲ್ಲ ಸಂಗತಿಗಳಿಗೂ ಪುರಾವೆಗಳಿವೆ. ನಾವು ಸತ್ಯ ಮತ್ತು ಅಂಕಿಅಂಶಗಳನ್ನು ಜನರಿಗೆ ನೀಡುತ್ತೇವೆ.

ಇದನ್ನೂ ಓದಿ : https://vijayatimes.com/travel-abroad-without-visa/

ಅದನ್ನು ಒಪ್ಪಿಕೊಳ್ಳಬೇಕೆ ಅಥವಾ ಬೇಡವೇ ಎಂಬುದು ಅವರ ಆಯ್ಕೆಯಾಗಿದೆ. ನಿರ್ದೇಶಕ ಸುದೀಪ್ತೋ ಸೇನ್ ಸಿನಿಮಾ ಆರಂಭಿಸುವ ಮುನ್ನ ನಾಲ್ಕು ವರ್ಷಗಳ ಕಾಲ ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ನಾವು ದೊಡ್ಡ ದುರಂತದ ಮೇಲೆ ಚಿತ್ರ ಮಾಡುತ್ತಿದ್ದೇವೆ. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ, ನಾನು ನನ್ನ ಹೃದಯವನ್ನು ಸ್ಪರ್ಶಿಸುವ ಕಥೆಯ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Exit mobile version