ಪರಿಸರ ಪ್ರೇಮಿಯೊಬ್ಬರ ಏಕಾಂಗಿ ಹೋರಾಟ

ಮುಂಡಗೋಡ, ಜೂ. 14: ತಾಲೂಕಿನ ಅರಣ್ಯ ಲೂಟಿ ಆಗ್ತಿದೆ. ಔಷಧಿ ಸಸ್ಯಗಳೂ ಸೇರಿ ಇಲ್ಲಿನ ಅರಣ್ಯದಲ್ಲಿ ಹೇರಳವಾಗಿರೋ ಅರಣ್ಯ ಸಂಪತ್ತು ಕಳ್ಳರ ಪಾಲಾಗ್ತಿದೆ. ಹೀಗಿದ್ರೂ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡು ತೋರಿಸ್ತಿದಾರೆ ಅಂತಾ ಆರೋಪಿಸಿ, ಮುಂಡಗೋಡ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪರಿಸರ ಪ್ರೇಮಿಯೊಬ್ರು ಏಕಾಂಗಿಯಾಗಿ ಧರಣಿಗೆ ಕುಳಿತಿರೋ ಅಪರೂಪದ ಘಟನೆ ನಡೆದಿದೆ.

ಕರ್ನಾಟಕ ವೈಲ್ಡ್ ಲೈಫ್ ಗ್ರೂಪ್ ನ ಅಧ್ಯಕ್ಷ ಶಂಶುದ್ಧೀನ್ ಮಾರ್ಕರ್ ಎನ್ನುವವರೇ ಏಕಾಂಗಿಯಾಗಿ ಮುಂಡಗೋಡ ವಲಯ ಅರಣ್ಯಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತಿದ್ದಾರೆ.

ಅಂದಹಾಗೆ, ಇವ್ರು ಆರೋಪಿಸೋ ಪ್ರಕಾರ ಗುಂಜಾವತಿ ಸೇರಿದಂತೆ ತಾಲೂಕಿನ ಬಹುತೇಕ ಅರಣ್ಯ ಪ್ರದೇಶದಲ್ಲಿ ಹೇರಳವಾಗಿರೋ ಬಲೆ ಬಾಳುವ ಸಾಗವಾನಿ, ಸೀಸಂ ಶ್ರೀಗಂಧ ಸೇರಿ ಹಲವು ಬಗೆಯ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದೆ. ನಿತ್ಯವೂ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ.

ಇದೇಲ್ಲ ಇಲ್ಲಿನ ಅರಣ್ಯ ಅಧಿಕಾರಿಗಳ ಕಣ್ಣೇದುರೇ ನಡೆಯುತ್ತಿದ್ರೂ ಯಾರೂ ಅದನ್ನ ತಡೆಯುವ ಸಾಹಸ ಮಾಡುತ್ತಿಲ್ಲ.. ಇಲ್ಲಿನ ಅರಣ್ಯ ಅಧಿಕಾರಿಗಳೇಲ್ಲ ರಾಜಕೀಯ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಹೀಗಾಗಿ ಇಲ್ಲಿನ ಅರಣ್ಯ ಸಂಪತ್ತನ್ನು ರಕ್ಷಿಸುವವರು ಯಾರು..? ಅಂತಾ ಪ್ರಶ್ನಿಸಿದ್ದಾರೆ.

ಅಲ್ದೇ ಯಾರಾದ್ರೂ ಸಾರ್ವಜನಿಕರು ಅರಣ್ಯಲೂಟಿಯ ಬಗ್ಗೆ ಪ್ರಶ್ನಿಸಿದ್ರೆ ಅರಣ್ಯ ಇಲಾಖೆಯ ಅಧಿಕಾರಿಗಳು ಅವಾಚ್ಯವಾಗಿ ನಿಂದಿಸ್ತಾರೆ ಅಂತಾ ಶಂಶುದ್ಧೀನ್ ಆರೋಪಿಸಿದ್ದಾರೆ. ಹೀಗಾಗಿ ಅನಿರ್ಧಿಷ್ಟ ಕಾಲ ದರಣಿಗೆ ಕುಳಿತಿರೋ ಶಂಶುದ್ಧಿನ್ ಕ್ರಮಕ್ಕೆ ಆಗ್ರಹಿಸಿದ್ದಾರೆ.

Exit mobile version