Visit Channel

ಕಳೆದ 24 ದಿನಗಳಲ್ಲಿ ಅತೀ ಕಡಿಮೆ ಕೊರೊನಾ ಕೇಸ್ ದಾಖಲು: 60,471 ಹೊಸ ಕೊವಿಡ್ -19 ಪ್ರಕರಣ

319718852-corona-1532x900-adobestock

ನವದೆಹಲಿ,ಜೂ.15: ದೇಶದಲ್ಲಿ ಕಳೆದ ೨೪ಗಂಟೆಗಳಲ್ಲಿ 60,471 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಆಗಿದ್ದು ಇದು 75 ದಿನಗಳಲ್ಲಿ ಅತೀ ಕಡಿಮೆ ಕಂಡುಬಂದ ಪ್ರಕರಣಗಳಾಗಿವೆ. ಇನ್ನು ಇದೇ ಅವಧಿಯಲ್ಲಿ 2,726 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. 2,726 ಸಾವು ಪ್ರಕರಣಗಳ ಪೈಕಿ 1,600 ಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 2,95,70,881ಕ್ಕೆ ತಲುಪಿದ್ದು ಸಾವಿನ ಸಂಖ್ಯೆ 3,77,031ಕ್ಕೆ ಏರಿದೆ . ಪ್ರಸ್ತುತ 9,13,378 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 2,82,80,472 ಜನರು ಚೇತರಿಸಿಕೊಂಡಿದ್ದಾರೆ. 25,90,44,072 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಚೇತರಿಕೆ ದರ ಶೇ 95.64 ಏರಿಕೆ ಆಗಿದ್ದು, ಸಾಪ್ತಾಹಿಕ ಸಕಾರಾತ್ಮಕ ದರವು ಶೇ 5 ಕ್ಕಿಂತ ಕಡಿಮೆಯಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.