ಹೆಸರು ಕಾಳಿನಲ್ಲಿದೆ ಆರೋಗ್ಯಕರ ಸತ್ವ

ಹೆಸರು ಕಾಳು ಎಂಬ ದ್ವಿದಳ ಧಾನ್ಯವು ಆರೋಗ್ಯಕರ ಪೋಷಕಾಂಶಗಳಿಂದ ಕೂಡಿದ್ದು, ವಿಟಮಿನ್‌- ಬಿ-2, ಬಿ-3, ಬಿ-5, ಬಿ-6 ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ಮೊಳಕೆಯೊಡೆದ ಹೆಸರು ಕಾಳಿನ ಪೌಷ್ಟಿಕಾಂಶದ ಸಂಯೋಜನೆಯು ಬದಲಾಗಿರುತ್ತದೆ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿರುವುದಲ್ಲದೇ, ಹೆಚ್ಚಿನ ರೋಗ ನಿರೋಧಕ ಅಂಶಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.

ಇದರಿಂದಾಗಿ ದೀರ್ಘಕಾಲಿಕ ಕಾಯಿಲೆಗಳಾದ ಹೃದ್ರೋಗ, ಮಧುಮೇಹ ಹಾಗೂ ಹಲವು ಕ್ಯಾನ್ಸರ್‌ಕಾರಕ ಅಪಾಯಕಾರಿ ಕಾಯಿಲೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.

ವಯಸ್ಕರಲ್ಲಿ ಕಂಡು ಬರುವ ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಕಾರ್ಬನ್‌ ಅಂಶಗಳು ಇತರ ದ್ವಿದಳ ಧಾನ್ಯಗಳಿಗಿಂತ ಗ್ಯಾಸ್ಟ್ರಿಕ್‌ ಉಂಟುಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಇದು ಹಸಿವಿನ ನಿಗ್ರಹಕ್ಕೆ ಸಹಾಯಕವಾಗಿದೆಯಲ್ಲದೇ, ತೂಕ ಇಳಿಸುವ ಆರೋಗ್ಯಕರ ಸತ್ವವನ್ನು ಹೊಂದಿದೆ.  

Exit mobile version