ಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆ ರಾಜ್ಯ ಸರ್ಕಾರ

ಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆ ರಾಜ್ಯ ಸರ್ಕಾರ | Artisan's must be taken care by the State Government.

ಯಾವುದೇ ಕೆಲಸಗಳಿಲ್ಲದೇ, ಯಾವುದೇ ಸವಲತ್ತುಗಳಿಲ್ಲದೇ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಕುಶಲಕರ್ಮಿಗಳು ಅನುಭವಿಸುತ್ತಿದ್ದಾರೆ ಈ ಬಗ್ಗೆ ವಿಜಯಟೈಮ್ಸ್‌ನ ಒಂದು ಸಣ್ಣ ವರದಿ ನಿಮ್ಮ ಮುಂದೆ….

ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ರೈತರು ತಮ್ಮ ಜತೆಗೆ ನೂರಾರು ವರ್ಗಗಳನ್ನು ಕಾಪಾಡುತ್ತಾರೆ ಅಂತಹ ವರ್ಗಗಳಲ್ಲಿ ಕುಶಲಕರ್ಮಿಗಳು ಒಳಗೊಂಡಿರುತ್ತಾರೆ. ಅದರಲ್ಲಿಯೂ ಬಡಿಗೇರ, ಕಮ್ಮಾರ, ಕೊರವ, ಕೂಲಿ ಕಾರ್ಮಿಕರು ಮತ್ತಿತರು ರೈತರ ಬದುಕಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅಲ್ಲದೇ ರೈತರ ನಾಡಿ ಮಿಡಿತವಾಗಿದ್ದಾರೆ.

ಕುಶಲಕರ್ಮಿಗಳು ತಮ್ಮ ಕೌಶಲ್ಯಗಳಿಂದಲೇ ಗುರುತಿಸಿಕೊಂಡಿರುತ್ತಾರೆ.  ಇವರು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅಲ್ಲದೇ ಇವರ ಸಂಸ್ಕೃತಿ ಆಚಾರ, ವಿಚಾರಗಳು ವಿಭಿನ್ನ. ಇವರು ಸಣ್ಣ ಸಣ್ಣ ಕುಸುರಿ ಕೆಲಸಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಡಿದ್ದಾರೆ.

ಕೃಷಿಯಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಆದರೆ ಪ್ರಸ್ತುತ ಯುಗದಲ್ಲಿ ಆಧುನಿಕ ಕೈಗಾರಿಕೆಗಳು ಹಾಗೂ ಕೃಷಿ ಯಂತ್ರೋಪಕರಣಗಳ ಭರಾಟೆಯಿಂದಾಗಿ ಇವರ ಕೌಶಲ ಮರೆಮಾಚಿದೆ.

ಅಲ್ಲದೇ ಈ ಕುಶಲಕಮರ್ಮಿಗಳಿಗಸೂಕ್ತ ಕೆಲಸಗಳು ಲಭಿಸುತ್ತಿಲ್ಲ. ಅಲ್ಲದೇ ಇವರ ಗುರುತಿಸುವಿಕೆಯೂ ಕಡಿಮೆಯಾಗಿದೆ. ಇದರಿಂದಾಗಿ ಇವರ  ಜೀವನ ಸಂಕಷ್ಟದಲ್ಲಿದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ.

ಈ ಕೌಶಲ್ಯವನ್ನೇ ನಂಬಿದ ವರ್ಗದ ಗೋಳು ಹೇಳತೀರದು. ಇವರ ಅಳಲನ್ನು ಯಾವುದೇ ಸಕರ್ಕಾರವಾಗಲೀ, ಸ್ಥಳೀಯ ಆಡಳಿತಗಳಾಗಲೀ, ಗಮನಹರಿಸುತ್ತಿಲ್ಲ ಎಂಬುದು ಈ ಕುಶಲಕರ್ಮಿಗಳ ವೇದನೆಯಾಗಿದೆ.

ಇನ್ನು ಲಾಕ್‌ಡೌನ್‌ನಿಂದಾಗಿ ಇವರ ಜೀವನ ಸಂಪೂರ್ಣ ಕಷ್ಟದಲ್ಲಿದೆ. ಯಾವುದೇ ರೀತಿಯ ಸೌಲಭ್ಯಗಳಾಗಲೀ, ಯಾವುದೇ ಪರಿಹಾರಗಳಾಗಲೀ, ಘೋಷಣೆಯಾಗಿಲ್ಲ.   ಇವರ ಯೋಗಕ್ಷೇಮವನ್ನು ಸ್ಥಳೀಯ ಆಡಳಿತಗಳು ನೋಡಿಕೊಳ್ಳಬೇಕು, ಈ ಕುಟುಂಬಗಳನ್ನು ಸಂರಕ್ಷಿಸಬೇಕೆಂಬುದು ಈ ವರ್ಗದ ಜನರ ಮನವಿಯಾಗಿದೆ.

ಇನ್ನಾದರೂ, ಸ್ಥಳೀಯ ಆಡಳಿತಗಳು ಅಥವಾ ಸರ್ಕಾರಗಳು ಈ ವರ್ಗದ ಜನರನ್ನು ಗುರುತಿಸಿ, ಅವರಿಗೆ ಬೇಕಾದ ಸವಲತ್ತುಗಳನ್ನು ಹಾಗೂ ಸೌಲಭ್ಯಗಳನ್ನು ಒದಗಿಸಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ಕೂಡ್ಲಿಗಿಯಿಂದ ಸಿಟಿಜನ್‌ ಜರ್ನಲಿಸ್ಟ್‌ ವಿ.ಜಿ.ವೃಷಭೇಂದ್ರ ವಿಜಯಟೈಮ್ಸ್‌

Exit mobile version