ಕಾಲಿಗೆ ಕಪ್ಪುದಾರವನ್ನು ಕಟ್ಟುವುದರಿಂದ ಸಿಗುವ ಪ್ರಯೋಜನಗಳಿವು

ಸಾಮಾನ್ಯವಾಗಿ ದುಷ್ಟ ಶಕ್ತಿಗಳ ದೃಷ್ಠಿ ಅಥವಾ ನಕಾರಾತ್ಮಕ ಶಕ್ತಿಯನ್ನು ದೂರಮಾಡಲು ಕಪ್ಪುದಾರವನ್ನು ಕೈ-ಕಾಲು, ಕುತ್ತಿಗೆ, ಸೊಂಟ ಅಥವಾ ತೋಳುಗಳಿಗೆ ಕಟ್ಟಿಕೊಳ್ಳುತ್ತೇವೆ. ಆದರೆ ಕಪ್ಪುದಾರವನ್ನು ಕಟ್ಟುವುದರ ಹಿಂದೆ ಇನ್ನೂ ಅನೇಕ ನಂಬಿಕರ್ಹ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿದ್ಯಾ? ಆಧ್ಯಾತ್ಮಿಕತೆಯ ಜತೆಗೆ ವೈಜ್ಞಾನಿಕವಾಗಿಯೂ ಸಾಬೀತಾಗಿರುವ ಇದರ ಅನೇಕ ಪ್ರಯೋಜನಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಈ ಲೇಖನದಲ್ಲಿ ನೋಡೋಣ.

ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಆಗುವ ಅನುಕೂಲಗಳು ಮತ್ತು ಮುನ್ನೆಚ್ಚರಿಕೆಗಳನ್ನು ಈ ಕೆಳಗೆ ನೀಡಲಾಗಿದೆ:

ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಆಗುವ ಆಧ್ಯಾತ್ಮಿಕ ಪ್ರಯೋಜನಗಳು:
ವ್ಯಕ್ತಿಯನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುವಲ್ಲಿ ಈ ಕಪ್ಪುದಾರ ಸಹಾಯ ಮಾಡುತ್ತದೆ. ಕಪ್ಪನ್ನು ಅಪಶಕುನ ಎಂದರೂ ಸಹ, ಯಾವುದೇ ರೀತಿಯ ಅಪಶಕುನ ಸಂಭವಿಸಬಾರದೆಂದು ಇದೇ ಕಪ್ಪು ದಾರಗಳನ್ನು ಕಟ್ಟಿಕೊಳ್ಳುತ್ತಾರೆ. ಜೊತೆಗೆ ಈ ದಾರ ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ. ಶನಿ ಗ್ರಹಕ್ಕೂ ಕಪ್ಪು ಬಣ್ಣಕ್ಕೂ ಸಂಬಂಧ ಹೊಂದಿದೆ. ಶನಿಯು ಕಪ್ಪು ಬಣ್ಣದ ಅಂಶವಾಗಿದ್ದು, ಕಪ್ಪು ದಾರವನ್ನು ಧರಿಸುವುದರಿಂದ ಜಾತಕದಲ್ಲಿರುವ ಶನಿದೋಷವು ನಿವಾರಣೆಯಾಗುತ್ತದೆ.

ಆರ್ಥಿಕ ಲಾಭಕ್ಕಾಗಿ ಈ ದಿನ ಕಪ್ಪು ದಾರವನ್ನು ಕಟ್ಟಿಕೊಳ್ಳಿ:
ಮಂಗಳವಾರದಂದು ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ತುಂಬಾ ಪ್ರಯೋಜನಕಾರಿ. ಈ ದಿನ ಕಪ್ಪು ದಾರವನ್ನು ಬಲ ಕಾಲಿಗೆ ಕಟ್ಟುವುದು ಶುಭ ಫಲಿತಾಂಶ ತರುತ್ತದೆ. ಅದರ ಪರಿಣಾಮದಿಂದಾಗಿ, ವ್ಯಕ್ತಿಯ ಆರ್ಥಿಕ ಜೀವನವು ಸುಧಾರಣೆಯಾಗುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ.

ಕಪ್ಪು ದಾರ ಆರೋಗ್ಯಕ್ಕೆ ಪರಿಣಾಮಕಾರಿ
ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಆರೋಗ್ಯಕ್ಕೂ ಪ್ರಯೋಜನಕಾರಿ. ಹೊಟ್ಟೆನೋವಿನಿಂದ ಬಳಲುತ್ತಿರುವ ವ್ಯಕ್ತಿಯು ಈ ದಾರವನ್ನು ತನ್ನ ಕಾಲ್ಬೆರಳಿಗೆ ಕಟ್ಟಿದರೆ, ಅವನ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಕಾಲಿಗೆ ಕಟ್ಟುವುದರಿಂದ ಪಾದದಲ್ಲಿ ಆದ ಗಾಯಗಳು ಗುಣವಾಗುತ್ತವೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಮಕ್ಕಳಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ರಕ್ತಸಂಚಾರ ಆಗಲು, ತೂಕ ನಿಯಂತ್ರಣವಾಗಲು ಜೊತೆಗೆ ಜೀರ್ಣಕ್ರಿಯೆ ಉತ್ತಮವಾಗಲು ಸಹ ಸಹಕಾರಿಯಾಗಿದೆ.

ದುಷ್ಟ ಕಣ್ಣುಗಳಿಂದ ಮನೆಯನ್ನು ರಕ್ಷಿಸಲು ಕಪ್ಪು ದಾರವನ್ನು ಕಟ್ಟಿಕೊಳ್ಳಿ:
ನೀವು ಇದನ್ನು ಅನೇಕ ಮನೆಗಳ ಮುಖ್ಯ ದ್ವಾರ ಅಥವಾ ವ್ಯಾಪಾರ ಅಂಗಡಿಗಳಲ್ಲಿ ನೋಡಿರಬೇಕು. ದುಷ್ಟ ಕಣ್ಣುಗಳಿಂದ ಮನೆಯನ್ನು ರಕ್ಷಿಸಲು ಕಪ್ಪು ದಾರವನ್ನು ಬಳಸಲಾಗುತ್ತದೆ. ಇದಕ್ಕಾಗಿ, ನೀವು ನಿಂಬೆ-ಮೆಣಸಿನಕಾಯಿಯನ್ನು ಕಪ್ಪು ದಾರದಲ್ಲಿ ಕಟ್ಟಿ ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಬಹುದು.

ಕಪ್ಪು ದಾರವನ್ನು ಧರಿಸುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:
ಕಪ್ಪು ದಾರವನ್ನು ಧರಿಸಿದ ವ್ಯಕ್ತಿಯು ರುದ್ರ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ಮಂತ್ರ – ಓಂ ತತ್ಪುರುಶಾಯ ವಿಡ್ಮಹೇ ಮಹಾದೇವ ಧೇಮಿ ತನ್ನೋ ರುದ್ರ ಪ್ರಚೋದಯತ್
ಕಪ್ಪು ದಾರವನ್ನು ಕಟ್ಟಿರುವ ದೇಹದ ಭಾಗದಲ್ಲಿ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬೇಡಿ.
ಶನಿವಾರ ಕಪ್ಪು ದಾರವನ್ನು ಕಟ್ಟುವುದು ಶುಭ.

Exit mobile version