ಬೊಜ್ಜು ಕರಗಿಸಲು ಬೆಳಗಿನ ಸೇವಿಸಬೇಕಾದ ಆಹಾರ ಸಂಯೋಜನೆಗಳಿವು

ತೂಕ ಕರಗಿಸಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಎಷ್ಟೆಲ್ಲಾ ಸರ್ಕಸ್ ಮಾಡುತ್ತಿರುತ್ತಾರೆ. ಅದಕ್ಕೋಸ್ಕರ ನಿಮ್ಮಿಷ್ಟದ ಆಹಾರಗಳನ್ನು ತ್ಯಜಿಸುತ್ತಿರುತ್ತೀರಿ. ಆದರೆ ಕೆಲವೊಮ್ಮೆ ತೂಕ ಇಳಿಸುವ ಆಹಾರ ವಿಧಾನಗಳು ಉತ್ತಮ ಫಲಿತಾಂಶವನ್ನು ನೀಡದೇ ಇರಬಹುದು. ಅದಕ್ಕಾಗಿ ನೀವು ತೂಕ ಇಳಿಸಲು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆಹಾರ ಸಂಯೋಜನೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡುವುದಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

ಬೆಳಗ್ಗಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಆಹಾರ ಸಂಯೋಜನೆಗಳು ಇಲ್ಲಿವೆ:

ಬೆಚ್ಚಗಿನ ನೀರು ಮತ್ತು ನಿಂಬೆ ರಸ:
ನಿಂಬೆರಸ- ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ಪ್ರಯೋಜನಕಾರಿ. ಇದನ್ನು ಪ್ರತಿದಿನ ಬಳಸುವ ಮೂಲಕ, ನಿಮ್ಮ ತೂಕವನ್ನು ನೀವು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಕಿಬ್ಬೊಟ್ಟೆಯ ಕೊಬ್ಬನ್ನು ನಿಯಂತ್ರಿಸುವ ಜೊತೆಗೆ, ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ.

ಗ್ರೀನ್ ಟೀ ಮತ್ತು ನಿಂಬೆ:
ಹೆಚ್ಚುತ್ತಿರುವ ತೂಕವನ್ನು ಮೇಲ್ವಿಚಾರಣೆ ಮಾಡುವವರಿಗೆ ಗ್ರೀನ್ ಟೀ ಅತ್ಯುತ್ತಮ ಪಾನೀಯವೆಂದು ಪರಿಗಣಿಸಲಾಗಿದೆ. ಕಡಿಮೆ ಕ್ಯಾಲೋರಿ ಮತ್ತು ಆಂಟಿ-ಆಕ್ಸಿಡೆಂಟ್ ಹೊಂದಿರುವ ಪಾನೀಯಗಳು ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ ಮತ್ತು ಕಡಿಮೆ ಸಮಯದಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ದಿನಕ್ಕೆ 2-3 ಕಪ್ ಗ್ರೀನ್ ಟೀ ಯನ್ನು ಕುಡಿಯುವುದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಇದು ಹೆಚ್ಚು ಪರಿಣಾಮಕಾರಿಯಾಗಲು, ನೀವು ಇದಕ್ಕೆ ವಿಟಮಿನ್-ಸಿ ಸಮೃದ್ಧವಾಗಿರುವ ತಾಜಾ ನಿಂಬೆ ರಸವನ್ನು ಸೇರಿಸಬಹುದು.

ಮೊಟ್ಟೆ ಮತ್ತು ಪಾಲಕ :
ಉತ್ತಮ ಗುಣಮಟ್ಟದ ಪ್ರೋಟೀನ್ ಮೊಟ್ಟೆ ಮತ್ತು ಪಾಲಕ್ ಗಳಲ್ಲಿ ಕಂಡುಬರುತ್ತದೆ. ಈ ಪೌಷ್ಠಿಕ ಆಹಾರದ ಪಾಕವಿಧಾನ ತುಂಬಾ ಸುಲಭ ಮತ್ತು ತೂಕ ನಷ್ಟ ಸ್ನೇಹಿಯಾಗಿದೆ, ನೀವು ತೂಕ ಇಳಿಸುವ ಯೋಜನೆಯಲ್ಲಿದ್ದರೆ, ನಿಮ್ಮ ಆಮ್ಲೆಟ್ನಲ್ಲಿ ಪಾಲಕವನ್ನು ಸೇರಿಸಿ. ಅಧ್ಯಯನದ ಪ್ರಕಾರ, ಕಬ್ಬಿಣಾಂಶಯುಕ್ತ ಪಾಲಕ ಮೊಟ್ಟೆಗಳೊಂದಿಗೆ ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಸೇಬು ಮತ್ತು ಪೀನಟ್ ಬಟರ್:
ಸೇಬು ಮತ್ತು ಪೀನತ್ ಬಟರ್ ನ್ನು ಕ್ಲಾಸಿಕ್ ತೂಕ ನಷ್ಟ ಸ್ನೇಹಿ ಆಹಾರವೆಂದು ಪರಿಗಣಿಸಲಾಗುತ್ತದೆ. ಪೀನಟ್ ಬಟರ್ ನಲ್ಲಿ ಮೊನೊಸಾಚುರೇಟೆಡ್ ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬು ಇದ್ದು, ಇದು ದೀರ್ಘಕಾಲದವರೆಗೆ ಹಸಿವನ್ನು ತಡೆಯುತ್ತದೆ ಮತ್ತು ಇನ್ಸುಲಿನ್ ಚಯಾಪಚಯವನ್ನು ಸುಧಾರಿಸುತ್ತದೆ. ಸೇಬಿನೊಂದಿಗೆ ಪೀನಟ್ ಬಟರ್ ನ್ನು ತಿನ್ನುವುದು ನಿಮ್ಮ ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ.

ಎಲೆ ತರಕಾರಿಗಳು ಮತ್ತು ಆಲಿವ್ ಎಣ್ಣೆ:
ಹಸಿವನ್ನು ನಿಯಂತ್ರಿಸಲು ಹಸಿರು ಎಲೆಗಳ ತರಕಾರಿಗಳು ಮತ್ತು ಸಲಾಡ್‌ಗಳನ್ನು ಅತ್ಯುತ್ತಮ ಆಹಾರ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಆಲಿವ್ ಎಣ್ಣೆಯನ್ನು ಇದರಲ್ಲಿ ಸೇರಿಸಿದರೆ, ಇದರ ಲಾಭವು ದ್ವಿಗುಣವಾಗಿರುತ್ತದೆ. ಈ ಎರಡು ವಿಷಯಗಳನ್ನು ಒಟ್ಟಿಗೆ ತಿನ್ನುವುದರಿಂದ, ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ಮೊನೊಸಾಚುರೇಟೆಡ್ ಕೊಬ್ಬು ಭರಿತ ಆಲಿವ್ ಎಣ್ಣೆ ಮತ್ತು ಸೊಪ್ಪು ತರಕಾರಿಗಳು ನಿಮ್ಮ ಹಸಿವನ್ನು ನಿಯಂತ್ರಿಸಲು ಸಂಯೋಜಿಸುತ್ತವೆ.

Exit mobile version