ಮೊಣಕಾಲು ನೋವನ್ನು ಮತ್ತಷ್ಟು ಹೆಚ್ಚಿಸುವ ವಸ್ತುಗಳಿವು

ವೃದ್ಧಾಪ್ಯದಲ್ಲಿ ಮೊಣಕಾಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ಈ ನೋವು ಹೆಚ್ಚು ಸಮಯದವರೆಗೆ ಮುಂದುವರಿದರೆ ಅಥವಾ ನೋವಿನ ತೀವ್ರತೆ ಹೆಚ್ಚಾಗಿದ್ದರೆ ಚಿಕಿತ್ಸೆ ಅಗತ್ಯವಾಗುತ್ತದೆ. ಆದರೆ ಸಂಧಿವಾತ ಹೊಂದಿರುವ ಕೆಲವೊಂದು ಜನರು ತಾವು ಏನನ್ನಾದರೂ ತಿಂದ ಬಳಿಕ ಇದ್ದಕ್ಕಿದ್ದಂತೆ ನೋವು ಅನುಭವಿಸುತ್ತಾರೆ. ಹಾಗಾದರೆ ಆ ವಸ್ತುಗಳು ಯಾವುವು ಎಂದು ತಿಳಿಯುವುದು ಬಹಳ ಮುಖ್ಯ, ಈ ಆಹಾರಗಳ ಸೇವನೆಯು ಮೊಣಕಾಲುಗಳ ನೋವನ್ನು ಹೆಚ್ಚಿಸುತ್ತದೆ.

ಮೊಣಕಾಲು ನೋವನ್ನು ಹೆಚ್ಚಿಸುವ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:
ಫ್ರೆಂಚ್ ಫ್ರೈಸ್:
ಸಂಧಿವಾತದ ರೋಗಿಗಳು ಫ್ರೆಂಚ್ ಫ್ರೈಸ್ ನಂತಹ ಡೀಪ್ ಫ್ರೈಡ್ ವಸ್ತುಗಳನ್ನು ತಪ್ಪಿಸಬೇಕು, ಏಕೆಂದರೆ ಅವುಗಳನ್ನು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಸಸ್ಯಜನ್ಯ ಎಣ್ಣೆಗಳಲ್ಲಿ ತಯಾರಿಸಲಾಗುತ್ತದೆ. ಅಲ್ಲದೆ ಅವು ಕಾರ್ಬೋಹೈಡ್ರೇಟ್ ಮತ್ತು ಸೋಡಿಯಂನಲ್ಲಿ ಸಮೃದ್ಧವಾಗಿವೆ. ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಲು ಈ ಎಲ್ಲ ಸಂಗತಿಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ.

ಐಸ್ ಕ್ರೀಮ್ :
ಐಸ್ ಕ್ರೀಮ್ ಸೇವನೆಯಿಂದ ಜ್ವರ-ಶೀತ ಆಗುವುದು ಸಾಮಾನ್ಯ. ಇದರಿಂದ ದೇಹದ ನೋವು ಹೆಚ್ಚಾಗುತ್ತದೆ. ಆದರೆ ಸಂಧಿವಾತ ರೋಗಿಗಳು ತುಂಬಾ ತಣ್ಣೀರು ಕುಡಿಯುತ್ತಿದ್ದರೆ ಅಥವಾ ಐಸ್ ಕ್ರೀಮ್ ಮತ್ತು ಇತರ ತಣ್ಣನೆಯ ವಸ್ತುಗಳನ್ನು ಸೇವಿಸಿದರೆ, ಈಗಲೇ ನಿಲ್ಲಿಸಿ. ಇವುಗಳಿಂದಾಗಿ ಅವರಿಗೆ ಹೆಚ್ಚಿನ ನೋವು, ಇತರ ಸಮಸ್ಯೆಗಳು ಉಂಟಾಗಬಹುದು.

ಕೆಫೀನ್:
ನೀವು ಕೆಫೀನ್ ಕಾಫಿ ಮತ್ತು ಚಾಕೊಲೇಟ್ ನ್ನು ಇಷ್ಟ ಪಡುತ್ತಿದ್ದರೆ, ಈ ಕೂಡಲೇ ನೀವು ಅವುಗಳಿಂದ ದೂರವಿರುವುದು ಉತ್ತಮ. ಏಕೆಂದರೆ ನಿಮ್ಮ ಮೊಣಕಾಲು ನೋವಿಗೆ ಕೆಫೀನ್ ಒಂದು ದೊಡ್ಡ ಕಾರಣವಾಗಿದೆ. ಬ್ಲಾಕ್ ಕಾಫಿ ನಿಮಗೆ ವಿಶೇಷವಾಗಿ ಹಾನಿಕಾರಕವಾಗಿದೆ. ಆದ್ದರಿಂದ ಮೊಣಕಾಲು ನೋವಿರುವವರು ಇವುಗಳನ್ನು ಸೇವಿಸದಿರುವುದು ಒಳ್ಳೆಯದು.

ಬಿಳಿ ಬ್ರೆಡ್ :
ಸಂಧಿವಾತದ ಕೆಲವು ರೋಗಿಗಳಿಗೆ ಗ್ಲುಟನ್ ಅಲರ್ಜಿ ಸಮಸ್ಯೆಗಳೂ ಇರುತ್ತವೆ. ಯಾರಿಗಾದರೂ ಅಂತಹ ಸಮಸ್ಯೆ ಇದ್ದರೆ, ಅವರು ಹಿಟ್ಟು, ಬ್ರೆಡ್ ಮುಂತಾದ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

ಆಲ್ಕೋಹಾಲ್:
ಸಂಧಿವಾತದ ಸಮಸ್ಯೆಗಳನ್ನು ಹೊಂದಿರುವವರು ಆಲ್ಕೊಹಾಲ್ ಸೇವನೆಯಿಂದ ಹೆಚ್ಚಿನ ನೋವನ್ನು ಅನುಭವಿಸಬಹುದು ಏಕೆಂದರೆ ಆಲ್ಕೋಹಾಲ್ ಗೌಟ್ಗೆ ಕಾರಣವಾಗಬಹುದು. ಇದು ಒಂದು ರೀತಿಯ ಸಂಧಿವಾತ, ಇದು ಸಾಮಾನ್ಯಕ್ಕಿಂತ ಹೆಚ್ಚು ನೋವಿನಿಂದ ಕೂಡಿರುತ್ತದೆ.

Exit mobile version