ಫ್ರಿಜರ್ ನಿಂದ ಬರುವ ದುರ್ವಾಸನೆಯನ್ನು ತೆಗೆದುಹಾಕಲು ಈ ಟ್ರಿಕ್ಸ್ ಗಳನ್ನು ಪಾಲಿಸಬಹುದು

ಫ್ರಿಡ್ಜ್ ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಕಂಡುಬರುವ ಒಂದು ವಸ್ತು. ಆಹಾರ ಕೆಡದಂತೆ ಹಾಗೂ ಹೆಚ್ಚು ದಿನಗಳ ಕಾಲ ಆಹಾರ ಸಂಗ್ರಹಿಸಲು ಇದನ್ನು ಬಳಕೆ ಮಾಡುವ ನಾವು, ಅದರ ದುರ್ಗಂಧ ತೆಗೆಯಲು ಸಾಕಷ್ಟು ಹೆಣಗಾಡಿರುತ್ತೇವೆ. ಕೆಲವೊಮ್ಮೆ ಕರೆಂಟ್ ಇಲ್ಲಿದಿದ್ದಾಗ ಆಹಾರ ಕೆಟ್ಟು ಫ್ರಿಡ್ಜನಲ್ಲಿ ದುರ್ಗಂಧ ಬೀರುವುದು ಅಥವಾ ನಾವು ಇಡುವ ಕೆಲವೊಂದು ಆಹಾರದಿಂದ ಪ್ರಿಡ್ಜನೊಳಗೆ ವಾಸನೆ ಉಂಟಾಗುವ ಸಾಧ್ಯತೆಯಿವೆ. ಈ ದುರ್ವಾಸನೆಯನ್ನು ತೆಗೆದುಹಾಕುವುದೇ ದೊಡ್ಡ ತಲೆನೋವಿನ ಕೆಲಸ. ನೀವು ಇಂತಹ ಸ್ಥಿತಿಗೆ ಸಿಲುಕಿ ಪೇಚಾಡುತ್ತಿದ್ದರೆ ಈ ಕೆಳಗಿನ ಸಲಹೆಗಳನ್ನು ಬಳಸಿ ಅದನ್ನು ದೂರಮಾಡಬಹುದು.

ಪ್ರಿಟ್ಜನಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕುವ ಕೆಲವೊಂದು ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ:

ನಿಂಬೆ ಹಣ್ಣು:
ನಿಂಬೆಹಣ್ಣು ಫ್ರಿಡ್ಜನಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಇದಕ್ಕಾಗಿ ನೀವು ನಿಂಬೆ ಹಣ್ಣನ್ನು ತುಂಡು ಮಾಡಿ, ಅದರ ಒಂದು ಹೋಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ನಿಮ್ಮ ಫ್ರಿಜರ್ ನೊಳಗೆ ಇರಿಸಿ. ಇದರಿಂದ ಹೊರಬರುವ ಪರಿಮಳ ನಿಮ್ಮ ಫ್ರಿಜ್ನಿಂದ ಬರುವ ವಾಸನೆಯನ್ನು ತೆಗೆದುಹಾಕುತ್ತದೆ ಜೊತೆಗೆ ಫ್ರೆಶ್ ಭಾವನೆಯನ್ನೂ ನಿಮಗೆ ನೀಡುವುದು.

ಅಡಿಗೆ ಸೋಡಾ:
ಫ್ರಿಡ್ಜನಲ್ಲಿರುವ ದುರ್ವಾಸನೆಯನ್ನು ತೆಗದುಹಾಕಲು, ಫ್ರಿಡ್ಜರನ್ನು ಅಡುಗೆ ಸೋಡಾದಿಂದ ಸ್ವಚ್ಛಗೊಳಿಸಿ. ಇದರಿಂದ ನಿಮ್ಮ ಫ್ರಿಜರ್ ದುರ್ಗಂಧ ಬೀರುವುದು ಕಡಿಮೆಯಾಗುವುದು. ಫ್ರಿಡ್ಜನ್ನು ಸ್ವಚ್ಛಗೊಳಿಸುವಾಗ ಅಡುಗೆ ಸೋಡಾಕ್ಕೆ ನೀರನ್ನು ಬೆರೆಸಿ, ಮೃದುವಾದ ಬಟ್ಟೆಯನ್ನು ಅದ್ದಿ, ಸ್ವಚ್ಛಮಾಡಿ. ಇದರಿಂದ ದುರ್ವಾಸನೆ ಕಡಿಮೆಯಾಗುವುದು.

ಕಾಫಿ ಬೀಜ:
ಫ್ರಿಜ್ನಲ್ಲಿ ಹರಡಿರುವ ದುರ್ವಾಸನೆಯನ್ನು ತೆಗೆದುಹಾಕಲು ಕಾಫಿ ಬೀಜಗಳನ್ನು ಸಹ ಬಳಸಬಹುದು. ಇದಕ್ಕಾಗಿ, ಕಾಫಿ ಬೀಜಗಳನ್ನು ಫ್ರಿಜರ್ ನ ವಿವಿಧ ಮೂಲೆಗಳಲ್ಲಿ ಬೇಕಿಂಗ್ ಶೀಟ್‌ನಲ್ಲಿ ಹಾಕಿಟ್ಟು, ರಾತ್ರಿಯಿಡೀ ರೆಫ್ರಿಜರೇಟರ್ ಅನ್ನು ಮುಚ್ಚಿಡಿ. ಇದು ಎಲ್ಲಾ ದುರ್ವಾಸನೆಯನ್ನು ಹೀರಿ, ಫ್ರಿಡ್ಜನ್ನು ಸಹಜ ಸ್ಥಿತಿಗೆ ಮರಳುವಂತೆ ಮಾಡುವುದು.

ಉಪ್ಪು:
ಒಂದು ಬಟ್ಟಲು ನೀರಿಗೆ ಉಪ್ಪು ಸೇರಿಸಿ, ಅದನ್ನು ಸ್ವಲ್ಪ ಬಿಸಿ ಮಾಡಿ. ನಂತರ, ಸ್ವಚ್ಛವಾದ ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಫ್ರಿಜ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರಿಂದ ಫ್ರಿಡ್ಜನಲ್ಲಿರುವ ದುರ್ವಾಸನೆ ದೂರವಾಗುವುದು.

ಕಿತ್ತಳೆ ಸಿಪ್ಪೆ:
ಫ್ರಿಜರ್ ನ ವಾಸನೆಯನ್ನು ತೆಗೆದುಹಾಕಲು ನೀವು ಕಿತ್ತಳೆ ಸಿಪ್ಪೆಗಳನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ, ಕಿತ್ತಳೆ ಸಿಪ್ಪೆಯನ್ನು ರೆಫ್ರಿಜರೇಟರ್ ಒಳಗೆ ಇರಿಸಿ.

ವಿನೇಗರ್ :
ವಿನೇಗರ್ ಬಳಸಿ, ನಿಮ್ಮ ರೆಫ್ರಿಜರೇಟರ್ನಲ್ಲಿ ಕೆಟ್ಟ ವಾಸನೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ, ಒಂದು ಕಪ್ ನಲ್ಲಿ ವಿನೆಗರ್ ತೆಗೆದುಕೊಂಡು ಫ್ರಿಜ್ ನಲ್ಲಿಡಿ.

ಸಾರಭೂತ ತೈಲ:
ಫ್ರಿಡ್ಜನಲ್ಲಿರುವ ದುರ್ವಾಸನೆಯನ್ನು ದೂರ ಮಾಡಲು ಹತ್ತಿ ಉಂಡೆಗಳಿಗೆ ಕೆಲವು ಹನಿ ಸಾರಭೂತ ತೈಲಗಳನ್ನು ಹಾಕಿ ಫ್ರಿಜ್ ನಲ್ಲಿ ಇರಿಸಿ ಮತ್ತು ಇಡೀ ದಿನ ಫ್ರಿಜ್ ಬಾಗಿಲು ಹಾಕಿಡಿ.

ಇದ್ದಿಲು:
ಇದ್ದಿಲು ಮುಖದ ಮೇಲೆ ಸಂಗ್ರಹವಾಗಿರುವ ಕೊಳೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ, ಆದರೆ ಫ್ರಿಜ್ನಲ್ಲಿ ಹರಡಿರುವ ದುರ್ವಾಸನೆಯನ್ನು ತೆಗೆದುಹಾಕಲು ಸಹ ನೀವು ಇದನ್ನು ಬಳಸಬಹುದು. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ಇದ್ದಿಲು ಹಾಕಿ, ರೆಫ್ರಿಜರೇಟರ್‌ನ ಟೆಂಪರೇಚರ್ ನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ಅದರೊಳಗೆ ಇಡಿ, ಮೂರು ದಿನಗಳವರೆಗೆ ಮುಚ್ಚಿಡಿ.

Exit mobile version