ಹೆಚ್ಚು ಬಾಯಾರಿಕೆ ಆಗುವುದು ಈ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣವಿರಬಹುದು

ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆ ಆಗುವುದು ಸಾಮಾನ್ಯ. ಆದರೆ ಬೇರೆ ಋತುಮಾನದಲ್ಲೂ ತಡೆಯಲಾರದಂತಹ ಬಾಯಾರಿಕೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಇದು ನೀವು ಯಾವುದೋ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದೀರಾ ಎನ್ನುವದರಲ್ಲಿ ಸಂಶಯವಿಲ್ಲ. ಏಕೆಂದರೆ ಅತಿಯಾಗಿ ಬಾಯಾರಿಕೆ ಆಗುವುದು ಕೆಲವು ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣವಾಗಿದೆ. ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡದಿದ್ದರೆ ಮುಂದೆ ಅದು ಅಪಾಯದ ಮಟ್ಟಕ್ಕೆ ತಲುಪಬಹುದು. ಆದ್ದರಿಂದ ಇಲ್ಲಿ ನಾವು ಅತಿಯಾಗಿ ಬಾಯಾರಿಕೆ ಆಗುವುದು ಯಾವ ಆರೋಗ್ಯ ಸಮಸ್ಯೆಗಳೆಂಬುದನ್ನು ಹೇಳಿದ್ದೇವೆ.

ಅತಿಯಾದ ಬಾಯಾರಿಕೆ ಆಗುವುದು ಯಾವ ಆರೋಗ್ಯ ಸಮಸ್ಯೆಯ ಲಕ್ಷಣ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಮಧುಮೇಹ:
ನಿಮ್ಮ ದೇಹದ ಜೀವಕೋಶಗಳಲ್ಲಿ ಇನ್ಸುಲಿನ್ ಕಡಿಎಯಾದಾಗ, ರಕ್ತದಿಂದ ಹೆಚ್ಚುವರಿ ಸಕ್ಕರೆಯನ್ನು ತೆಗೆದುಹಾಕಲು ಮೂತ್ರಪಿಂಡವು ಹೆಚ್ಚು ಶ್ರಮಿಸಬೇಕು. ಇದರ ಪರಿಣಾಮವೇ ಪದೇ ಪದೇ ಮೂತ್ರ ವಿಸರ್ಜನೆ ಆಗುವುದು. ಇದು ಹೆಚ್ಚು ನೀರು ಕುಡಿಯಲು ಪ್ರೇರೆಪಿಸುತ್ತದೆ. ಆದ್ದರಿಂದ ಮೊದಲಿಗಿಂತ ಹೆಚ್ಚು ನೀರನ್ನು ಕುಡಿಯಲು ಬಯಸುತ್ತೀರಿ. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಅತಿಯಾದ ಬಾಯಾರಿಕೆ ಮಧುಮೇಹದ ಎರಡು ಆರಂಭಿಕ ಚಿಹ್ನೆಗಳಾಗಿವೆ.

ರಕ್ತಹೀನತೆ:
ರಕ್ತಹೀನತೆ ಎಂದರೆ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವುದು. ಅಸಮರ್ಪಕ ಆಹಾರ ಅಥವಾ ಹೆಚ್ಚು ರಕ್ತಸ್ರಾವದಂತಹ ಹಲವಾರು ಕಾರಣಗಳಿಂದ ಇದು ಉಂಟಾಗುತ್ತದೆ. ನಿರ್ಜಲೀಕರಣವು ರಕ್ತಹೀನತೆಯ ಸಾಮಾನ್ಯ ಸಂಕೇತವಾಗಿದ್ದು, ನೀವು ತೀವ್ರವಾದ ರಕ್ತಹೀನತೆಯನ್ನು ಹೊಂದಿದಾಗ ಅತಿಯಾಗಿ ಬಾಯಾರಿಕೆ ಆಗಲು ಆರಂಭವಾಗುತ್ತದೆ. ತಲೆತಿರುಗುವಿಕೆ, ಆಯಾಸ, ಬೆವರುವುದು ಈ ಸ್ಥಿತಿಯ ಇತರ ಲಕ್ಷಣಗಳಾಗಿವೆ.

ಹೈಪರ್ಕಾಲ್ಸೆಮಿಯಾ:
ಹೈಪರ್ಕಾಲ್ಸೆಮಿಯಾ ಎನ್ನುವುದು ದೇಹದಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಹೆಚ್ಚಾಗುವ ಸ್ಥಿತಿಯಾಗಿದೆ. ಅತಿಯಾದ ಪ್ಯಾರಾಥೈರಾಯ್ಡ್ ಗ್ರಂಥಿಗಳು, ಕ್ಷಯ ಮತ್ತು ಕ್ಯಾನ್ಸರ್ ನಿಂದಲೂ ಇದು ಸಂಭವಿಸಬಹುದು. ಬಾಯಾರಿಕೆಯ ಭಾವನೆ ಹೈಪರ್ಕಾಲ್ಸೆಮಿಯಾದ ಮೊದಲ ಲಕ್ಷಣವಾಗಿದೆ. ರಕ್ತದಲ್ಲಿನ ಕ್ಯಾಲ್ಸಿಯಂ ಹೆಚ್ಚಾದಾಗ ಮೂಳೆಗಳು ದುರ್ಬಲಗೊಳ್ಳಬಹುದು ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಬಹುದು.

ಬಾಯಿ ಒಣಗುವುದು:
ಲಾಲಾರಸ ಗ್ರಂಥಿಗಳು ಸಾಕಷ್ಟು ಲಾಲಾರಸವನ್ನು ಬಿಡುಗಡೆ ಮಾಡದಿದ್ದಾಗ, ಅದು ನಿಮಗೆ ಅತಿಯಾದ ಬಾಯಾರಿಕೆಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳು, ಕ್ಯಾನ್ಸರ್ ಅಥವಾ ತಂಬಾಕು ಬಳಕೆಯಂತಹ ಅಭ್ಯಾಸಗಳಿಂದ ಇದು ಸಂಭವಿಸಬಹುದು. ಇದರ ಇತರ ಲಕ್ಷಣಗಳೆಂದರೆ ಬಾಯಿಯ ದುರ್ವಾಸನೆ, ರುಚಿಯಲ್ಲಿ ಬದಲಾವಣೆ, ಒಸಡಿನಲ್ಲಿ ಸಮಸ್ಯೆ ಮತ್ತು ಅಗಿಯುವುದರಲ್ಲಿ ತೊಂದರೆ ಉಂಟಾಗಬಹುದು.

ಗರ್ಭಧಾರಣೆ:
ಗರ್ಭಧಾರಣೆಯ ಹಲವಾರು ಲಕ್ಷಣಗಳಲ್ಲಿ ಅತಿಯಾದ ಬಾಯಾರಿಕೆ ಕೂಡ ಒಂದು. ಇದು ಸಮಸ್ಯೆಯಲ್ಲ, ಎಚ್ಚರಿಕೆಯ ಚಿಹ್ನೆ ಅಷ್ಟೇ. ಮೊದಲ ತ್ರೈಮಾಸಿಕದಲ್ಲಿ, ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದ ಮೂತ್ರವೂ ಹೆಚ್ಚಾಗುವುದು. ಆಗ ನಿಮ್ಮ ದೇಹದಲ್ಲಾಗುವ ನೀರಿನ ನಷ್ಟದಿಂದ ಬಾಯಾರಿಕೆ ಉಂಟಾಗುತ್ತದೆ. ಇದು ನೀರಿನ ನಷ್ಟದ ಪ್ರಮಾಣವನ್ನು ನೀವು ಪುನಃ ತುಂಬಿಸಬೇಕೆನ್ನುವ ಸೂಚನೆಯಾಗಿದೆ.

Exit mobile version