ಪತಿಯು ಬೇರೊಬ್ಬ ಮಹಿಳೆ ಜೊತೆ ಓಡಾಟ – ಟ್ರಾಫಿಕ್ ಕ್ಯಾಮೆರಾದಿಂದ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ

Thiruvananthapuram : ತಿರುವನಂತಪುರಂ ಇಲ್ಲಿಯ ಮಹಿಳೆಯೊಬ್ಬರ ಪತಿಯು ಬೇರೆ ಮಹಿಳೆಯೊಂದಿಗೆ ಸುತ್ತಾಡಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದ. ಇದು ಟ್ರಾಫಿಕ್ (Traffic) ಕ್ಯಾಮೆರಾ ಕಣ್ಣಿಗೆ ಸೆರೆಯಾಗಿ ನಂತರ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದ ಘಟನೆ ಕೇರಳದಲ್ಲಿ ನಡೆದಿದೆ.

ಇತ್ತೀಚೆಗೆ ಕ್ಯಾಮರಾಮ್ಯಾನ್‍ಗಿಂತ ಚೆನ್ನಾಗಿ ಟ್ರಾಫಿಕ್ ಕ್ಯಾಮೆರಾಗಳು ಫೋಟೋ ಕ್ಲಿಕ್ಕಿಸುತ್ತಿದ್ದು, ದಂಡ ಕಟ್ಟಿದ್ರು ಪರವಾಗಿಲ್ಲ ಆದರೆ ಫೋಟೋ ತುಂಬಾ ಚೆನ್ನಾಗಿದೆಯಲ್ಲ ಎಂದು ವಾಹನ ಸವಾರರು ಹೇಳಿಕೊಳ್ಳುವಷ್ಟು ಚೆನ್ನಾಗಿರುತ್ತವೆ ಈ ಫೋಟೋಗಳು. ಆದರೆ ಈ ಟ್ರಾಫಿಕ್ ಕ್ಯಾಮೆರಾದ ಇಷ್ಟು ಸ್ಪಷ್ಟತೆಯಿಂದ ಈಗ ಪತಿಯೊಬ್ಬ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೇರಳದ (Kerala) ಇಡುಕ್ಕಿ ಮೂಲದ ವ್ಯಕ್ತಿಯೊಬ್ಬ ತನ್ನ ಮಹಿಳಾ ಸ್ನೇಹಿತೆಯನ್ನು ಬೈಕ್ ನಲ್ಲಿ ಡ್ರಾಪ್ ಕೊಟ್ಟಿದ್ದ. ಈ ವೇಳೆಯಲ್ಲಿ ಆತನ ಮಹಿಳಾ ಸ್ನೇಹಿತೆ ಹೆಲ್ಮೆಟ್ ಧರಿಸದೇ ಆತನೊಂದಿಗೆ ಪ್ರಯಾಣಿಸಿದ್ದಾಳೆ. ಹೀಗಾಗಿ ಬೈಕ್ ಸವಾರ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿರುವುದು ಟ್ರಾಫಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : https://vijayatimes.com/action-against-pgimer-students/

ಆದರೆ ಆ ವ್ಯಕ್ತಿಯ ಅದೃಷ್ಟ ಚೆನ್ನಾಗಿರಲಿಲ್ಲ ಅನ್ನಿಸುತ್ತೆ ಏಕೆಂದರೆ ಆತ ಓಡಿಸಿದ್ದ ಸ್ಕೂಟರ್‌ಗೆ ಆತನ ಪತ್ನಿಯೇ ಮಾಲೀಕರಾಗಿದ್ದಳು, ಆ ಸ್ಕೂಟರ್‌ನ ನೋಂದಣಿ ಪ್ರಮಾಣ ಪತ್ರದ ಪ್ರಕಾರ ಸಂಚಾರ ನಿಯಮ ಉಲ್ಲಂಘನೆಯ (Violation of traffic rules) ವಿವರಗಳು ಹಾಗೂ ಆತ ಪಾವತಿಸಬೇಕಾಗಿರುವ ದಂಡದ ವಿವರದ ಸಂದೇಶವು ಪತ್ನಿಯ ಮೊಬೈಲ್ ಫೋನ್‍ಗೆ ಬಂದಿದೆ.

ಸಂದೇಶವನ್ನು ನೋಡಿದ ನಂತರ ಮಹಿಳೆ ತನ್ನ ಪತಿಗೆ ಫೋಟೋದಲ್ಲಿರುವ ಮಹಿಳೆ ಯಾರು ಎಂದು ಕೇಳಿದರು. ಈ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿಗೂ ನನಗೂ ಯಾವುದೇ ಸಂಬಂಧವಿಲ್ಲ. ಬದಲಿಗೆ ಲಿಫ್ಟ್ ಮಾತ್ರ ಕೊಟ್ಟಿದ್ದೇನೆ ಎಂದು ಹೇಳಿದರು. ಇದನ್ನು ನಂಬದ ಆತನ ಪತ್ನಿ ಸಿಟ್ಟಿಗೆದ್ದಿದ್ದಳು. ಹಾಗಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಈ ವಿಚಾರವಾಗಿ ಮಹಿಳೆಯು ಪುರುಷನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ, ತನ್ನ ಪತಿ ತನಗೆ ಮತ್ತು ತನ್ನ 3 ವರ್ಷದ ಮಗಳಿಗೆ ಹೊಡೆದಿದ್ದಾನೆ ಎಂದು ಅವರು ದೂರಿದ್ದಾರೆ. ಪ್ರತಿಯಾಗಿ, ಪೊಲೀಸರು ಪ್ರಕರಣವನ್ನು ತೆಗೆದುಕೊಂಡು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Exit mobile version