ರಸ್ತೆಯಲ್ಲ ಇದು ಭ್ರಷ್ಟಾಚಾರದ ಕೂಪ

Huge corruption construction in Belagavi Road | ರಸ್ತೆಯಲ್ಲ ಇದು ಭ್ರಷ್ಟಾಚಾರದ ಕೂಪ | Citizen journalist

ಬೆಳಗಾವಿ ಜಿಲ್ಲೆಯ ಪ್ರಮುಖ ತಾಲೂಕಾದ  ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ 14ನೇ ಹಣಕಾಸು ಆಯೋಗದ ನರೇಗಾ ಯೋಜನೆಯಡಿ ನಿರ್ಮಿಸಲಾದ ರಸ್ತೆ ಕಾಮಗಾರಿಯು 2016 ರಿಂದ 2019 ರ ಲ್ಲಿ ನಡೆಯಿತು.  ಸುಮಾರು 8.13  ಕೋಟಿ ಹಣ ಈ ಯೋಜನೆಗೆ ಬಿಡುಗಡೆಯಾಗಿದ್ದು ಅದರಲ್ಲಿ ಅರ್ದದಷ್ಟನ್ನು ಮಾತ್ರ ಬಳಸಲಾಗಿದೆ ಉಳಿದ ಹಣದಲ್ಲಿ ಅವ್ಯವಹಾರ ನಡೆದಿದೆ ಅನ್ನೋದು ಗ್ರಾಮಸ್ಥರ ಆರೋಪ

ಅಕ್ರಮದ ವಿಷಯಕ್ಕೆ ಸಂಬಂದಿಸಿದಂತೆ ವಸಂತ್ ಅಂಧಾನಿ ಅವರು ಈಗಾಗಲೇ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದರ ಬಗ್ಗೆ ತನಿಖೆ ಆಗಲಿಲ್ಲವೆಂಬುದು ವಸಂತ್ ಅಂದಾನಿ ದೂರು. ಸಮಗ್ರ ತನಿಖೆಗಾಗಿ ನೀಡಿದ ದೂರಿನ ದೃಷ್ಯವನ್ನು ನೀವಿಲ್ಲಿ ನೋಡಬಹುದು. ಅಷ್ಟೇ ಅಲ್ಲ ಈ ವಿಚಾರದ ಬಗ್ಗೆ ಈಗಾಗಲೇ ಸುದ್ದಿಯೂ ಆಗಿದೆ ಆದರೂ ಇಲ್ಲಿನ ಯಾವ ಅಧಿಕಾರಿಗಳೂ  ಜನಪ್ರತಿನಿಧಿಗಳು ಇದರತ್ತ ಕಣ್ಣೆತ್ತಿಯೂ ನೋಡಿಲ್ಲ ಅನ್ನೋದು ಜನರ ದೂರು. ಈಗಾಗಲೇ ಕಾಮಗಾರಿ ನಡೆದ ರಸ್ತೆಯೆಲ್ಲಾ ಕಿತ್ತು ಹೋಗಿದೆ. ಪರಿಸರವೆಲ್ಲಾ ದೂಳುಮಯವಾಗಿ  ನೆಡೆದಾಡಬೇಕಾದರೆ ಮೂಗು ಮುಚ್ಚಿಕೊಂಡೇ ಹೋಗಬೇಕಾದಂತಹ ಪರಿಸ್ತಿತಿ ಎದುರಾಗಿದೆ ಅನ್ನೋದು ಸ್ಥಳೀಯರ ದೂರು.

ಇಲ್ಲಿನ ಗ್ರಾಮ ಪಂಚಾಯತಿಗೆ ಹೋದರೆ ಅಲ್ಲಿನ ಅಧಿಕಾರಿಗಳು ತಲೆ ಎತ್ತಿ ನೋಡಲ್ಲ ಏನು ಸಮಸ್ಯೆ ಇದೆ ಯಾಕೆ ಬಂದ್ರಿ ಅಂತಾನೂ  ಕೇಳಲ್ಲ ಎನ್ನುವುದು ಜನರ ಅಳಲು. ಊರಿಗೆ ಒಂದು ಒಳ್ಳೆಯ ರಸ್ತೆ ಬೇಕು, ನೀರು ಬೇಕು ಮೂಲಭೂತ ಸೌಕರ್ಯಗಳು ಎಲ್ಲವೂ ಬೇಕು  ಅಂತ ಊರಿನ ಜನರಿಗೆ ಆಸೆ ಇರುತ್ತದೆ ಅಲ್ವಾ ? ಊರಿಗೆ ಒಳ್ಳೇದು ಮಾಡಬಹುದು  ಅನ್ನೋ ನಿರೀಕ್ಷೆ ಇಟ್ಟು ಜನ ಓಟು ಹಾಕಿ ಜನಪ್ರತಿನಿಧಿಗಳನ್ನು ಆರಿಸಿ  ಕಳಿಸುತ್ತಾರೆ. ಆದರೆ ಜನಪ್ರತಿನಿಧಿಗಳು ಮಾಡೋದೇನು ? ನೋಡಿ.ಸರ್ಕಾರದಿಂದ ಪದೇ ಪದೇ ಹಣ ಸಿಗುವುದಿಲ್ಲ. ಸಿಕ್ಕ ಹಣ ನಾಲ್ಕು ಜನರಿಗೆ ಉಪಯೋಗವಾಗಬೇಕು. ದೀರ್ಘಕಾಲ ಬಾಳಿಕೆ ಬರುವ ಕೆಲಸ ಮಾಡೋದರ ಜೊತೆ ಕೆಲಸ ಮಾಡಿಸಿದವರ ಹೆಸರು ಉಳಿಯ ಬೇಕು ಅಲ್ವಾ.

ಆದರೆ ಜನಪ್ರತಿನಿಧಿಗ ಏನು ಮಾಡುತ್ತಿದ್ದಾರೆ? ಸರ್ಕಾರ ಕೊಟ್ಟ ಹಣದಿಂದ ತಾವಷ್ಟೇ ಉದ್ದಾರ ಆಗೋ ದಾರಿ ನೋಡ್ತಾರೆ ಅನ್ನೋದು ಸ್ಥಳಿಯರ ದೂರು.  ಮಾಡುವ ಕೆಲಸವನ್ನು ಒಂದೇ ಸಲ ಒಳ್ಳೆಯ ರೀತಿಯಲ್ಲಿ ಮಾಡಿದ್ರೆ ಜನರಿಗೆ ಉಪಯೋಗವಾಗುತಿತ್ತು ಅನ್ನೋದು ಜನರ ದೂರು. ಹಂದಿಗುಂದ ಗ್ರಾಮದಲ್ಲಿ ನೀರಿನ ಪೈಪೆಲ್ಲಾ ಕಿತ್ತೋಗಿದ್ದರೂ ಸರಿ ಮಾಡಲು ಪಂಚಾಯತ್ ಮುಂದಾಗಲಿಲ್ಲ  ಅನ್ನೋದು ಸ್ಥಳೀಯರ ದೂರು. ಕಳಪೆ ಕಾಮಗಾರಿಯನ್ನು ಸರಿಪಡಿಸಿ ಕೊಡ ಬೇಕು ಇದರ ತನಿಖೆ ಆಗಬೇಕು ಎಂಬುದು ಊರಿನ ಜನರ ಆಗ್ರಹವಾಗಿದೆ.  ಸಂಬಂಧಪಟ್ಟ ಅಧಿಕಾರಿಗಳು ಈ ಅಕ್ರಮದತ್ತ ಕಣ್ಣೆತ್ತಿ ನೋಡಿ ರಸ್ತೆಯನ್ನು ಸರಿಪಡಿಸಬೇಕು ,ಹಂದಿಗುಂದ ಗ್ರಾಮದ ಜನತೆಗೆ ನ್ಯಾಯ ಸಿಗಬೇಕು. ಇದು ನಮ್ಮ ಹಾರೈಕೆಯಾಗಿದೆ.

Exit mobile version