ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ

Mandya : ಸಕ್ಕರೆ ನಾಡು ಮಂಡ್ಯದಲ್ಲಿ ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ (Sumalta Ambarish) ಅವರು ಫುಲ್‌ ಆಕ್ಟೀವ್‌ ಆಗಿದ್ದು, ದಳಪತಿಗಳ ಭದ್ರಕೋಟೆಯನ್ನು ಒಡೆಯಲು ಭಾರೀ(Three party competition in Mandya) ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಬಿಜೆಪಿಗೆ (BJP) ಬೆಂಬಲ ಸೂಚಿಸಿರುವ ಸುಮಲತಾ ಅವರು ಮಂಡ್ಯದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಲು ಶುರು ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮದ್ದೂರು ಮತ್ತು ಶ್ರೀರಂಗಪಟ್ಟಣದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿರುವ ಸುಮಲತಾ

ಅವರು ಈ ಎರಡು ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಈಗಾಗಲೇ ಸರಣಿ ಸಭೆಗಳನ್ನು ನಡೆಸಿರುವ ಸುಮಲತಾ ಅಂಬರೀಶ್‌ ಅವರು,

ಮಂಡ್ಯದಲ್ಲಿ ಜೆಡಿಎಸ್‌ (JDS) ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಮಂಡ್ಯದ ಮತದಾರರು ಜೆಡಿಎಸ್‌ಪಕ್ಷದ ಕುಟುಂಬ ರಾಜಕೀಯ ಕಂಡು ಬೇಸತ್ತಿದ್ದಾರೆ.

ಹೊಸ ನಾಯಕತ್ವವನ್ನು ಬಯಸುತ್ತಿದ್ದಾರೆ. ಬಿಜೆಪಿ ಪಕ್ಷದ ಕಡೆಗೆ ಮಂಡ್ಯದ ಮತದಾರರು ಹೆಚ್ಚು ಒಲವು ತೋರುತ್ತಿದ್ದಾರೆ. ಕಳೆದ ಲೋಕಸಭಾ (Three party competition in Mandya) ಚುನಾವಣೆಯಲ್ಲಿಯೂ ಇದು ಸಾಭೀತಾಗಿದೆ.

ಇದನ್ನೂ ಓದಿ : https://vijayatimes.com/new-rule-from-bangalore-society/

ಅದೇ ರೀತಿ ಕೆ.ಆರ್.ಪೇಟೆಯ ಉಪ ಚುನಾವಣೆಯಲ್ಲಿಯೂ ಇದು ಸಾಭೀತಾಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ(Assembly election) ನಾವು ಶ್ರಮವಹಿಸಿದರೆ ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ಗೆಲುವು ಸಾಧಿಸಬಹುದು ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಇನ್ನು ಈ ಬಾರಿ ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಮದ್ದೂರಿನಲ್ಲಿ ಸ್ವಾಮಿಗೌಡ, ಶ್ರೀರಂಗಪಟ್ಟಣದಲ್ಲಿ ಸಚ್ಚಿದಾನಂದ ಮತ್ತು ಮಂಡ್ಯದಲ್ಲಿ ಫೈಟರ್‌ರವಿ ಅಥವಾ ಶಿವರಾಮೇಗೌಡ (Shivaramegowda) ಬಿಜೆಪಿಯಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : https://vijayatimes.com/bilkis-bano-gang-rape/

ಜೆಡಿಎಸ್‌ ನಿಂದ ಉಚ್ಚಾಟನೆಗೊಂಡು, ಕಾಂಗ್ರೆಸ್‌ನ ಚಲುವರಾಯಸ್ವಾಮಿಯೊಂದಿಗೆ ಗುರುತಿಸಿಕೊಂಡಿದ್ದ ಶಿವರಾಮೇಗೌಡ,

ದಿಢೀರನೇ ಬಿಜೆಪಿ ಸೇರಿ, ಮಂಡ್ಯ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಶಿವರಾಮೇಗೌಡ ಮಂಡ್ಯದಿಂದ ಕಣಕ್ಕಿಳಿದರೆ, ಅದರ ನೇರ ಪರಿಣಾಮ ಜೆಡಿಎಸ್‌ ಪಕ್ಷದ ಮೇಲಾಗಲಿದೆ.

ಮದ್ದೂರಿನಲ್ಲಿ ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ ಕಣಕ್ಕಿಳಿಯುವುದು ನಿಶ್ಚಿತ, ಬಿಜೆಪಿಯಿಂದ ಸ್ವಾಮಿಗೌಡರಿಗೆ ಟಿಕೆಟ್‌ ಸಿಗುವುದು ಬಹುತೇಕ ಪಕ್ಕಾ ಆದರೆ ಕಾಂಗ್ರೆಸ್‌ನಿಂದ (Congress) ಯಾರು ಕಣಕ್ಕಿಳಿಯುತ್ತಾರೆ ಎಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.

ಕಾಂಗ್ರೆಸ್‌ ಕೂಡಾ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದು, ಕಾಂಗ್ರೆಸ್‌ನಿಂದ ಯಾರೇ ಕಣಕ್ಕಿಳಿದರೂ, ತೀವ್ರ ಸ್ಪರ್ಧೆ ಏರ್ಪಡಲಿದೆ.

ಒಟ್ಟಾರೆಯಾಗಿ ಮಂಡ್ಯದಲ್ಲಿ ಈ ಬಾರಿ ಮೂರು ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ಇಷ್ಟು ದಿನ ಕಾಂಗ್ರೆಸ್‌ ಜೆಡಿಎಸ್‌ ನಡುವೆ ಮಾತ್ರ ಕದನ ನಡೆಯುತ್ತಿತ್ತು. ಅದರೆ ಇದೀಗ ನಿಧಾನವಾಗಿ ಬಿಜೆಪಿ ತನ್ನ ಬೇರುಗಳನ್ನೂ ಮಂಡ್ಯದಲ್ಲಿ ಬಿಟ್ಟಿದೆ.

Exit mobile version