New Delhi: ಕೇಂದ್ರ ಲೋಕಸೇವಾ ಆಯೋಗವು ನಾಗರೀಕ ಸೇವೆಗಳ ಪರೀಕ್ಷೆ, ರಕ್ಷಣಾ ಪಡೆಗಳ ವಿವಿಧ ಹುದ್ದೆಗಳಿಗೂ ಸೇರಿದಂತೆ ತಾನು ನಡೆಸುವ 2025ನೇ ಸಾಲಿನ ಎಲ್ಲ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. CSE ಪರೀಕ್ಷೆಗಳು, IFS ಪರೀಕ್ಷೆಗಳು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ನೇವಲ್ ಅಕಾಡೆಮಿ, ಕಂಬೈನ್ಡ್ ಮೆಡಿಕಲ್ ಸೇರಿದಂತೆ ಹಲವು ಪರೀಕ್ಷೆಗಳ ಪೂರ್ವಭಾವಿ ಪರೀಕ್ಷೆ, ಮೇನ್ಸ್ ಪರೀಕ್ಷೆ, ಸಂದರ್ಶನ ದಿನಾಂಕಗಳನ್ನು ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿದೆ. ಪರೀಕ್ಷೆ ವೇಳಾಪಟ್ಟಿ ತಿಳಿದುಕೊಳ್ಳಲು ಆಯೋಗದ ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಬಹುದು.
ಯುಪಿಎಸ್ಸಿ (UPSC) ಅಧಿಕೃತ ವೇಳಾಪಟ್ಟಿ ಪ್ರಕಾರ, ನಾಗರಿಕ ಸೇವೆಗಳು, ಅರಣ್ಯ ಸೇವೆಗಳ ಪೂರ್ವಭಾವಿ ಪರೀಕ್ಷೆಯು ಮೇ 25, 2025 ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ವಿವರಗಳನ್ನು ಹಾಗೂ ಅಧಿಸೂಚನೆಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದೆ.
ಯುಪಿಎಸ್ಸಿ ಪ್ರಮುಖ ಪರೀಕ್ಷೆ ಹೆಸರು ಮತ್ತು ಪೂರ್ವ ಭಾವಿ ಪರೀಕ್ಷೆ ದಿನಾಂಕಗಳು
ಸಿವಿಲ್ ಸರ್ವೀಸೆಸ್ (Civil Services) ಮುಖ್ಯ ಪರೀಕ್ಷೆ, 2025 : 22-08-2025
CDS ಎಕ್ಸಾಮಿನೇಷನ್-1, 2025 : 13-04-2025
ಸಿವಿಲ್ ಸರ್ವೀಸೆಸ್ (ಪ್ರಿಲಿಮ್ಸ್) ಪರೀಕ್ಷೆ, 2025 : 25-05-2025
ಭಾರತೀಯ ಅರಣ್ಯ ಸೇವೆಗಳು (ಪ್ರಿಲಿಮ್ಸ್) ಪರೀಕ್ಷೆ, 2025 : 25-05-2025
ಭಾರತೀಯ ಅರಣ್ಯ ಸೇವೆಗಳ ಮುಖ್ಯ ಪರೀಕ್ಷೆ, 2025 :16-11-2025
ಇಂಜಿನಿಯರಿಂಗ್ ಸೇವೆಗಳ (ಪ್ರಿಲಿಮ್ಸ್) ಪರೀಕ್ಷೆ, 2025 : 02-02-2025
ಕಂಬೈನ್ಸ್ ಜಿಯೋ ಸೈಂಟಿಸ್ಟ್ (ಪ್ರಿಲಿಮ್ಸ್) ಪರೀಕ್ಷೆ, 2025 : 09-02-2025
CBI (DSP) LDSE : 08-03-2025
NDA, NA ಪರೀಕ್ಷೆ-1, 2025 : 13-04-2025
NDA / NA ಪರೀಕ್ಷೆ-2, 2025 : 14-09-2025
CDS ಪರೀಕ್ಷೆ-2, 2025 : 14-09-2025
IES / ISS ಪರೀಕ್ಷೆ, 2025 : 20-06-2025
ಕಂಬೈನ್ಡ್ ಮೆಡಿಕಲ್ ಸರ್ವೀಸೆಸ್ ಪರೀಕ್ಷೆ, 2025 : 20-07-2025
ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸೆಸ್ (ACs) ಪರೀಕ್ಷೆ, 2025 : 03-08-2025