ಹುಲಿ ಉಗುರು ವಿವಾದ: ಉಳ್ಳವರು ಕಾನೂನನ್ನೇ ಕೊಂಡುಕೊಳ್ಳುವರು, ನಾನೇನು ಮಾಡಲಿ ಬಡವನಯ್ಯ! ಯತ್ನಾಳ್ ಟಾಂಗ್

ಹುಲಿ ಉಗುರು ವಿವಾದಕ್ಕೆ ಸಂಬಂಧಿಸಿದಂತೆ ಉಳ್ಳವರು ಕಾನೂನನ್ನೇ ಕೊಂಡುಕೊಳ್ಳುವರು, ನಾನೇನು (Tiger Claw Locket – Yatnal Tweet) ಮಾಡಲಿ ಬಡವನಯ್ಯ ಎಂದು ಬಿಜೆಪಿ

(BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basavanagowda Patil Yatnal) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಟ್ವಿಟರ್​ನಲ್ಲಿ (Twitter) ಪೋಸ್ಟ್‌ ಮಾಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಲಿ ಉಗುರು ಧರಿಸಿದ್ದ

ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಮಗ & ಅಳಿಯನ‌ ವಿರುದ್ಧವೂ ದೂರು ದಾಖಲಾಗಿಲ್ಲ. ಹೊಲಗೇರಿ ಪದ ಉಪಯೋಗಿಸಿದ್ದ ಎಸ್.ಎಸ್.ಮಲ್ಲಿಕಾರ್ಜುನ್ (S S Mallikarjun)

ವಿರುದ್ಧವೂ ದೂರು ದಾಖಲಾಗ್ಲಿಲ್ಲ ಎಂದು (Tiger Claw Locket – Yatnal Tweet) ಉಲ್ಲೇಖಿಸಿದ್ದಾರೆ.

ಬಿಗ್ ಬಾಸ್ (Big Boss) ಸ್ಪರ್ಧಿ ವರ್ತೂರ್ ಸಂತೋಷ್ ಕೊರಳಿನ ಆಭರಣದಲ್ಲಿ ಹುಲಿ ಉಗುರು ಪತ್ತೆಯಾದ ಬೆನ್ನಲ್ಲೇ ಹಲವು ಸೆಲೆಬ್ರೆಟಿಗಳು ಮತ್ತು ರಾಜಕಾರಣಿಗಳ ವಿರುದ್ಧವೂ ಇಂತಹದ್ದೇ

ಆರೋಪ ಕೇಳಿಬರುತ್ತಿದ್ದು, ಸಂಸದ ಜಗ್ಗೇಶ್ (Jaggesh), ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಅವರ ಪುತ್ರ ಹಾಗೂ ಅಳಿಯನ ಬಳಿಯೂ ಹುಲಿ ಉಗುರಿನ ಪೆಂಡೆಂಟ್ (Pendent) ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಉಳ್ಳವರು ಕಾನೂನನ್ನೇ ಕೊಂಡುಕೊಳ್ಳುವರು. ನಾನೇನು ಮಾಡಲಿ ಬಡವನಯ್ಯ. ಸುಳ್ಳು‌ಕೇಸು ಹಾಕಿಸಿಕೊಳ್ಳುವೆನಯ್ಯ, ವರ್ಷಾನುಗಟ್ಟಲೆ ಕೋರ್ಟಿಗೆ ಅಲೆಯುವೆನಯ್ಯ. ಇದುವೇ ನಮ್ಮ

ಪ್ರಜಾಪ್ರಭುತ್ವದ‌ ಪರಿ, ಜಾಸ್ತಿ ಮಾತನಾಡಿದ್ರೆ ಜೈಲಿಗೆ (Jail) ಹಾಕ್ತಾರೆ, ಸೋ ಸುಮ್ನಿದ್ಬುಡಿ ಎಂದು ಟಾಂಗ್ ನೀಡಿದ್ದಾರೆ.

ಈಗಾಗಲೇ ಹಲವು ಕಡೆಗಳಲ್ಲಿ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ದಾಳಿ ನಡೆಸಿದ್ದು, ಸಿನಿಮಾ ನಟರು ಹಾಗೂ ರಾಜಕಾರಣಿಗಳ ಮನೆಯನ್ನೂ ಪರಿಶೀಲನೆ ಮಾಡಲಾಗಿದ್ದು, ಈ ನಡುವೆ

ಬಿಜೆಪಿಯ (BJP) ಮುಖಂಡರು ಮತ್ತು ಕೆಲವು ಶಾಸಕರು ಅರಣ್ಯ ಇಲಾಖೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಪ್ಪು ಸುಲ್ತಾನ್ (Tippu Sultan) ಹುಲಿ ಕೊಲ್ಲುವ ಫೋಟೋ ಇದೆ ಅದರ

ವಿರುದ್ಧ ಕ್ರಮ ಏಕಿಲ್ಲ? ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Gyanendra) ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಸರ್ಕಾರಿ ನೌಕರರು ಯಾವುದೇ ಧರ್ಮದವರಾದರೂ 2ನೇ ವಿವಾಹವಾಗುವಂತಿಲ್ಲ – ಅಸ್ಸಾಂ ಸರ್ಕಾರ ಆದೇಶ

Exit mobile version