ಮೊದಲ ಬಾರಿಗೆ ತಂದೆಯಾಗುತ್ತಿರುವ ಪುರುಷರಿಗೆ ಇಲ್ಲಿದೆ ಅಗತ್ಯ ಸಲಹೆಗಳು ಓದಿ

ಮೊದಲ ಬಾರಿಗೆ ತಾಯಿಯಾಗುತ್ತಿರುವ(Mother) ಮಹಿಳೆಗೆ ತನ್ನ ಖುಷಿಯನ್ನು ಹಂಚಿಕೊಳ್ಳಲು ಪದಗಳೇ ಸಾಲುವುದಿಲ್ಲ.

ಆದರೆ ಕೇವಲ ಖುಷಿಯಷ್ಟೇ ಅಲ್ಲ, ಗರ್ಭಿಣಿ(Pregnant) ಮಹಿಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಆಕೆಯ ಮನಸ್ಸು ಮತ್ತು ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿರುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳುವುದು ಆಕೆಗೆ ಹಾಗೂ ಆಕೆಯ ಪತಿಗೆ ಕಷ್ಟವಾಗುತ್ತದೆ. ಮೊದಲ ಬಾರಿಗೆ ತಂದೆಯಾಗುತ್ತಿರುವ(Father) ವ್ಯಕ್ತಿಗೂ ಪತ್ನಿಯ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದೇ ತಿಳಿಯುವುದಿಲ್ಲ.

ಪತ್ನಿಯ ಬದಲಾದ ವರ್ತನೆಗೆ ಹೊಂದಿಕೊಳ್ಳುವುದರ ಜೊತೆಗೆ, ಆಕೆಯ ಅವಶ್ಯಕತೆಗಳನ್ನು ಅರಿತು ಆಕೆಗೆ ನೆರವಾಗುವುದು ಹೇಗೆ ಎಂಬ ಪ್ರಶ್ನೆಯೂ ಆತನನ್ನು ಕಾಡುವುದು ಸಹಜ.

ಹಾಗಾಗಿ, ಮೊದಲ ಬಾರಿಗೆ ತಂದೆಯಾಗುತ್ತಿರುವ ಪುರುಷರು ತಿಳಿಯಲೇಬೇಕಾದ ಕೆಲ ಸಂಗತಿಗಳು ಇಲ್ಲಿವೆ ನೋಡಿ.

ಗರ್ಭಿಣಿ ಮಹಿಳೆಯರಿಗೆ(Pregnant Women) ಪದೇ ಪದೇ ಹಸಿವು ಸಾಮಾನ್ಯ.

ಯಾವುದೇ ಸಮಯದಲ್ಲಿ ಬೇಕಾದರೂ ಆಕೆ ಆಹಾರ ಕೇಳಬಹುದು. ಕೆಲವು ಮಹಿಳೆಯರು ಮಧ್ಯರಾತ್ರಿಯ ಸಮಯದಲ್ಲಿ ಆಹಾರ ಕೇಳುವುದಿದೆ.

ಇದನ್ನೂ ಓದಿ : https://vijayatimes.com/kantara-beats-kgf-2-record/

ಪತಿಯಾದವನು ಗರ್ಭಿಣಿ ಪತ್ನಿಯ ಈ ಸಂಗತಿಯ ಬಗ್ಗೆ ತಿಳಿದಿರಬೇಕು. ಕೈಲಾದಷ್ಟು ಪತ್ನಿಯ ಹಸಿವನ್ನು ನೀಗಿಸುವ ಪ್ರಯತ್ನ ಮಾಡಬೇಕು. ಆಕೆಗೆ ಪ್ರಿಯವಾದದ್ದನ್ನು ತಂದುಕೊಡುವ ಪ್ರಯತ್ನ ಮಾಡಬೇಕು.

ಗರ್ಭಿಣಿ ಮಹಿಳೆಯರಿಗೆ ವಿಚಿತ್ರ ಆಸೆಗಳು ಸರ್ವೇ ಸಾಮಾನ್ಯ.

ಗರ್ಭಿಣಿಯರಿಗೆ ಪದೇ ಪದೇ ಹಸಿವು ಮಾತ್ರವಲ್ಲ, ವಿಚಿತ್ರ ಆಹಾರ ಸೇವನೆಯ ಬಯಕೆಯೂ ಉಂಟಾಗುತ್ತದೆ.

ಪತಿಯಾದವನಿಗೆ ಈ ಸಂಗತಿ ತಿಳಿದಿರುವುದು ಅತ್ಯಗತ್ಯ.

ಪತ್ನಿ ವಿಚಿತ್ರ ರೀತಿಯ ಆಹಾರವನ್ನು ಕೇಳಿದಾಗ, ಪತಿ ಅದರ ಬಗ್ಗೆ ತಮಾಷೆ ಮಾಡುವ ಬದಲು, ಆಕೆಯ ಮನಸ್ಥಿತಿ ಅರಿಯುವ ಪ್ರಯತ್ನವನ್ನು ನಡೆಸಬೇಕು.

ಗರ್ಭಿಣಿಯರ ತೂಕ ಹೆಚ್ಚಾಗುವುದು ಸಾಮಾನ್ಯ ಸಂಗತಿ. ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಾಗುವ ಕಾರಣ, ತೂಕ ಹೆಚ್ಚಾಗುವುದು ಸರ್ವೇ ಸಾಮಾನ್ಯ.

ಗರ್ಭಿಣಿ ಪತ್ನಿಯ ತೂಕ ಹೆಚ್ಚಾಗುತ್ತಿದ್ದರೆ ಅದನ್ನು ಆಡಿಕೊಳ್ಳಬೇಡಿ. ಗರ್ಭಾವಸ್ಥೆಯಲ್ಲಿ ಇದು ಸಾಮಾನ್ಯ ಎನ್ನುವ ಅರಿವು ಪತಿಗೆ ಇರಬೇಕು.

ಗರ್ಭಿಣಿ ತೂಕ ಹೆಚ್ಚಾಗುತ್ತಿದೆ ಎಂದು ನೀವು ಅದನ್ನು ತಮಾಷೆ ಮಾಡುತ್ತಿದ್ದರೆ ಅಥವಾ ತೂಕ ನಿಯಂತ್ರಣ ಮಾಡುವಂತೆ ಸೂಚನೆ ನೀಡುತ್ತಿದ್ದರೆ ಅದು ಪತ್ನಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಇದನ್ನೂ ಓದಿ : https://vijayatimes.com/tipu-nija-kanasugalu/


ಮನೆ ಕೆಲಸಗಳಲ್ಲಿ ಗರ್ಭಿಣಿ ಪತ್ನಿಯ ಜೊತೆ ಕೈ ಜೋಡಿಸುವುದು ಅಗತ್ಯ.

ಪತ್ನಿಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎನ್ನುವ ವಿಷಯ ಎಷ್ಟು ಸಂತೋಷ ನೀಡುತ್ತದೆಯೋ ಅಷ್ಟೆ ಜವಾಬ್ದಾರಿಯನ್ನು ಕೂಡ ಹೆಚ್ಚಿಸುತ್ತದೆ.

ಪತ್ನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದು ಈ ಸಮಯದಲ್ಲಿ ಅನಿವಾರ್ಯ ಹಾಗೂ ಅಗತ್ಯ ಕೂಡ.

ಇದನ್ನೂ ಓದಿ : https://vijayatimes.com/10k-google-employees/

ಈ ಸಮಯದಲ್ಲಿ ಆಕೆಯೊಬ್ಬಳೇ ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಿಲ್ಲ, ಇದರಿಂದ ಆಕೆಯ ಆರೋಗ್ಯದಲ್ಲಿ ಏರುಪೇರಾಗಬಹುದು ಎನ್ನುವುದು ನಿಮಗೆ ನೆನಪಿರಲಿ.

ಗರ್ಭಿಣಿ ಮಹಿಳೆಗೆ ಸಾಧ್ಯವಾದಷ್ಟು ವಿಶ್ರಾಂತಿ ನೀಡಲು ಪ್ರಯತ್ನಿಸಿ. ಆಕೆಯ ನಿದ್ರೆಗೆ ಆದ್ಯತೆ ನೀಡಬೇಕು. ಗರ್ಭಿಣಿ ಮಹಿಳೆಗೆ ಹೆಚ್ಚು ನಿದ್ರೆಯ ಅವಶ್ಯಕತೆಯಿರುತ್ತದೆ.

ಆಕೆ ಹೊತ್ತಲ್ಲದ ಹೊತ್ತಲ್ಲಿ ನಿದ್ರೆ ಮಾಡಲು ಇಚ್ಚಿಸಬಹುದು. ಆಕೆಯ ನಿದ್ರೆಗೆ ಯಾವುದೇ ಭಂಗ ಬರದಂತೆ ನೋಡಿಕೊಂಡು, ಸಾಧ್ಯವಾದಷ್ಟು ಆಕೆ ನಿದ್ರೆ ಮಾಡಲು ಅವಕಾಶ ಮಾಡಿಕೊಡಿ.

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತಿರುತ್ತದೆ. ಇದರಿಂದ ಮಹಿಳೆಯ ಮೂಡ್ ಸ್ವಿಂಗ್ ಆಗುವುದು ಸರ್ವೇ ಸಾಮಾನ್ಯ.

https://youtu.be/cViS_eJ77Vo ಕ್ರಷರ್ ನಿಂದ ನೆಮ್ಮದಿ ಕಳೆದುಕೊಂಡ ಸೌದತ್ತಿ ಗ್ರಾಮಸ್ಥರು!

ಸಣ್ಣ ಪುಟ್ಟ ವಿಷಯಕ್ಕೂ ಆಕೆ ಗಲಾಟೆ ಮಾಡಬಹುದು ಅಥವಾ ಕಿರುಚಾಡಬಹುದು.

ಇದನ್ನು ಪುರುಷರು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ಎದುರಿಸಬೇಕು.

ಆಕೆಯ ಜೊತೆ ಜಗಳಕ್ಕೆ ಇಳಿಯುವ ಮುನ್ನ ಆಕೆಯ ದೇಹ ಹಾಗೂ ಮನಸ್ಥಿತಿಯ ಬಗ್ಗೆ ಒಮ್ಮೆ ಯೋಚಿಸಿ, ಶಾಂತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು.

Exit mobile version