ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಿ ಇಲ್ಲ ನಾವು ನಿಮ್ಮನ್ನು ಥಳಿಸದೆ ಬಿಡುವುದಿಲ್ಲ : ತೃಣಮೂಲ ಕಾಂಗ್ರೆಸ್!

Mamata banerjee

ಬಂಗಾಳದ(Bengal) ಮುರ್ಷಿದಾಬಾದ್(Murshidabad) ಜಿಲ್ಲೆಯ ತೃಣಮೂಲ ಕಾಂಗ್ರೆಸ್ (TMC) ನಾಯಕರೊಬ್ಬರು ಬಂಗಾಳದ ಮುಖ್ಯಮಂತ್ರಿ(ChiefMinister) ಮಮತಾ ಬ್ಯಾನರ್ಜಿ(Mamata Banerjee) ಅವರನ್ನು ನಾಡಿಯಾದಲ್ಲಿ ಸಂಭವಿಸಿದ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದೆ ಮಾನಹಾನಿ ಮಾಡಲು ಪ್ರಯತ್ನಿಸಿದರೆ ಅಂಥವರನ್ನು ಥಳಿಸುವುದೇ ಬಿಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ತೃಣಮೂಲ ಕಾಂಗ್ರೆಸ್ ನಾಯಕ ಬೆದರಿಕೆ ಹಾಕುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ನಾಡಿಯಾ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಪ್ರತಿಪಕ್ಷಗಳು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಮಮತಾ ಬ್ಯಾನರ್ಜಿಯವರ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡುವುದನ್ನು ಈಗಲೇ ನಿಲ್ಲಿಸಬೇಕು ಎಂದು ಗುಡುಗಿದ್ದಾರೆ. ಟಿಎಂಸಿಯ ಭಾಗಬಂಗೋಲಾ ಬ್ಲಾಕ್ ಒನ್ ಕಮಿಟಿ ಅಧ್ಯಕ್ಷ ಅಫ್ರೋಜ್ ಸರ್ಕಾರ್, “ಗುಂಪು ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಿ! ಆಗಲಿಲ್ವಾ ಮಮತಾ ಬ್ಯಾನರ್ಜಿ ಅವರ ಮಾನಹಾನಿ ಮಾಡುವುದನ್ನು ನಿಲ್ಲಿಸಿ.

ನಿಲ್ಲಿಸದಿದ್ದರೇ ನಾವು ಲಾಠಿಗಳಿಂದ ನಿಮ್ಮ ಬಾಯಿಯನ್ನು ಮುಚ್ಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. “ನಾನು ಯಾರಿಗೂ ಹೆದರುವುದಿಲ್ಲ, ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಸ್ವಂತ ಮಗನಿಲ್ಲದಿರಬಹುದು, ಆದ್ರೆ, ನಾನು ಅವರ ಮಗ”. “ಗುಂಪು ಅತ್ಯಾಚಾರ ನಡೆದಿದ್ದರೆ, ನಾವು ಆರೋಪಿಗಳನ್ನು ಬಂಧಿಸಲು ಪೊಲೀಸರನ್ನು ಮಾತ್ರ ಕೇಳುತ್ತೇವೆ. ಆದರೆ ಮಮತಾ ಬ್ಯಾನರ್ಜಿ ಅವರನ್ನು ಈ ರೀತಿ ಮಾನಹಾನಿ ಮಾಡಬಾರದು, ಈ ರೀತಿ ನೀವು ಕತಂತ್ರ ಎಸಗಿದರೆ ಅವರು ತಮ್ಮ ಸ್ಥಾನದಿಂದ ಕೆಳೆಗಿಳಿಯುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಆರೋಪಗಳನ್ನು ಕುರಿತು ಕೇಳಿದ ಪ್ರಶ್ನೆಗಳಿಗೆ ಕೊಟ್ಟ ಉತ್ತರಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ತದನಂತರ ಹಲವು ವಲಯಗಳಿಂದ ತೀವ್ರ ಟೀಕೆಗೆಳು ವ್ಯಾಪಕವಾಗಿತ್ತು. “ಅತ್ಯಾಚಾರದಿಂದ ಅಪ್ರಾಪ್ತ ವಯಸ್ಕಳು ಸಾವನ್ನಪ್ಪಿದ್ದಾಳೆ ಎಂದು ಅವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅದನ್ನು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿಯಾಗಿದ್ದಾಳೇ ಅಥವಾ ಪ್ರೇಮ ಸಂಬಂಧ ಹೊಂದಿದ್ದೀರಾ? ಅವರು ವಿಚಾರಿಸಿದ್ದಾರೆಯೇ? ನಾನು ಪೊಲೀಸರನ್ನು ಕೇಳಿದ್ದೇನೆ, ಅವರು ಬಂಧಿಸಿದ್ದಾರೆ.

ನಾನು ಹುಡುಗಿಗೆ ಹುಡುಗನೊಂದಿಗೆ ಸಂಬಂಧವಿದೆ ಎಂದು ಹೇಳಿದನು. ಮಮತಾ ಬ್ಯಾನರ್ಜಿ ಅತ್ಯಾಚಾರದ ಬಗ್ಗೆ ಪ್ರಶ್ನಿಸಿದಾಗ ನೀಡಿದ ಹೇಳಿಕೆ ಹೀಗಿತ್ತು, “ಇದೊಂದು ಪ್ರೇಮ ಸಂಬಂಧ ಮತ್ತು ಕುಟುಂಬಕ್ಕೆ ತಿಳಿದಿದ್ದರಿಂದ ಅದು ದೃಢಪಟ್ಟಿದೆ. ದಂಪತಿಗಳು ಸಂಬಂಧದಲ್ಲಿದ್ದರೆ, ನಾನು ಅದನ್ನು ನಿಲ್ಲಿಸಬಹುದೇ? ಇದು ಯುಪಿ ಅಲ್ಲ, ನಾವು ಇಲ್ಲಿ ಲವ್ ಜಿಹಾದ್ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಯಾವುದೇ ಅವ್ಯವಹಾರಗಳು ಕಂಡುಬಂದರೆ, ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ.

ಒಬ್ಬ ಶಂಕಿತನನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಾಕಷ್ಟು ಗಲಭೆಗಳು ಬುಗಿಲೆದ್ದೆವು. 14 ವರ್ಷದ ಬಾಲಕಿಯ ಪೋಷಕರ ಪ್ರಕಾರ, ಸ್ಥಳೀಯ ಟಿಎಂಸಿ ನಾಯಕನ ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಯುವತಿ ಹೋಗಿದ್ದಳು. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

Exit mobile version