ಬಂದೂಕು ಬಳಸುವವರನ್ನು ಬಂದೂಕಿನಿಂದಲೇ ಎದುರಿಸಬೇಕು : ತಮಿಳುನಾಡು ರಾಜ್ಯಪಾಲ

rn Ravi

ಚೆನ್ನೈ: ಬಂದೂಕು(Gun) ಬಳಸುವವರನ್ನು ಬಂದೂಕಿನಿಂದಲೇ ಎದುರಿಸಬೇಕು. ಹಿಂಸಾಚಾರದ(Voilence) ಬಗ್ಗೆ ಸರ್ಕಾರಗಳು “ಶೂನ್ಯ ಸಹಿಷ್ಣುತೆ” ನೀತಿ ಮತ್ತು ಯಾವುದೇ ಸಶಸ್ತ್ರ ಗುಂಪಿನೊಂದಿಗೆ ಮಾತುಕತೆ ನಡೆಸಬಾರದು ಎಂದು ತಮಿಳುನಾಡು(Tamilnadu) ರಾಜ್ಯಪಾಲ(Governer) ಆರ್.ಎನ್.ರವಿ(RN Ravi) ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಚ್ಚಿಯಲ್ಲಿ(Kochi) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ, ತಮಿಳುನಾಡು ಗವರ್ನರ್ ಆರ್.ಎನ್.ರವಿ ಅವರು, ಕಳೆದ 8 ವರ್ಷಗಳಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಶರಣಾಗತಿಗಾಗಿ ಯಾವುದೇ ಸಶಸ್ತ್ರ ಗುಂಪಿನೊಂದಿಗೆ ಒಂದೇ ಒಂದು ಮಾತುಕತೆ ನಡೆಸಿಲ್ಲ.

ಹಿಂಸಾಚಾರಕ್ಕೆ ತಮಿಳುನಾಡು ಸರ್ಕಾರ(Tamilnadu Governer) “ಶೂನ್ಯ ಸಹಿಷ್ಣುತೆ” ನೀತಿಯನ್ನು ಪ್ರತಿಪಾದಿಸಿದೆ. ದೇಶದ ಏಕತೆ ಮತ್ತು ಸಮಗ್ರತೆಯ ವಿರುದ್ಧ ಮಾತನಾಡುವ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಶರಣಾಗತಿಗಾಗಿ ಕಳೆದ 8 ವರ್ಷಗಳಲ್ಲಿ ಯಾವುದೇ ಸಶಸ್ತ್ರ ಗುಂಪಿನೊಂದಿಗೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಮುಂಬೈ(Mumbai) ಮೇಲೆ ಭಯೋತ್ಪಾದಕರ(Terrorist) ದಾಳಿ ನಡೆದಾಗ ಇಡೀ ದೇಶದ ಮೇಲೆ ದಾಳಿಯಾಗಿತ್ತು. ಬೆರಳಣಿಕೆಯಷ್ಟು ಭಯೋತ್ಪಾದಕರಿಂದ ದೇಶವು ಅವಮಾನಿತವಾಯಿತು.

ದಾಳಿಯ 9 ತಿಂಗಳೊಳಗೆ, ನಮ್ಮ ಅಂದಿನ ಪ್ರಧಾನಿ ಮತ್ತು ಪಾಕ್ ಪ್ರಧಾನಿ ಎರಡೂ ದೇಶಗಳು ಭಯೋತ್ಪಾದನೆಗೆ ಬಲಿಯಾದವು ಎಂದು ಜಂಟಿ ಹೇಳಿಕೆಗೆ ಸಹಿ ಹಾಕಿದರು. ಇದು ಏನು? ಪಾಕಿಸ್ತಾನ(Pakistan) ಮಿತ್ರವೋ ಅಥವಾ ಶತ್ರುವೋ ಎಂಬುದು ಸ್ಪಷ್ಟವಾಗಬೇಕು. ಇನ್ನು ಪುಲ್ವಾಮಾ ದಾಳಿಯ(Pulwama Attack) ನಂತರ ನಾವು ಬಾಲಾಕೋಟ್ನಲ್ಲಿ ವಾಯು ಶಕ್ತಿಯನ್ನು ಬಳಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೇವು. ನೀವು ಭಯೋತ್ಪಾದನಾ ಕೃತ್ಯ ಎಸಗಿದರೆ ತಕ್ಕ ಬೆಲೆ ತೆರಲು ಸಿದ್ದವೀರಿ ಎಂಬ ಸಂದೇಶವನ್ನು ಮೋದಿ ನೇತೃತ್ವದ ಎನ್‌ಡಿಎ(NDA) ಸರ್ಕಾರ ಪಾಕಿಸ್ತಾನಕ್ಕೆ ನೀಡಿತ್ತು.

ಭಯೋತ್ಪಾದನೆಯನ್ನು ಎದುರಿಸಲು ಕಠಿಣ ನೀತಿಗಳ ಅಗತ್ಯವಿದೆ. ತುರ್ತು(Emergency) ಮತ್ತು ಕಠಿಣ ನೀತಿಗಳ ಮೂಲಕ ಮಾತ್ರ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ತಮಿಳುನಾಡು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.

Exit mobile version