ರೈತರನ್ನು ತಡೆಯಲು, ಸೇತುವೆ ನಿರ್ಮಿಸಿ: ರಾಹುಲ್ ಗಾಂಧಿ

ನವದೆಹಲಿ, ಪೆ. 02: ಕೃಷಿ ಕಾಯಿದೆಗಳನ್ನು ವಿರೋಧಿಸಿ  ರೈತರು ಪ್ರತಿಭಟನಾನಿರತರಾಗಿದ್ದು ದೆಹಲಿ ಪ್ರವೇಶಿಸದಂತೆ ಸಿಮೆಂಟ್ ಸುರಿದು ಬ್ಯಾರಿಕೇಡ್ ಗಳನ್ನಿಟ್ಟು ಭದ್ರಕೋಟೆ ನಿರ್ಮಿಸಿರುವ ಪೊಲೀಸರ ಕ್ರಮ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಕೇಂದ್ರಕ್ಕೆ  ಸಲಹೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ರೈತರನ್ನು ತಡೆಯಲು ಗೋಡೆಯಲ್ಲ, ಸೇತುವೆಗಳನ್ನು ನಿರ್ಮಿಸಿ ಎಂದು ಹೇಳಿದ್ದಾರೆ.

ಟಿಕ್ರಿ, ಘಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ರೈತರ ತಡೆಗಾಗಿ ರೈತರು ಒಳ ಪ್ರವೇಶಿಸಿದಂತೆ ರಸ್ತೆಗಳಿಗೆ ಗೋಡೆಗಳನ್ನು ನಿರ್ಮಿಸಲಾಗಿದೆ. ಕ್ರೇನ್ ಮೂಲಕ ರಸ್ತೆಗಳನ್ನು ಅಗೆದು ಗ್ರಿಲ್ ಹಾಗೂ ಮೊಳೆಗಳನ್ನು ಸಿಮೆಂಟ್ ಮೂಲಕ ರಸ್ತೆಗೆ ಜೋಡಿಸಲಾಗಿದೆ. ಇನ್ನು ಬ್ಯಾರಿಕೇಡ್ ಗಳನ್ನು ಅಳವಡಿಸಿ, ಇದು ಭದ್ರವಾಗಿ ನಿಲ್ಲುವ ಸಲುವಾಗಿ ಕಾಂಕ್ರೀಟ್ ಸುರಿದು ಗಟ್ಟಿ ಮಾಡಿ, ತಡೆಗಳನ್ನು ನಿರ್ಮಿಸಲಾಗಿದೆ. ಪೊಲೀಸರ ಭದ್ರತೆಗಳ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

Exit mobile version