ಟೊಕಿಯೋ ಒಲಂಪಿಕ್ಸ್‌: ಕುಸ್ತಿಯಲ್ಲಿ ಫೈನಲ್ ತಲುಪಿದ ರವಿ ದಹಿಯಾ; ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಪದಕ ಖಚಿತ

ಟೋಕಿಯೋ, ಆ. 04: ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾ, ಪುರುಷರ 57 ಕೆ.ಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಾತ್ರಿಪಡಿಸಿದ್ದಾರೆ.

ಬುಧವಾರ ನಡೆದ ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ರವಿಕುಮಾರ್‌ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಗೆಲ್ಲುತ್ತಿರುವ ಐದನೇ ಭಾರತೀಯ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ದೀಪಕ್ ಪುನೀಯಾಗೆ ನಿರಾಸೆ
ಕ್ರೀಡಾಕೂಟದ ಪುರುಷರ 86ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ದೀಪಕ್ ಪುನೀಯಾ ನಿರಾಸೆ ಅನುಭವಿಸಿದರು. ಅಮೆರಿಕಾದ ಡೇವಿಡ್ ಟೇಲರ್ ವಿರುದ್ಧದ ಜಿದ್ದಾಜಿದ್ದಿನ ಕಾದಾಟದಲ್ಲಿ ದೀಪಕ್ ಪುನೀಯಾ ಸೋಲಿನ ಆಘಾತ ಅನುಭವಿಸಿದರು.‌ ಆದರೆ ದೀಪಕ್ ಅವರ ಪದಕದ‌ ಅಸೆ ಜೀವಂತವಾಗಿದ್ದು, ಕಂಚಿನ ಪದಕಕ್ಕಾಗಿ ಹಣಾಹಣಿ ನಡೆಸಲಿದ್ದಾರೆ.

Exit mobile version