ಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಎರಡನೇ ಪದಕ; ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಕಂಚಿನ‌ ಪದಕ ಗೆದ್ದ ಭಾರತದ ಪಿ.ವಿ ಸಿಂಧೂ

ಟೋಕಿಯೋ, ಅ. 02: ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ದೊಡ್ಡ ನಿರೀಕ್ಷೆ ಮೂಡಿಸಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧೂ ಅವರ ಪದಕ ಗೆಲ್ಲುವ ಕನಸು ನನಸಾಗಿದ್ದು, ಟೋಕಿಯೋ ಒಲಂಪಿಕ್ಸ್‌‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧೂ, ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.

ಮೂರನೇ ಸ್ಥಾನಕ್ಕಾಗಿ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧೂ, ಅತ್ಯುತ್ತಮ‌ ಪ್ರದರ್ಶನ ನೀಡುವ ಮೂಲಕ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ 2ನೇ ವೈಯಕ್ತಿಕ ಪದಕ ಪಡೆದ ಎರಡನೇ ಅಥ್ಲೆಟ್ ಎಂಬ ಹೆಗ್ಗಳಿಕೆ ಪಡೆದರು.

ಚೀನಾದ ಹಿ ಬಿಂಗ್ ಜಿಯಾವೋ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಹಿಡಿತ ಸಾಧಿಸಿದ ಪಿ.ವಿ. ಸಿಂಧೂ ಆಕ್ರಮಕಾರಿ ಆಟವಾಡಿದರು. ಮೊದಲ ಸೆಟ್‌ನಲ್ಲಿ ಒಂದು ಹಂತದಲ್ಲಿ 21-13 ಹಾಗೂ ಎರಡನೇ ಸೆಟ್ ನಲ್ಲಿ 21-15ರ ಅಂತರದಲ್ಲಿ ಸುಲಭವಾಗಿ ಸೆಟ್ ಗೆದ್ದು ಬೀಗಿದರು. ಆ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧೂ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು‌ ಗಣ್ಯರು ಶ್ಲಾಘಿಸಿದ್ದಾರೆ.

Exit mobile version