ಟೋಕಿಯೋ ಸೆ 04 : ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಇಂದೂ ಕೂಡ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ.
ಇಂದು ಬೆಳಗ್ಗೆ ನಡೆದ ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಮನೀಷ್ ನರ್ವಾಲ್ ಚಿನ್ನದ ಪದಕವನ್ನು ಬೇಟೆಯಾಡಿದ್ದಾರೆ. ಜೊತೆಗೆ ಮತ್ತೊಬ್ಬ ಕ್ರೀಡಾಪಟು ಸಿಂಗ್‌ರಾಜ್ ಕೂಡ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶೂಟಿಂಗ್‌ನಲ್ಲಿ ಮನೀಷ್ ನರ್ವಾಲ್ ಮತ್ತು ಸಿಂಗ್‌ರಾಜ್ 2 ಪದಕಗಳನ್ನು ಗೆಲ್ಲುವುದರ ಮೂಲಕ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಭಾರತ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚು ಸಹಿತ ಒಟ್ಟು 15 ಪದಕಗಳನ್ನು ಗಳಿಸಿ 34ನೇ ಸ್ಥಾನದಲ್ಲಿದೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತೀಯ ಕ್ರೀಡಾಪಟುಗಳ ವಿವಿರ :
1. ಭಾವಿನ ಪಟೇಲ್ – ಬೆಳ್ಳಿ ಪದಕ – ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್
2. ನಿಶಾದ್ ಕುಮಾರ್ – ಬೆಳ್ಳಿ ಪದಕ – ಪುರುಷರ ಹೈಜಂಪ್
3. ಅವನಿ ಲೇಖರ – ಚಿನ್ನದ ಪದಕ – ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್
4. ದೇವೇಂದ್ರ ಜಜಾರಿಯಾ – ಬೆಳ್ಳಿ ಪದಕ – ಪುರುಷರ ಜಾವೆಲಿನ್ ಥ್ರೋ
5. ಸುಂದರ್ ಸಿಂಗ್ ಗುರ್ಜಾರ್ – ಕಂಚಿನ ಪದಕ – ಪುರುಷರ ಜಾವೆಲಿನ್ ಥ್ರೋ
6. ಯೋಗೀಶ್ ಕಠುನಿಯಾ – ಬೆಳ್ಳಿ ಪದಕ – ಪುರುಷರ ಡಿಸ್ಕಸ್ ಥ್ರೋ
7. ಸುಮಿತ್ ಆಂಟಿಲ್ – ಚಿನ್ನದ ಪದಕ – ಪುರುಷರ ಜಾವೆಲಿನ್ ಥ್ರೋ
8. ಸಿಂಗರಾಜ್ ಅಧಾನ – ಕಂಚಿನ ಪದಕ – ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್
9. ಮರಿಯಪ್ಪನ್ ತಂಗವೇಲು – ಬೆಳ್ಳಿ ಪದಕ – ಪುರುಷರ ಹೈ ಜಂಪ್
10. ಶರದ್ ಕುಮಾರ್ – ಕಂಚಿನ ಪದಕ – ಪುರುಷರ ಹೈಜಂಪ್
11. ಪ್ರವೀಣ್ ಕುಮಾರ್ – ಬೆಳ್ಳಿ ಪದಕ – ಪುರುಷರ ಎತ್ತರ ಜಿಗಿತ
12. ಅವನಿ ಲೇಖರ – ಕಂಚಿನ ಪದಕ – ಮಹಿಳೆಯರ 50 ಮೀಟರ್ ರೈಫಲ್
13. ಹರ್ವಿಂದರ್ ಸಿಂಗ್ – ಕಂಚಿನ ಪದಕ – ಪುರುಷರ ವೈಕ್ತಿಕ ರಿಕ್ಯೂರ್ವ್ ಸ್ಪರ್ಧೆ
14. ಮನೀಷ್ ನರ್ವಾಲ್ – ಚಿನ್ನದ ಪದಕ – ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
15. ಸಿಂಗ್‌ರಾಜ್ – ಬೆಳ್ಳಿ ಪದಕ – ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ