ಪ್ಯಾರಾಲಿಂಪಿಕ್‌ ಚಿನ್ನ ಗೆದ್ದ ಅವನಿ

ಟೋಕಿಯೋ, ಆಗಸ್ಟ್ 30 : ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. ಭಾರತದ ಶೂಟರ್ ಅವನಿ ಲೇಖರಾ 10 ಮೀಟರ್ ಏರ್‌ ರೈಫಲ್ ಸ್ಪರ್ಧೆಯಲ್ಲಿ ಇಂದು ಚಿನ್ನಕ್ಕೆ ಗುರಿಯಿಟ್ಟು ಮೊದಲ ಚಿನ್ನದ ಪದಕವನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಭಾರತ ಚಿನ್ನದ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿ ಗೆದ್ದ ಪ್ರಥಮ ಚಿನ್ನದ ಪದಕ ಇದಾಗಿದೆ. ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದುವರೆಗೂ 4 ಚಿನ್ನದ ಪದಕವನ್ನು ಗೆದ್ದಿದ್ದು ಇದು 5ನೇ ಪದಕವಾಗಿದೆ.

ಅವನಿ ಲೇಖರಾ ಫೈನಲ್‌ನಲ್ಲಿ ಒಟ್ಟು 249.6 ಅಂಕಗಳನ್ನು ಸಂಪಾದಿಸುವ ಮೂಲಕ ವಿಶ್ವ ದಾಖಲೆಯನ್ನು ಕೂಡ ಸರಿಗಟ್ಟಿದ ಸಾಧನೆ ಮಾಡಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಉಕ್ರೈನ್‌ನ ಇರ್ಯಾನಾ ಶೆಟ್ನಿಕ್ ಇಷ್ಟೇ ಅಂಕಗಳನ್ನು ಸಂಪಾದಿಸುವ ಮೂಲಕ ದಾಖಲೆ ಬರೆದಿದ್ದರುಅವರ ದಾಖಲೆಯನ್ನು ಇದೀಗ  ಅವನಿ ಲೇಖರಾ ಸರಿಗಟ್ಟಿ ಇತಿಹಾಸ ಸೃಷ್ಟಿಸಿದ್ದಾರೆ.

ಭಾರತ ಈ ಬಾರಿಯ ಪ್ಯಾರಾಲಿಂಪಿಕ್‌ನಲ್ಲಿ ಇದೂವರೆಗೂ 7 ಪದಕಗಳನ್ನು ಭೇಟೆಯಾಡಿದ್ದು ಇದರಲ್ಲಿ 1 ಚಿನ್ನ, 4 ಬೆಳ್ಳಿ ಹಾಗೂ 2 ಕಂಚುಗಳನ್ನು ಗೆದ್ದು ಪ್ರಸ್ತುತ 34ನೇ ಸ್ಥಾನವನ್ನು ಪಡೆದುಕೊಂಡಿದೆ.

Exit mobile version