ಭಾರತದ ಸರ್ವಶ್ರೇಷ್ಠ 5 ಆಟಗಾರರನ್ನು ಹೆಸರಿಸಿದ ಇಂಗ್ಲೆಂಡ್ ಕ್ರಿಕೆಟಿಗ ಮೊಯೀನ್ ಅಲಿ

Bengaluru: ಇಂಗ್ಲೆಂಡ್ ಕ್ರಿಕೆಟ್ ತಂಡದ (England Cricket Team) ಖ್ಯಾತ ಮಾಜಿ ಕ್ರಿಕೆಟಿಗ ಮೊಯೀನ್ ಅಲಿ ಅವರು, ಭಾರತ ಕ್ರಿಕೆಟ್ ತಂಡದ ಸಾರ್ವಕಾಲಿಕ ಐದು ಸರ್ವಶ್ರೇಷ್ಠ ಆಟಗಾರರ ಹೆಸರನ್ನು ಹೆಸರಿದ್ದಾರೆ. ಸ್ಯಾಪ್ ಆರ್ಮಿ ನಡೆಸಿದ್ದ ಸಂವಾದದಲ್ಲಿ ಮೊಯೀನ್ ಅಲಿ (Moeen Ali) ಭಾರತ ತಂಡದ ಸರ್ವಶ್ರೇಷ್ಠ ಐವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ

ಕ್ರಿಕೆಟಿಗ ಮೊಯೀನ್ ಅಲಿ ಅವರ ಪ್ರಕಾರ, ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಭಾರತ ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಆಟಗಾರನಾಗಿದ್ದು, ಆತನಿಗೆ ಮೊದಲ ಸ್ಥಾನ ನೀಡುತ್ತೇನೆ ಎಂದಿದ್ದಾರೆ. ಭಾರತ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಎಲ್ಲ ಟ್ರೋಫಿಯನ್ನು ಗೆದ್ದು ಕೊಟ್ಟಿದ್ದಾರೆ. ಆದರೆ ಆತ ಎಂತಹ ಆಟಗಾರ ಎಂಬುದನ್ನು ಬಹುತೇಕ ಜನರು ಮರೆತು ಹೋಗಿದ್ದಾರೆ.

ಇನ್ನು ನಾನು ಎರಡನೇಯ ಸ್ಥಾನವನ್ನು ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಗೆ (Virat Kohli) ನೀಡುತ್ತೇನೆ. ಆತನ ಶ್ರೇಷ್ಠ ಬ್ಯಾಟರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಭಾರತ ತಂಡದ ಮೂರನೇಯ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್. ಆದರೆ ಇದನ್ನು ಹೇಳಲು ನನಗೆ ತುಂಬಾ ನೋವಾಗುತ್ತದೆ. ಸಚಿನ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ನೈಜ ಆಟವನ್ನು ಪ್ರದರ್ಶಿಸಿದ್ದಾರೆ. ತಾಂತ್ರಿಕವಾಗಿ ಸಚಿನ್ ಆಳವಾದ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಸಚಿನ್ ತೆಂಡೂಲ್ಕರ್ (Sachin Tendulkar) ವಿಭಿನ್ನ ಮಟ್ಟದಲ್ಲಿ ಆಡುತ್ತಿದ್ದರು.

ಭಾರತ ತಂಡದ ವೀರೇಂದ್ರ ಸೆಹ್ವಾಗ್ (Virender Sehwag) ನನ್ನ ನೆಚ್ಚಿನ ಆಟಗಾರ. ಆತನಿಗೆ 4ನೇ ಸ್ಥಾನ ನೀಡುತ್ತೇನೆ. ಏಕೆಂದರೆ ಟೆಸ್ಟ್, ಏಕದಿನ ಹಾಗೂ ಟಿ-20 ಹೀಗೆ ಎಲ್ಲ ಸ್ವರೂಪದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದರು. ಎದುರಾಳಿ ತಂಡದ ಬೌಲರ್ ಗಳ (Bowler) ಎದೆಯಲ್ಲಿ ನಡುಕ ಹುಟ್ಟಿಸಿ ರನ್ ಗಳಿಸಿದ್ದಾರೆ,” ಎಂದು ಅಲಿ ತಿಳಿಸಿದ್ದಾರೆ. ಇನ್ನು ಯುವರಾಜ್ ಸಿಂಗ್ ಗೆ 5ನೇ ಸ್ಥಾನ ನೀಡುತ್ತೇನೆ.

ನಾನು ಒಬ್ಬ ಬ್ಯಾಟರ್ ಆಗಿ ಈತನ ಆಟವನ್ನು ನೋಡಲು ಬಯಸುತ್ತೇನೆ. ಆತ ಬ್ಯಾಟನ್ನು ತುಂಬಾ ಸೊಗಸಾಗಿ ಬೀಸುತ್ತಿದ್ದನು. ಫಾರ್ಮ್ ನಲ್ಲಿ ಇರುತ್ತಾನೋ ಆಗ ಆತನ ಆಟ ನೋಡಲು ಬಯಸುತ್ತೇನೆ ಎಂದು ಮೊಯಿನ್ ಅಲಿ ಹೇಳಿದ್ದಾರೆ.

Exit mobile version