India : ಮುಂದುವರಿದ ಆಧುನಿಕ (Modren)ಜಗತ್ತಿನಲ್ಲಿ, ಒಂದು ದಿನ ಬಿಡಿ, ಒಂದು ಘಂಟೆ ಕೂಡ ಮೊಬೈಲ್ (Mobile) ಇಲ್ಲದೇ ಕೈ ಕಾಲೇ ಆಡೋದಿಲ್ಲ ಎನ್ನುವ ಹಂತಕ್ಕೆ ನಾವು ತಲುಪಿದ್ದೇವೆ. ಹಾಗಾಗಿ,
ಏನೂ ತಡವಾದರೂ ಪರವಾಗಿಲ್ಲ, ಸಮಯಕ್ಕೆ ಸರಿಯಾಗಿ ಮೊಬೈಲ್ ರಿಚಾರ್ಜ್ (Mobile Recharge) ಮಾಡುವುದು ಮಾತ್ರ ಅನಿವಾರ್ಯವಾಗಿಬಿಟ್ಟಿದೆ.

ಸಾಮಾನ್ಯವಾಗಿ, ಒಂದು ತಿಂಗಳ ಪ್ಲಾನ್ ರೀಚಾರ್ಜ್ (Recharge) ಮಾಡಿದರೆ, ನಿಮಗೆ ಬಳಕೆಗೆ ಸಿಗುವ ದಿನಗಳ ಸಂಖ್ಯೆ 24, 26 ಅಥವಾ ಗರಿಷ್ಠ 28 ದಿನಗಳು ಮಾತ್ರ.
ಟೆಲಿಕಾಂ ಆಪರೇಟರ್‌ಗಳು(Telecom Operators) 28/56/84 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಹೆಚ್ಚಿನ ಪ್ರಿಪೇಯ್ಡ್ ದರದ ಪ್ಯಾಕ್‌ಗಳನ್ನು ನೀಡುತ್ತಿದ್ದವು.
ಇದನ್ನೂ ಓದಿ : https://vijayatimes.com/know-about-cockroach/
ಆದರೆ ಗ್ರಾಹಕರು, ಮಾಸಿಕ ಪ್ಯಾಕ್ ಎಂದು ಹೇಳಲಾದ 28-ದಿನಗಳ ವ್ಯಾಲಿಡಿಟಿ (Validity) ಪ್ಯಾಕ್‌ನೊಂದಿಗೆ, ವರ್ಷಕ್ಕೆ 13 ರೀಚಾರ್ಜ್‌ಗಳನ್ನು ಮಾಡಬೇಕಾಗಿತ್ತು! ಹೌದು, ಲೆಕ್ಕ ಹಾಕಿ ನೋಡಿ.
28 ದಿನಗಳಿಗೆ ಮಾತ್ರ ರೀಚಾರ್ಜ್ ಮಾಡಿದಲ್ಲಿ ತಿಂಗಳಿಗೆ ಎರಡು ದಿನದಂತೆ ಕಡಿಮೆ ಆಗುತ್ತಾ ಹನ್ನೆರಡು ತಿಂಗಳಿಗೆ 24 ಕಡಿಮೆ ಆಗುತ್ತದೆ.

ಆಗ ಒಂದು ವರ್ಷದಲ್ಲಿ ಹದಿಮೂರು ಬಾರಿ ರೀಚಾರ್ಜ್ ಮಾಡಿಸಬೇಕಾಗುತ್ತದೆ. ಅದೇ ಮೂವತ್ತು ದಿನಗಳಿಗಾದರೆ ಹನ್ನೆರಡೇ ರೀಚಾರ್ಜ್ ಆಗುತ್ತದೆ. ಈ ಬಗ್ಗೆ ಗಮನ ಸೆಳೆದ ಗ್ರಾಹಕರು, ಟೆಲಿಕಾಂ ರೆಗ್ಯೂಲೇಟರ್ ಆಥಾರಿಟಿ ಆಫ್ ಇಂಡಿಯಾಗೆ ಹಲವು ದೂರುಗಳನ್ನು ನೀಡಿದ್ದರು.
ಇದನ್ನೂ ಓದಿ : https://vijayatimes.com/chethan-ahimsa-about-hindi-diwas/
ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಟೆಲಿಕಾಂ ರೆಗ್ಯೂಲೇಟರ್ ಆಥಾರಿಟಿ ಆಫ್ ಇಂಡಿಯಾ, ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಕನಿಷ್ಠ ವ್ಯಾಲಿಟಿಡಿಯನ್ನು 30 ದಿನ ನೀಡಬೇಕು ಎಂದು ಎಚ್ಚರಿಸಿದೆ.
ಪ್ರತಿ ಟೆಲಿಕಾಂ ಕಂಪನಿ ಕನಿಷ್ಠ ಒಂದು ಪ್ಲಾನ್ ವೌಚರ್, ಸ್ಪೆಷಲ್ ಟಾರಿಫ್ ವೌಚರ್ ಹಾಗೂ ಕೊಂಬೋ ವೌಚರ್ ಅವಧಿಯನ್ನು ಕನಿಷ್ಠ 30 ದಿನ ನೀಡಬೇಕು.
ಗ್ರಾಹಕರು ಈ ತಿಂಗಳು ರಿಚಾರ್ಜ್ ಮಾಡಿದರೆ ಮುಂದಿನ ತಿಂಗಳು ಅದೇ ಸಮಯಕ್ಕೆ ರೀಚಾರ್ಜ್ ಮಾಡುವಂತಿರಬೇಕು. ಈ ರೀಚಾರ್ಜ್ ಪ್ಲಾನ್ ಪ್ರತಿ ತಿಂಗಳು ಇರಬೇಕು. ಗ್ರಾಹಕರು ಯಾವುದೇ ಸಮಸ್ಯೆ ಇಲ್ಲದ 30 ದಿನಗಳ ವ್ಯಾಲಿಟಿಡಿ ಪ್ಲಾನ್ ರೀಚಾರ್ಜ್ ಮಾಡುವಂತಿರಬೇಕು ಎಂದು ಟ್ರಾಯ್ ಎಚ್ಚರಿಕೆ ನೀಡಿತ್ತು.

ಟ್ರಾಯ್ ಎಚ್ಚರಿಕೆ ಬೆನ್ನಲ್ಲೇ ಟೆಲಿಕಾಂ ಸರ್ವೀಸ್ ಕಂಪನಿಗಳು ತಮ್ಮ ಪ್ಲಾನ್ ಬದಲಿಸಿ, ಇದೀಗ 30 ದಿನದ ಪ್ಲಾನ್ ಘೋಷಿಸಿವೆ. ವಿವರ ಹೀಗಿದೆ :
ಜಿಯೋ : 30 ದಿನ ಪ್ಲಾನ್ ವೌಚರ್, 296 ರೂಪಾಯಿ, ಇದೇ ಪ್ಲಾನ್ ಮುಂದಿನ ತಿಂಗಳು ರಿಚಾರ್ಜ್ ಮಾಡಲು 259 ರೂಪಾಯಿ
ಏರ್‌ಟೆಲ್, 30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 128 ರೂಪಾಯಿ, ಇದೇ ಪ್ಲಾನ್ ಮುಂದುವರಿಸಲು ಮುಂದಿನ ತಿಂಗಳು 131 ರೂಪಾಯಿ.

ವೋಡಾಫೋನ್ ಐಡಿಯಾ : 30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 137 ರೂಪಾಯಿ, ಮುಂದಿನ ತಿಂಗಳು ಇದೇ ಪ್ಲಾನ್ ಮುಂದುವರಿಸಲು ರೀಚಾರ್ಜ್ ಬೆಲೆ 141 ರೂಪಾಯಿ.
ಬಿಎಸ್ಎನ್ಎಲ್ : 30 ದಿನದ ವ್ಯಾಲಿಡಿಟಿ ವೌಚರ್(Voucher) ಬೆಲೆ 199 ರೂಪಾಯಿ, ಇದೇ ಪ್ಲಾನ್ ಮತ್ತೆ ಮುಂದುವರಿಸಲು ಬೆಲೆ 229 ರೂಪಾಯಿ.