ರೈಲು ದುರಂತ: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಗುವಾಹಟಿ ಮಾರ್ಗದ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು

Bihar: ಬಿಹಾರದ (Bihar) ಬಕ್ಸರ್ ಜಿಲ್ಲೆಯ ಬಳಿ ಸುಮಾರು ರಾತ್ರಿ 9-30ರ ಸಮಯಕ್ಕೆ ದೆಹಲಿ (Train Accident in Bihar)-ಗುವಾಹಟಿ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ್ದು,

ಅಪಘಾತ ಸಂಭವಿಸಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ರೈಲ್ವೇ ಇಲಾಖೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದೆಹಲಿಯಿಂದ ಗುವಾಹಟಿಗೆ (Guwahati) ಹೊರಟಿದ್ದ ನಾರ್ತ್ ಈಸ್ಟ್ ಎಕ್ಸ್ ಪ್ರೆಸ್‌ ರೈಲು 12506 ನಂಬರಿನ ರೈಲು ಹಳಿ ತಪ್ಪಿದ್ದು, ಬುಧವಾರ ರಾತ್ರಿ 9-30 ಕ್ಕೆ ಬಿಹಾರದ ರಘುನಾಥಪುರ ರೈಲು

ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ 70ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ದುರಾದೃಷ್ಟವಶಾತ್ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರು ಗಾಬರಿಗೊಂಡು ರೈಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಅಸ್ತವ್ಯಸ್ತಗೊಂಡಿದ್ದಕ್ಕೆ ವೀಡಿಯೋ (Video), ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದೆಹಲಿಯ ಆನಂದ್ ವಿಹಾರ್‌ (Anand Vihar) ನಿಲ್ದಾಣದಿಂದ ರೈಲು ಅಸ್ಸಾಂನ ಗುವಾಹಟಿಯ ಕಾಮಾಖ್ಯ ಜಂಕ್ಷನ್ ಗೆ ಹೋಗುವ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು, 6 ಎಸಿ ಬೋಗಿಗಳು

ಪಲ್ಟಿಯಾಗಿ ರೈಲ್ವೇ ಹಳಿ (Train Accident in Bihar) ಮೇಲೆ ಬಿದ್ದಿದೆ.

ಕೂಡಲೇ ರೈಲ್ವೆ ಮತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ವೈದ್ಯಕೀಯ ತಂಡ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಬಕ್ಸರ್ ಸಂಸದರೂ ಆಗಿರುವ ಕೇಂದ್ರ

ಸಚಿವ ಅಶ್ವಿನಿ ಕುಮಾರ್ ಚೌಬೆ (Ashwini Kumar Chaubey) ಅವರು ರೈಲು ಹಳಿತಪ್ಪಿದ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಜನರಿಗೆ ಮಾಹಿತಿ ನೀಡಲು ಈ ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ, ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನೂ ನೀಡಿದ್ದು ಅದು ಈ ಕೆಳಕಂಡಂತಿದೆ.

೧. ಪಾಟ್ನಾ ಸಹಾಯವಾಣಿ- 9771449971
೨. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್- 9794849461, 8081206628
೩. ಡಣಾಪುರ ಸಹಾಯವಾಣಿ- 8905697493
೪. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಾಣಿಜ್ಯ ನಿಯಂತ್ರಣ- 8081212134

ಇನ್ನು ಈ ದುರಂತದಿಂದಾಗಿ ಇದೇ ಮಾರ್ಗದಲ್ಲಿ ಚಲಿಸಬೇಕಿದ್ದ 2 ರೈಲುಗಳನ್ನ ರದ್ದು ಮಾಡಲಾಗಿದೆ. ಜೊತಗೆ 21 ಕ್ಕೂ ಹೆಚ್ಚು ರೈಲುಗಳ ಮಾರ್ಗಗಳನ್ನು ಬೇರೆ ಮಾರ್ಗಕ್ಕೆ ಬದಲಿಸಲಾಗಿದೆ.

ಇದನ್ನು ಓದಿ: ಖ್ಯಾತ ಪತ್ರಕರ್ತೆ, ವಿಜಯ ಟೈಮ್ಸ್‌ನ ಮುಖ್ಯ ಸಂಪಾದಕರಾದ ವಿಜಯಲಕ್ಷ್ಮೀ ಶಿಬರೂರುರವರಿಗೆ ಬಿ.ಎಸ್.ಡಬ್ಲ್ಯೂ.ಟಿ ವರ್ಷದ ವ್ಯಕ್ತಿ ಪ್ರಶಸ್ತಿ

Exit mobile version