ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಮುಲ್ನಾರ್ ಹರ್ವಾನ್‌ನ ಬುಡಕಟ್ಟು ಜನಾಂಗದ ಯುವಕನೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಮತ್ತು ತಮ್ಮ ಕುಟುಂಬ ಮತ್ತು ಸಮುದಾಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಹೌದು,ಬುಡಕಟ್ಟು ಜನಾಂಗದ ಯುವಕನಾದ ತುಫೈಲ್ ಅಹ್ಮದ್ ಮಿಷನ್ ಸ್ಕೂಲ್ ನ್ಯೂ ಥೀದ್ ಹರ್ವಾನ್ ಶ್ರೀನಗರದಿಂದ 8ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದರು. ಶಾಲಿಮಾರ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಭ್ಯಾಸ ಮುಗಿಸಿ, 12ನೇ ತರಗತಿಯನ್ನು ಕೂಡ ಮುಗಿಸಿಕೊಂಡರು.
ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಮಾತನಾಡಿದ ಅಹ್ಮದ್ ಅವರು ತಮ್ಮ ಜೀವನದಲ್ಲಿ ಎದುರಿಸಿದ ಕಠಿಣ ಸಮಯ ಮತ್ತು ಶ್ರಮಿಸಿದ ದಿನಗಳನ್ನು ಹಂಚಿಕೊಂಡರು. ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ ಅಂಶ. ಇಂಟರ್‌ನೆಟ್ ಸೌಲಭ್ಯ ಪಡೆಯಲು ಮತ್ತು ಶಾಲೆಗೆ ಹೋಗಲು ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗ ಬೇಕಾಗಿತ್ತು. ತಾವು ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡರು ಅಹ್ಮದ್. ಇಂಟರ್‌ನೆಟ್ ಪಡೆಯಲು ನಾನು ಶ್ರೀನಗರಕ್ಕೆ ಹೋಗುತ್ತುದ್ದೆ ಮತ್ತು ನನ್ನ ಅಧ್ಯಯನದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಕುಟುಂಬದಲ್ಲೂ ಆರ್ಥಿಕ ಮುಗ್ಗಟ್ಟು ಇತ್ತು. ಆದರೂ ನಾನು 3 ರಿಂದ 4 ನೇ ತರಗತಿಯಲ್ಲಿದ್ದಾಗ, ನಾನು ಹೊಸ ಪುಸ್ತಕಗಳನ್ನು ಖರೀದಿಸಲಿಲ್ಲ ಬದಲಾಗಿ ನನ್ನ ಸೀನಿಯರ್ ವಿದ್ಯಾರ್ಥಿಗಳ ಪುಸ್ತಕ ಪಡೆಯುತ್ತಿದೆ ಎಂದು ಹೇಳಿದರು.
ಎಲ್ಲಿಂದ ಸ್ಫೂರ್ತಿ ಪಡೆದದ್ದು ನೀವು ಎಂದಾಗ? ನಾನು ಎದುರಿಸಿದ ಸಂಕಷ್ಟಗಳು ನಮ್ಮ ಕುಟುಂಬದವರಿಗೆ, ಬುಡಕಟ್ಟು ಸಮುದಾಯಕ್ಕೆ ಬರಬಾರದು ಎಂಬ ಉದ್ದೇಶ ನನ್ನದು ಎಂದು ಹೇಳಿದ್ದಾರೆ. ಬುಡಕಟ್ಟು ಜನರ ಬಗ್ಗೆ ಹೇಳುವುದಾದರೆ, ನಾವು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಮತ್ತು ನಾನು ಸೇರಿರುವ ಸ್ಥಳ, ಇಲ್ಲಿನ ಜನರು ಹೆಚ್ಚಾಗಿ ವಿದ್ಯುತ್ ಮತ್ತು ಸಂಪರ್ಕದ ಸಮಸ್ಯೆಯನ್ನು ಎದುರಿಸುತ್ತಾರೆ. ಹಾಗಾಗಿ ಈ ಜನರಿಗಾಗಿ ಏನಾದರೂ ಮಾಡಬೇಕು ಎಂಬುದು ನನ್ನ ಮನಸ್ಸಿನಲ್ಲಿದೆ. ನನ್ನ ಪ್ರಯಾಣಕ್ಕೆ ನನ್ನ ಸಹೋದರ ಮತ್ತು ತಾಯಿ ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಬೆಂಬಲಿಸಿದರು.
ವಿದ್ಯೆ ಪಡೆಯದ ನನ್ನ ತಾಯಿ ನನ್ನನ್ನು ಓದಲು ನೂಕುತ್ತಿದ್ದರು. ಇಂದಿಗೂ ಕೂಡ ನನ್ನೆಲ್ಲಾ ಕೆಲಸಗಳಿಗೂ ಕುಟುಂಬದಿಂದ ಅಪಾರ ಬೆಂಬಲವಿದೆ ಎಂದು ಹೇಳಿದರು. ತುಫೈಲ್ ಅಹ್ಮದ್ ಅವರ ಸಹೋದರ, ಇದು ಕುಟುಂಬ ಮತ್ತು ಇಡೀ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ. ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರೂ ನನ್ನ ಸಹೋದರ ಆ ಕಷ್ಟಗಳನ್ನು ಮೀರಿಸಿ ಜಯಶಾಲಿಯಾಗಿದ್ದಾರೆ.
ನಾವು ತುಂಬಾ ಸಂತೋಷವಾಗಿದ್ದೇವೆ. ಇದು ಸಂಭವಿಸುತ್ತೆ ಎಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಆದರೆ ಅದನ್ನು ಕುಟುಂಬದ ಬೆಂಬಲ ಮತ್ತು ಅವರ ಶ್ರಮದಿಂದ ಸಾಧಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.