ತೃತೀಯ ಟೆಸ್ಟ್: ಆಸ್ಟ್ರೇಲಿಯಾ 338ಕ್ಕೆ ಆಲೌಟ್; ದಿನದಂತ್ಯಕ್ಕೆ ಭಾರತ 96ಕ್ಕೆ 2

ಸಿಡ್ನಿ, ಜ. 08: ಅತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ
2ನೇ ದಿನದ ಗೌರವ ತನ್ನದಾಗಿಸಿಕೊಂಡಿತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದ ಮುಂದುವರಿಸಿದ ಆಸ್ಟ್ರೇಲಿಯಾ, ಸ್ಟೀವ್ ಸ್ಮಿತ್(131) ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್‌ಗಳಿಸಿತು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ(26) ಮತ್ತು ಶುಭ್ಮನ್ ಗಿಲ್(50) ಜೋಡಿ ಮೊದಲ ವಿಕೆಟ್ ಗೆ 70 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 26 ರನ್ ರಳಿಸಿದ್ದ ರೋಹಿತ್ ಶರ್ಮಾ ಹೇಜಲ್ ವುಡ್ ಬೌಲಿಂಗ್ ಕ್ಯಾಚ್ ನೀಡಿ ಹೊರ ನಡೆದರು.

ಬಳಿಕ ಪೂಜಾರ ಜೊತೆ ಗೂಡಿದ ಶುಭ್ ಮನ್ ಗಿಲ್ ಅರ್ಧಶತಕ ಗಳಿಸಿ ತಂಡವನ್ನು ಆಘಾತದಿಂದ ಮೇಲೆತ್ತಿದರು. ಆದರೆ  ಅರ್ಧಶತಕ ದಾಟುತ್ತಲೇ ಗಿಲ್ ಕಮಿನ್ಸ್ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿದ್ದ ಗ್ರೀನ್ ಗೆ ಕ್ಯಾಚ್ ನೀಡಿ ಔಟಾದರು. ದಿನದ ಅಂತ್ಯದಲ್ಲಿ ಪೂಜಾರ ಜೊತೆಗೂಡಿದ ರಹಾನೆ ಭಾರತ ತಂಡಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಂಡರು. ರಕ್ಷಣಾತ್ಮಕ ಆಟವಾಡಿದ ಈ ಜೋಡಿ 11 ರನ್ ಗಳಿಸಿತು.ದಿನದಂತ್ಯಕ್ಕೆ ಪೂಜಾರ(9) ಹಾಗೂ ರಹಾನೆ(5) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು,
2 ವಿಕೆಟ್ ಕಳೆದುಕೊಂಡು 96 ರನ್‌ಗಳಿಸಿರುವ ಭಾರತ, ಇನ್ನೂ 242 ರನ್‌ಗಳ ಹಿನ್ನಡೆಯಲ್ಲಿದೆ.

Exit mobile version